“ಪಾರು” ಮಕ್ಕಳ ಸಿನಿಮಾ, ರಾಜ್ಯದ ಎಲ್ಲ ಮಕ್ಕಳು ವೀಕ್ಷಿಸಲು ಅವಕಾಶಕ್ಕಾಗಿ ಕೋರಿಕೆ
ಬೆಂಗಳೂರು | 23 ನವೆಂಬರ್ 2020 | ಡಿಜಿ ಮಲೆನಾಡು.ಕಾಂ
ಮೂಲ ಹಕ್ಕುಗಳಿಂದ ವಂಚಿತರಾದ ಮಕ್ಕಳಿಗೆ ಅವರ ಹಕ್ಕುಗಳನ್ನು ದೊರಕಿಸಿಕೊಡುವ ಪ್ರೇರಣಾತ್ಮಕ ಮಕ್ಕಳ ಚಲನಚಿತ್ರ “ಪಾರು” ಸಿನಿಮಾವನ್ನು ರಾಜ್ಯದ ಎಲ್ಲ ಮಕ್ಕಳು ವೀಕ್ಷಿಸಲು ಶಿಫಾರಸ್ಸು ಮಾಡುವಂತೆ ಅನುಮತಿ ಕೋರಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಿಗೆ ಸಿನಿಮಾ ನಿರ್ದೇಶಕ, ನಿರ್ಮಾಪಕ ಹನ್ಮಂತ್ ಪೂಜಾರ್ ಪತ್ರ ಬರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್ ಬುಕ್ ಪೇಜ್ ಲೈಕ್ ಮಾಡಿ www.facebook.com/digimalenadu
ಮಕ್ಕಳ ಮೂಲ ಹಕ್ಕುಗಳಾದ ಜೀವಿಸುವ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ರಕ್ಷಣೆಯ ಹಕ್ಕು ಮತ್ತು ಭಾಗವಹಿಸುವ ಹಕ್ಕುಗಳಿಂದ ವಂಚಿತರಾದ ಮಕ್ಕಳಿಗೆ ಅವರ ಹಕ್ಕುಗಳನ್ನು ದೊರಕಿಸಿ ಕೊಡುವಂತಹ ಪ್ರೇರಣಾತ್ಮಕ “ಪಾರು” ಚಲನಚಿತ್ರವನ್ನು ರಾಜ್ಯದ ಎಲ್ಲ ಮಕ್ಕಳು ವೀಕ್ಷಿಸಬೇಕೆಂಬುದು ನಿರ್ದೇಶಕರ ಆಶಯ.
ಪಾರು ಸಿನಿಮಾದ ಕಥೆಯ ಎಳೆ?: ಸೂಕ್ಷ್ಮ ಹಾಗೂ ಮುಗ್ಧ ಮನಸ್ಸುಗಳ ಗೊಂದಲ, ವಿದ್ಯಾಭ್ಯಾಸದ ಹಂಬಲ ಹಾಗೂ ತಮಗೆ ಆಗುವ ತಳಮಳ, ತೊಂದರೆಗಳ ಮಧ್ಯೆಯೂ ಛಲದಿಂದ ಗುರಿ ಸಾಧಿಸುವ ಬಡ ಕುಟುಂಬದ ಹುಡುಕಿಯೊಬ್ಬಳು ಜಿಲ್ಲಾಧಿಕಾರಿಯಾಗುವ ಪ್ರೇರಣಾತ್ಮಕ ಸಿನಿಮಾ.
ನಿರ್ದೇಶಕರ ಬಗ್ಗೆ: ನೀನಾಸಂನಲ್ಲಿ ತರಬೇತಿ ಪಡೆದಿರುವ ಹನ್ಮಂತ್ ಪೂಜಾರ್, ಮಕ್ಕಳ ರಂಗಭೂಮಿಯಲ್ಲಿ 10 ವರ್ಷ ಅನುಭವ ಹೊಂದಿದ್ದಾರೆ. ಮಕ್ಕಳ ಹಕ್ಕುಗಳ ಕುರಿತಾಗಿ ಸಿನಿಮಾ ಮಾಡಿದ್ದಾರೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್: [email protected]