ಸಿವಿಲ್ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗ ಜಗತ್ತು Job World | 5 ಏಪ್ರಿಲ್ 2022 | ಡಿಜಿ ಮಲೆನಾಡು.ಕಾಂ
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಸಹಾಯಕ ಅಭಿಯಂತರರು ಗ್ರೇಡ್-1(ಸಿವಿಲ್), ಕಿರಿಯ ಅಭಿಯಂತರರು(ಸಿವಿಲ್), ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿ, ಕ್ರೀಡೆ ಮತ್ತು ಸಿನಿಮಾ ಕುರಿತ ಸುದ್ದಿ ನೀಡುವ ಫೇಸ್‌ಬುಕ್ ಪೇಜ್ : ಡಿಜಿ ಮಲೆನಾಡು : www.facebook.com/digimalenadu
ವಿದ್ಯಾರ್ಹತೆ: ಸಹಾಯಕ ಅಭಿಯಂತರರು ಗ್ರೇಡ್-1(ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ಪದವಿ, ಕಿರಿಯ ಅಭಿಯಂತರರು(ಸಿವಿಲ್) ಹುದ್ದೆಗೆ ಸಿವಿಲ್ ಡಿಪ್ಲೋಮಾ ಕೋರ್ಸ್, ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಪದವಿ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ದ್ವಿತೀಯ ಪಿಯು ಉತ್ತೀರ್ಣ ಆಗಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಹುದ್ದೆಗಳ ಸಂಖ್ಯೆ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಖಾಲಿ ಇರುವ ಒಟ್ಟು 76 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಅಭಿಯಂತರರು ಗ್ರೇಡ್-1(ಸಿವಿಲ್) – 43 ( ಮಾಸಿಕ ವೇತನ 43,100 ರೂ.-83,900 ರೂ.), ಕಿರಿಯ ಅಭಿಯಂತರರು(ಸಿವಿಲ್) 18 ( ಮಾಸಿಕ ವೇತನ 33,450 ರೂ. – 62,600 ರೂ.), ಪ್ರಥಮ ದರ್ಜೆ ಸಹಾಯಕರು – 5 ( ಮಾಸಿಕ ವೇತನ 27,650 ರೂ.-52,650 ರೂ.), ದ್ವಿತೀಯ ದರ್ಜೆ ಸಹಾಯಕರ ಹುದ್ದೆ – 10 ( ಮಾಸಿಕ ವೇತನ 21,400 ರೂ.-42,000 ರೂ.).
ಡಿಜಿ ಮಲೆನಾಡು.ಕಾಂ | ಜಾಹಿರಾತು ಮೊಬೈಲ್ ಸಂಖ್ಯೆ: 9449422942
ಇ-ಮೇಲ್ : [email protected]
ಅರ್ಜಿ ಶುಲ್ಕ, ವಿಧಾನ, ಕಡೇ ದಿನಾಂಕ: 2022ರ ಏ. 20ರಂದು ಅರ್ಜಿ ಸಲ್ಲಿಕೆಗೆ ಕಡೇ ದಿನ ಆಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಲಿಂಕ್: https://karnemaka.kar.nic.in/kea_2022/ . ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 375 ರೂ. ಹಾಗೂ ಇತರೆ ಅಭ್ಯರ್ಥಿಗಳಿಗೆ 700 ರೂ. ಅರ್ಜಿ ಶುಲ್ಕ ಪಾವತಿಸಬೇಕಿದೆ.
ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ನೇಮಕಾತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಫೇಸ್‌ಬುಕ್ ಪೇಜ್ : ಉದ್ಯೋಗ ಜಗತ್ತು Job World : www.facebook.com/jobworldkarnataka ಪ್ರತಿ ದಿನ ನಿರಂತರವಾಗಿ ಉದ್ಯೋಗ ಮಾಹಿತಿ ಪಡೆಯಲು ನಮ್ಮ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ನಂತರ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ವಯೋಮಿತಿ, ಹುದ್ದೆಗಳ ವಿವರ, ಪರೀಕ್ಷಾ ವಿಧಾನ, ಅರ್ಹತಾ ಷರತ್ತುಗಳು ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ ಉದ್ಯೋಗ ನೇಮಕಾತಿ ಪ್ರಕಟಣೆಯ ಲಿಂಕ್ ಕ್ಲಿಕ್ ಮಾಡಿ: https://cetonline.karnataka.gov.in/kea/kridl2022