ಕೌಶಲ್ಯ ಕಲಿಕೆಯಿಂದ ಸದೃಢ ಭಾರತ ನಿರ್ಮಾಣ
ಶಿವಮೊಗ್ಗ | 12 ಸೆಪ್ಟೆಂಬರ್ 2022 | ಡಿಜಿ ಮಲೆನಾಡು.ಕಾಂ
ಪರಂಪರೆಯಿಂದ ಬಂದಿರುವ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೂ ಕಲಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಶ್ರೀರಂಜನಿ ದತ್ತಾತ್ರಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಶಿವಮೊಗ್ಗ ನಗರದ ಆಕಾಶ್ ಇನ್ ಹೊಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಜೆಸಿ ಸಪ್ತಾಹದ ಉದ್ಘಾಟನಾ ಸಮಾರಂಭ ಹಾಗೂ ಮಹಿಳಾ ಕೌಶಲ್ಯ ಅಭಿವೃದ್ದಿ ಕಾರ್ಯಾಗಾರ ಹಾಗೂ ಮಹಿಳಾ ಉದ್ಯಮಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ಹೊಂದಿರುವ ಭಾರತ ದೇಶದಲ್ಲಿ ಅನೇಕ ಕೌಶಲ್ಯಗಳು ತಲೆಮಾರಿನಿಂದ ತಲೆಮಾರಿಗೆ ಬರುತ್ತಿದೆ. ಅಪರೂಪದ ಕೌಶಲ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಪ್ರಧಾನಿ ಮೋದಿ ಆಶಯದಂತೆ ಕೌಶಲ್ಯಭರಿತ ಸದೃಢ ಭಾರತ ರೂಪುಗೊಳ್ಳಬೇಕಿದೆ ಎಂದು ತಿಳಿಸಿದರು.
ಭಾರತದ ಪಾರಂಪರಿಕತೆಯಲ್ಲಿ ಇವತ್ತಿಗೂ ಬೆಳಕಿಗೆ ಬಾರದ ಅದೆಷ್ಟೋ ಅಸಾಧಾರಣ ಕೌಶಲ್ಯಗಳಿವೆ. ಅವುಗಳನ್ನು ಸಂಶೋಧಿಸಿ ಬೆಳಕಿಗೆ ತರುವ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ. ಜೆಸಿ ಸಂಸ್ಥೆಯ ಉದ್ದೇಶ ಕೂಡ ವ್ಯಕ್ತಿಯ ವ್ಯಕ್ತಿತ್ವವನ್ನು ಹೊಳಪುಗೊಳಿಸುವ ತರಬೇತಿ ನೀಡಿ, ಕೌಶಲ್ಯ ಭರಿತ ವ್ಯಕ್ತಿಗಳಿಂದ ಸಮಾಜ ರೂಪಿಸಿ, ಸದೃಢ ಸಮಾಜ ರೂಪಿಸುವುದೇ ಆಗಿದೆ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ನಮ್ಮ ಸಂಸ್ಥೆ ನಿರಂತರವಾಗಿ ಸಮಾಜಮುಖಿ ಹಾಗೂ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಉಮಾ ವೆಂಕಟೇಶ್, ನಮಿತಾ ಸರ್ಜಿ, ಸುಮತಿ ಕುಮಾರ ಸ್ವಾಮಿ ಹಾಗೂ ನಮಿತಾ ಸೂರ್ಯನಾರಾಯಣ ಅವರನ್ನು ಸನ್ಮಾನಿಲಾಯಿತು.
ಜೆಸಿಐ ಸಹ್ಯಾದ್ರಿ ಸಂಸ್ಥಾಪಕ ಅಧ್ಯಕ್ಷ ಹರೀಶ್, ವಲಯ ನಿರ್ದೇಶಕ ಅನೂಷ್‌ಗೌಡ, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಮಧುರಾ ಮಹೇಶ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಜೆಸಿಐ ಸಹ್ಯಾದ್ರಿ ಕಾರ್ಯದರ್ಶಿ ಸಂತೋಷ್ ಕುಮಾರ್, ಸುಷ್ಮಾ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.