ನೀವು ಕಟ್ಟಡ ಕಾರ್ಮಿಕರೇ, ನೋಂದಾಯಿತ ಕಾರ್ಮಿಕ ಗುರುತೀನ ಚೀಟಿ ಹೊಂದಿದ್ದೀರಾ?, ನಿಮಗೆ ಸಿಗಲಿದೆ ಉಚಿತ ಬಸ್‌ ಪಾಸ್‌ ಸೌಲಭ್ಯ

ನೀವು ಕಟ್ಟಡ ಕಾರ್ಮಿಕರೇ, ನೋಂದಾಯಿತ ಕಾರ್ಮಿಕ ಗುರುತೀನ ಚೀಟಿ ಹೊಂದಿದ್ದೀರಾ?, ನಿಮಗೆ ಸಿಗಲಿದೆ ಉಚಿತ ಬಸ್‌ ಪಾಸ್‌ ಸೌಲಭ್ಯ

ಶಿವಮೊಗ್ಗ | 07 ಅಕ್ಟೋಬರ್ 2022 | ಡಿಜಿ ಮಲೆನಾಡು.ಕಾಂ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಉಚಿತ ಬಸ್‌ ಪಾಸ್‌ ಸೌಲಭ್ಯ ಸಿಗಲಿದೆ.‌

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ವಿಭಾಗದ ವತಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿನ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್‌ ಪಾಸ್‌ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಮೀಪದ ಗ್ರಾಮ ಸೇವಾ ಒನ್‌ ಹಾಗೂ ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉಚಿತ ಬಸ್‌ ಪಾಸ್‌ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿಯೊಂದಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಪಡೆದ ಗುರುತೀನ ಚೀಟಿ, ಆಧಾರ್‌ ಕಾರ್ಡ್‌ ಸಲ್ಲಿಸಬೇಕು. ಸ್ಮಾರ್ಟ್‌ ಕಾರ್ಡ್‌ ಮಾದರಿಯ ಬಸ್‌ ಪಾಸ್‌ಗಳನ್ನು ಪಡೆಯಬಹುದು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಬಸ್‌ ಪಾಸ್‌ಗಾಗಿ ಅರ್ಜಿ ಸಲ್ಲಿಸುವ ಕಾರ್ಮಿಕರು ಕಡ್ಡಾಯವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಆಗಿರಬೇಕು. ನೋಂದಣಿ ಚಾಲ್ತಿ ಇರಬೇಕು. ನಗರ, ಸಾಮಾನ್ಯ/ಹೊರವಲಯ ಹಾಗೂ ವೇಗದೂತ ಬಸ್‌ಗಳಲ್ಲಿ ಸಂಚರಿಸಬಹುದು. ಉಚಿತ ಬಸ್‌ ಪಾಸ್‌ನಲ್ಲಿ ನಮೂದಿಸಲಾದ ಆರಂಭಿಕ ಸ್ಥಳದಿಂದ 7 ಹಂತವಗಳವರೆಗೆ ( ಗರಿಷ್ಠ 45 ಕೀಮಿ ) ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುತ್ತದೆ.

ಉಚಿತ ಬಸ್‌ ಪಾಸ್‌ ಅವಧಿ ಮೂರು ತಿಂಗಳು ಆಗಿರುತ್ತದೆ. ಮಾನ್ಯತಾ ಅವಧಿ ಮುಕ್ತಾಯ ಆಗುವ 15ದಿನಕ್ಕಿಂತ ಮುಂಚೆ ಮರುಅವಧಿಗೆ ಅರ್ಜಿ ಸಲ್ಲಿಸಿ ಸೇವಾಸಿಂಧು ಪೋರ್ಟಲ್‌ ಮುಖಾಂತರ ಬಸ್‌ ಪಾಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ವಿಳಾಸ ಬದಲಾಯಿಸಿಕೊಳ್ಳಲು ಅವಕಾಶ ಇರಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

digimalenadu

ಶಿವಮೊಗ್ಗ
error: Content is protected !!