“ನಿನ್ನೆ ನಿನ್ನೆಗೆ, ಇಂದು ಇಂದಿಗೆ” ಕೃತಿಗೆ ಡಾ. ಸುನಂದಾ ಆರ್ ಕುಲಕರ್ಣಿ ಶ್ರೇಷ್ಠ ಸಾಹಿತ್ಯ ಹಸ್ತ ಪ್ರತಿ ಪ್ರಶಸ್ತಿ, ಲೇಖಕಿ ಡಾ. ವಿನಯ ಶ್ರೀನಿವಾಸ್ ಅವರಿಗೆ ಸನ್ಮಾನ

ಶಿವಮೊಗ್ಗ | 1 ನವೆಂಬರ್ 2022 | ಡಿಜಿ ಮಲೆನಾಡು.ಕಾಂ
ಲೇಖಕಿ ಡಾ. ವಿನಯ ಶ್ರೀನಿವಾಸ್ ಅವರ “ನಿನ್ನೆ ನಿನ್ನೆಗೆ, ಇಂದು ಇಂದಿಗೆ” ಕೃತಿಗೆ ಡಾ. ಸುನಂದಾ ಆರ್ ಕುಲಕರ್ಣಿ ಶ್ರೇಷ್ಠ ಸಾಹಿತ್ಯ ಹಸ್ತ ಪ್ರತಿ ಪ್ರಶಸ್ತಿ ಲಭಿಸಿದೆ
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಭಾರತೀಯ ವೈದ್ಯ ಸಂಘ, ಕನ್ನಡ ವೈದ್ಯ ಬರಹಗಾರರ ಬಳಗದ ಪ್ರಸ್ತಕ ಸಾಲಿನ ಡಾ. ಸುನಂದಾ ಆರ್ ಕುಲಕರ್ಣಿ ಶ್ರೇಷ್ಠ ಸಾಹಿತ್ಯ ಹಸ್ತ ಪ್ರತಿ ಪ್ರಶಸ್ತಿಯು ಸುಬ್ಬಯ್ಯ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ವಿನಯ ಶ್ರೀನಿವಾಸ್ ಅವರ ‘ನಿನ್ನೆ ನಿನ್ನೆಗೆ, ಇಂದು ಇಂದಿಗೆ’ ಕೃತಿ( ಹಸ್ತ ಪ್ರತಿ)ಗೆ ಲಭಿಸಿದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : digimalenadu@gmail.com
ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ನಡೆದ ಭಾರತೀಯ ವೈದ್ಯ ಸಂಘದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಡಾ. ವಿನಯ ಶ್ರೀನಿವಾಸ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸ್ಮರಣಿಕೆ ಹಾಗೂ ಐದು ಸಾವಿರ ರೂ. ನಗದು ಪುರಸ್ಕಾರ ಒಳಗೊಂಡಿತ್ತು.