ಗುರುಪೀಠ, ಮಠಗಳಿಂದ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುವ ಸತ್ಕಾರ್ಯ

ಗುರುಪೀಠ, ಮಠಗಳಿಂದ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುವ ಸತ್ಕಾರ್ಯ

ಶಿವಮೊಗ್ಗ | 8 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ಗುರುಪೀಠಗಳು ಮತ್ತು ಮಠ ಪರಂಪರೆಯು ಸಮಾಜದಲ್ಲಿ ಧರ್ಮ ಜಾಗೃತಿ ಮೂಲಕ ಒಳ್ಳೆಯ ಚಿಂತನೆಗಳನ್ನು ಸಾರುವ ಕೆಲಸ ಮಾಡುತ್ತಿದೆ ಎಂದು‌ ಕಾಶಿ ಪೀಠದ ಜಂಗಮವಾಡಿ ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ವಿನೋಬಗರದ ಶ್ರೀ ಶಿವಾಲಯ ದೇವಸ್ಥಾನದ ಆವರಣದಲ್ಲಿ ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ವತಿಯಿಂದ 4ನೇ ವರ್ಷದ ಕಳಸಾರೋಹಣ ವಾರ್ಷಿಕೋತ್ಸವ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮ ಮತ್ತು ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.

ಹಿಂದೂ ಧರ್ಮದ ಶ್ರೇಷ್ಠ ಪರಂಪರೆ, ನಮ್ಮ ಸಂಸ್ಕೃತಿ ಮಹತ್ವವನ್ನು ಜನರಿಗೆ ತಲುಪಿಸುವ ಸತ್ಕಾರ್ಯವನ್ನು ಮಠಗಳು ಮಾಡುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದೊಯ್ಯಬೇಕು. ಹಿರಿಯರು ಧರ್ಮ ಪಾಲನೆ ಹೇಗೆ ಮಾಡುತ್ತಾರೋ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಇಂತಹ ಧಾರ್ಮಿಕ ಕಾರ್ಯ ಹಾಗೂ ಧರ್ಮ ಚಿಂತನೆ ಬಗ್ಗೆ ಮಕ್ಕಳಿಗೆ ‌ಅರಿವು‌ ಮಾಡಿಸಬೇಕು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಭಾರತೀಯ ಶ್ರೇಷ್ಠ ಗುರುಗಳ ಮಾರ್ಗದರ್ಶನ ಹಾಗೂ ಜಾಗೃತಿಯಿಂದ ಹಿಂದೂ ಧರ್ಮದ ಶ್ರೇಷ್ಠತೆ ವಿಶ್ವಾದ್ಯಂತ ಪ್ರಖ್ಯಾತಿ ಆಗಿದೆ. ಧರ್ಮ ಜಾಗೃತಿ ಹಾಗೂ ಆರ್ಶೀವಚನ ಪ್ರತಿಯೊಬ್ಬರ ಜೀವನವನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಗುರುಗಳಿಗೆ ಸನಾತನ ಸಂಸ್ಕೃತಿಯಲ್ಲಿ ಮಹತ್ತರ ‌ಸ್ಥಾನ ನೀಡಿದ್ದು, ಗುರು ಪರಂಪರೆ ಸ್ಥಾನಕ್ಕೆ ಅಗೌರವ ತರುವಂತೆ ಗುರುಗಳು ಹಾಗೂ ಅವರ ಶಿಷ್ಯರು ವರ್ತಿಸಬಾರದು. ಗುರುಗಳಿಲ್ಲದೇ ಪರಂಪರೆ ಇಲ್ಲ. ನಮ್ಮ ಸ್ವಾಮೀಜಿ, ಮಠ, ಪೀಠಗಳನ್ನು ನಾವೆಲ್ಲರೂ ಧರ್ಮ ಜಾಗೃತರಾಗಿ ಉಳಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠ ಶ್ರೀ ಡಾ. ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಕವಲೇದುರ್ಗ ಕೆಳದಿ ರಾಜಗುರು ಮಹಾಸಂಸ್ಥಾನ ಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಮಾಜಿ‌ ಶಾಸಕ ಎಚ್.ಎಂ.ಚಂದ್ರಶೇಖರ್, ಶ್ರೀ ಬಸವೇಶ್ವರ ವೀರಶೈವ ಸಮಾಜ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಗೌರವ ಕಾರ್ಯದರ್ಶಿ ಎಸ್.ಪಿ.ದಿನೇಶ್, ಎನ್.ಜೆ.ರಾಜಶೇಖರ್, ಕೆ.ಇ.ಕಾಂತೇಶ್, ಎಸ್.ಎನ್.ರುದ್ರಮುನಿ, ಜಿ.ಬೆನಕಪ್ಪ, ಡಿ.ವಿಶ್ವಾಸ್, ಅನಿತಾ ರವಿಶಂಕರ್, ಆಶಾ ಚಂದ್ರಪ್ಪ, ಎಚ್.ಸಿ.ಯೋಗೀಶ್, ಮಹಾಲಿಂಗಶಾಸ್ತ್ರಿ, ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಎಸ್.ಮುರುಗೇಶ್‌ ಕೂಸನೂರು, ಸಹ ಕಾರ್ಯದರ್ಶಿ ಮಹೇಶಮೂರ್ತಿ ಸಿ.ಹುಂಬಿ, ಪ್ರಧಾನ ಅರ್ಚಕ ಎಚ್.ಎಂ.ರುದ್ರಯ್ಯ ಶಾಸ್ತ್ರಿ, ಸಾಕಮ್ಮ, ಉಮೇಶ ಹಿರೇಮಠ, ಟಿ.ಎನ್.ಮಂಜಪ್ಪ, ಎ.ಎಂ.ಚಂದ್ರಯ್ಯ, ಕೆ.ವಿರೇಶ್, ಸಿ.ಆರ್.ನಂದಿಬಸಪ್ಪ, ಜಿ.ಎಸ್.ಮಲ್ಲಿಕಾರ್ಜುನ, ಹೆಚ್.ಕೆ.ಚಂದ್ರೇಗೌಡ, ಡಿ.ಆರ್.ಪುಟ್ಟಪ್ಪ, ಕೆ.ಕೊಟ್ರಪ್ಪ, ಎಸ್.ನಾಗರಾಜಯ್ಯ, ಎಂ.ಎನ್.ಪುನೀತ್, ಕೆ.ಸಂಪತ್‌ಕುಮಾರ್‌, ಎಚ್.ಎಂ.ವಿನಯ ಶಾಸ್ತ್ರಿ, ಹಾಜರಿದ್ದರು.

digimalenadu

ಶಿವಮೊಗ್ಗ
error: Content is protected !!