ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ದಶಮಾನೋತ್ಸವ ನವೆಂಬರ್ 12ಕ್ಕೆ
ಶಿವಮೊಗ್ಗ | 11 ನವೆಂಬರ್ 2022 | ಡಿಜಿ ಮಲೆನಾಡು.ಕಾಂ
ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ವತಿಯಿಂದ ನಗರದ ರಾಯಲ್ ಆರ್ಕಿಡ್‌ನಲ್ಲಿ ನವೆಂಬರ್ 12ರ ಸಂಜೆ 6ಕ್ಕೆ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ (ಐಐಎಫ್) ಶಿವಮೊಗ್ಗ ಘಟಕವು 2012ರಲ್ಲಿ 55 ಸದಸ್ಯರು ಹಾಗೂ 9 ಕಂಪನಿ ಸದಸ್ಯರೊಂದಿಗೆ ಆರಂಭವಾಯಿತು. ಫೌಂಡ್ರಿಗಳ ವ್ಯವಹಾರವನ್ನು ಅಭಿವೃದ್ಧಿಪಡಿಸುವುದು ಹಾಗೂ ಸುಧಾರಿಸುವುದು. ಶಿವಮೊಗ್ಗದ ಫೌಂಡ್ರಿಗಳ ತಂತ್ರಜ್ಞಾನ, ಜ್ಞಾನ ಹಾಗೂ ಕೌಶಲ್ಯಗಳನ್ನು ಸುಧಾರಿಸುವುದು ಐಐಎಫ್ ಶಿವಮೊಗ್ಗ ಘಟಕದ ಪ್ರಮುಖ ಉದ್ದೇಶವಾಗಿದೆ.
ಹತ್ತು ವರ್ಷಗಳಲ್ಲಿ ಐಐಎಫ್ ಶಿವಮೊಗ್ಗ ಘಟಕವು ವೈವಿಧ್ಯ ಚಟುವಟಿಕೆ, ಕಾರ್ಯಾಗಾರ, ಖರೀದಿಗಾರರು ಮತ್ತು ಮಾರಾಟಗಾರರ ಸಭೆ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಸ್ತುತ ಐಐಎಫ್ ಶಿವಮೊಗ್ಗ ಘಟಕವು 115 ಸದಸ್ಯರು ಹಾಗೂ ಎರಡು ವಿದ್ಯಾರ್ಥಿ ವಿಭಾಗಗಳನ್ನು ಹೊಂದುವ ಜತೆಯಲ್ಲಿ ಬೃಹತ್ ಆಗಿ ಬೆಳೆದಿದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ನವೆಂಬರ್ 12ರ ಸಂಜೆ 6ಕ್ಕೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಐಐಎಫ್ ದಕ್ಷಿಣ ವಲಯ ಚೇರ್ಮನ್ ಮುತ್ತುಕುಮಾರ್, ಐಐಎಫ್ ಖಜಾಂಚಿ ಎಸ್.ಕುಪ್ಪುಸ್ವಾಮಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಹೆಗ್ಡೆ, ಶಾಂತಲಾ ಸಮೂಹ ಸಂಸ್ಥೆ ಚೇರ್ಮನ್ ಎಸ್.ರುದ್ರೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಐಐಎಫ್ ಶಿವಮೊಗ್ಗ ಘಟಕದ ನಿಕಟಪೂರ್ವ ಚೇರ್ಮನ್ ಶ್ರೀನಾಥ್ ಗಿರಿಮಾಜಿ, ಐಐಎಫ್ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಐಐಎಫ್ ದಕ್ಷಿಣ ವಲಯ ಗೌರವ ಕಾರ್ಯದರ್ಶಿ ಡಿ.ಜಿ.ಬೆನಕಪ್ಪ , ಐಐಎಫ್ ಶಿವಮೊಗ್ಗ ಘಟಕದ ಅಧ್ಯಕ್ಷ ಟಿ.ಎನ್.ಪರಮೇಶ್ವರ್, ಐಐಎಫ್ ಶಿವಮೊಗ್ಗ ಘಟಕದ ಗೌರವ ಕಾರ್ಯದರ್ಶಿ ಎಂ.ವಿ.ರಾಘವೇಂದ್ರ ಉಪಸ್ಥಿತರಿರುವರು.
ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಘಟಕದ ದಶಮಾನೋತ್ಸವ ಕಾರ್ಯಕ್ರಮ ಪ್ರಯುಕ್ತ ನವೆಂಬರ್ 12ರ ಬೆಳಗ್ಗೆ 9.30ರಿಂದ ಸಂಜೆ 6ರ ವರೆಗೆ ತಾಂತ್ರಿಕ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಶ್ರೀನಿವಾಸಮೂರ್ತಿ, ಡಾ. ರಜನಿ ಪೈ, ತರುಣ್ ಸೆನಗಲ್, ರವಿಕುಮಾರ್ ಸೇರಿದಂತೆ ವಿವಿಧ ಗಣ್ಯರು ಉಪನ್ಯಾಸ ನೀಡಲಿದ್ದಾರೆ.