ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ವೀರಶೈವ ಸಾಂಸ್ಕೃತಿಕ ಭವನ ಲೋಕಾರ್ಪಣೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಂದ ವೀರಶೈವ ಸಾಂಸ್ಕೃತಿಕ ಭವನ ಲೋಕಾರ್ಪಣೆ

ಶಿವಮೊಗ್ಗ | 19 ನವೆಂಬರ್ 2022 | ಡಿಜಿ ಮಲೆನಾಡು.ಕಾಂ

ವೀರಶೈವ ಧರ್ಮದ ಗುರುಪೀಠ ಸ್ವಧರ್ಮ ನಿಷ್ಠೆ ಹಾಗೂ ಪರಧರ್ಮ ಸಹಿಷ್ಣುತೆ ಹೊಂದಬೇಕು ಎನ್ನುವ ಉದಾತ್ತ ಚಿಂತನೆಯೊಂದಿಗೆ ಧರ್ಮ ಕಾರ್ಯ ನಡೆಸುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶ್ರೀ ವೀರಶೈವ ಕಲ್ಯಾಣ ಮಂದಿರ ವತಿಯಿಂದ ಶಿವಮೊಗ್ಗ ನಗರದ ಜೆ.ಎಚ್.ಪಟೇಲ್‌ ಬಡಾವಣೆಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವೀರಶೈವ ಸಾಂಸ್ಕೃತಿಕ ಭವನ ಲೋಕಾರ್ಪಣೆ‌ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸ್ವಾರ್ಥ ಚಿಂತನೆ ನಡೆಸದೇ, ಸಂಕುಚಿತ ಮನೋಭಾವ ಹೊಂದದೇ ತನ್ನೊಂದಿಗೆ ಎಲ್ಲ ಸಮಾಜವನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ವೀರಶೈವ ಸಮಾಜ ಮಾಡುತ್ತಿದೆ ಎಂದು ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಲ್ಲ ಸಮುದಾಯದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಸರ್ವ ಜನಾಂಗದ ಪ್ರಗತಿಗೆ ಶ್ರಮಿಸಿದ ನಾಯಕ ಬಿ.ಎಸ್.ಯಡಿಯೂರಪ್ಪ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ದೇಶದ ಎಲ್ಲ ಸಂಸದರಿಗಿಂತ ಹೆಚ್ಚಿನ ಅನುದಾನವನ್ನು ಶಿವಮೊಗ್ಗ ಕ್ಷೇತ್ರ ಕ್ಕೆ ತಂದಿದ್ದಾರೆ. ಶಿವಮೊಗ್ಗ ಜಿಲ್ಲೆ ಅಭಿವೃದ್ದಿ ಯಲ್ಲಿ ನಂಬರ್ ಒನ್ ಸ್ಥಾನ ಆಗಿಸಲು ಶ್ರಮಿಸುತ್ತಿದ್ದಾರೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವೀರಶೈವ ಸಾಂಸ್ಕೃತಿಕ ಪರಂಪರೆ ಹಾಗೂ ಆಚರಣೆ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಸರ್ವರ ಏಳಿಗೆ, ಸಹೋದರತ್ವ ಭಾವ ಹಾಗೂ ಮಾನವ ಕುಲದ ಸಮಗ್ರ ಅಭಿವೃದ್ಧಿ ಯನ್ನು ವೀರಶೈವ ಸಮಾಜ ಸಾರುತ್ತದೆ. ಪೂಜ್ಯರು ಹಾಗೂ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಸಮಾಜ ಮುಂದುವರೆಯಬೇಕು ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ವೀರಶೈವ ನಿಗಮ ಸ್ಥಾಪನೆ ಮಾಡಿದ್ದೇನೆ. ಶಿವಮೊಗ್ಗ ನಗರದ ಅಭಿವೃದ್ಧಿ ಗೆ ಸಂಪೂರ್ಣ ಶ್ರಮಿಸಿದ್ದೇನೆ. ಶಿವಮೊಗ್ಗ ನಗರ ಮತ್ತು ಜಿಲ್ಲೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರದಿಂದ ಹೆಚ್ಚಿನ ಅನುದಾನ ತಂದಿದ್ದು, ಮಾದರಿ ಜಿಲ್ಲೆಯಾಗಿ ರೂಪಿಸಲು ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ವೀರಶೈವ ಸಾಂಸ್ಕೃತಿಕ ಭವನವು ಸಮಾಜದ ದೊಡ್ಡ ಆಸ್ತಿ. ಸಮಾಜದ ಎಲ್ಲ ಬಂಧುಗಳ ಸಹಕಾರದಿಂದ ಭವನ ನಿರ್ಮಾಣ ಆಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಶ್ರೀ ವೀರಶೈವ ಕಲ್ಯಾಣ ಮಂದಿರದ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಎನ್.ಜೆ.ರಾಜಶೇಖರ್ ಮಾತನಾಡಿ, 1968 ರಲ್ಲಿ ವೀರಶೈವ ಮಂದಿರ ಆರಂಭಗೊಂಡು ಈವರೆಗೂ  ಸೇವಾ ಉದ್ದೇಶ ದಿಂದ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ವಾಗಿ ನಿರ್ಮಾಣ ಆಗಿರುವ ವೀರಶೈವ ಸಾಂಸ್ಕೃತಿಕ ಭವನ ಕೂಡ ಸೇವೆಯ ಆಶಯದಿಂದ ಕೆಲಸ ಮಾಡಲಿದೆ. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಬಿ.ವೈ.ರಾಘವೇಂದ್ರ ಸೇರಿದಂತೆ ಎಲ್ಲರ ಸಹಕಾರದಿಂದ ಭವನ ನಿರ್ಮಾಣ ಆಗಿದೆ ಎಂದರು.  ಒಂದು ಲಕ್ಷ ಹದಿಮೂರು ಸಾವಿ‌ರ ರೂ. ಪಾವತಿಸಿ ಸಾಂಸ್ಕೃತಿಕ ಭವನದಲ್ಲಿ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಬಹುದಾಗಿದೆ ಎಂದರು. ಶ್ರೀ ವೀರಶೈವ ಆಡಳಿತ ಮಂದಿರ ನಡೆದು ಬಂದ ಹಾದಿ ವಿವರಿಸಿದರು.

ಯಡಿಯೂರು ಕ್ಷೇತ್ರ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಮಳಲಿಮಠ ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಶ್ರೀ ವೀರಶೈವ ಕಲ್ಯಾಣ ಮಂದಿರ ಅಧ್ಯಕ್ಷ ಟಿ.ವಿ.ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ವೀರಶೈವ ಕಲ್ಯಾಣ ಮಂದಿರ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ.ಆರ್.ವೀರಣ್ಣ, ಎಸ್.ಎನ್.ರುದ್ರಮುನಿ, ಕೋಶಾಧ್ಯಕ್ಷ ಎಂ.ಎನ್.ಒಡೆಯರ್, ಸಹ ಕಾರ್ಯದರ್ಶಿ ಎಸ್.ಪಿ.ಜಗನ್ನಾಥ್, ನಿರ್ದೇಶಕರಾದ ಜೆ.ವಿರೂಪಾಕ್ಷಪ್ಪ, ಬಂಡಿಗಡೆ ಶಿವಲಿಂಗಪ್ಪ ಶೆಟ್ಟಿ, ಜಿ.ಯು.ಈಶಪ್ರಭು, ಹೆಚ್.ವಿ.ಸತೀಶ್, ಎನ್.ಜಿ.ಪರಮೇಶ್ವರಪ್ಪ, ಪಿ.ಎಸ್.ಹಾಲಸ್ವಾಮಿ, ಎಚ್.ಎಲ್.ರವಿ ಉಪಸ್ಥಿತರಿದ್ದರು.

ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಅಶೋಕ ನಾಯ್ಕ್, ವಿಧಾನ ಪರಿಷತ್ ಶಾಸಕರಾದ ಎಸ್.ರುದ್ರೇಗೌಡ, ಮೇಯರ್ ಎಸ್.ಶಿವಕುಮಾರ್, ಮಾಜಿ ಮೇಯರ್ ಸುನೀತಾ ಅಣ್ಣಪ್ಪ,  ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಜೆ.ನಾಗರಾಜ್, ಶ್ರೀ ಬಸವೇಶ್ವರ ಅಕಾಡೆಮಿ ಆಫ್ ಎಜುಕೇಷನ್ ಅಧ್ಯಕ್ಷ ಎಸ್.ಮಲ್ಲೇಶಪ್ಪ, ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ತಾರಾನಾಥ್, ಅಕಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮಹಾನಗರ ಪಾಲಿಕೆ ಸದಸ್ಯ ಆಶಾ ಚಂದ್ರಪ್ಪ, ಯೋಗೇಶ್, ಅನಿತಾ ರವಿಶಂಕರ್,  ಡಾ. ಧನಂಜಯ್ ಸರ್ಜಿ ಹಾಜರಿದ್ದರು.

digimalenadu

ಶಿವಮೊಗ್ಗ
error: Content is protected !!