ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ವಹಣೆಯ “ಸುರಭಿ ಗೋಶಾಲೆ”ಗೆ ನವೆಂಬರ್ 25ರಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ವಹಣೆಯ “ಸುರಭಿ ಗೋಶಾಲೆ”ಗೆ ನವೆಂಬರ್ 25ರಂದು ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

ಶಿವಮೊಗ್ಗ | 23 ನವೆಂಬರ್‌ 2022 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪದಲ್ಲಿ ಇರುವ ಸುರಭಿ ಗೋಶಾಲೆಗೆ ನವೆಂಬರ್‌ 25ರ ಸಂಜೆ 4.30ಕ್ಕೆ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ ನೀಡಿ ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ನಿರ್ವಹಣೆಯಲ್ಲಿ ಸುರಭಿ ಗೋಶಾಲೆ ನಡೆಯುತ್ತಿದ್ದು, ಪ್ರಸ್ತುತ 189 ಗೋವುಗಳು ಶಾಲೆಯಲ್ಲಿವೆ. ಗೋಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಗೋಸೇವೆಯ ಆಶಯದಿಂದ ಗೋಶಾಲೆಯು ಮುನ್ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುರಭಿ ಗೋಶಾಲೆಗೆ ನವೆಂಬರ್‌ 25ರ ಸಂಜೆ 4.30ಕ್ಕೆ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಗಮಿಸಲಿದ್ದಾರೆ. ಶ್ರೀಗಳು ಗೋಶಾಲೆ ವೀಕ್ಷಿಸಿ ನಂತರ ಗೋಪೂಜೆ ನೆರವೇರಿಸಲಿದ್ದಾರೆ. ನಂತರ ಆಗಮಿಸಿದ ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದರು.

ಸುರಭಿ ಗೋಶಾಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲ ಆಗುವಂತೆ ಶಿವಮೊಗ್ಗ ನಗರದ ಗೋಪಾಳ, ವಿನೋಬನಗರ ಹಾಗೂ ಬ್ರಾಹ್ಮಣ ವಿದ್ಯಾರ್ಥಿ ನಿಲಯದಿಂದ ನವೆಂಬರ್‌ 25ರ ಸಂಜೆ 3.30ಕ್ಕೆ ವಾಹನ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು 7829903838, 9148690177, 9845235227 ಹಾಗೂ 8618815163 ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಸುರಭಿ ಗೋಶಾಲೆ ಏಳು ಎಕರೆ ವ್ಯಾಪ್ತಿಯಲ್ಲಿ ನಿರ್ವಹಣೆ ಮಾಡುತ್ತಿದ್ದು, ಸಮಾಜದ ಎಲ್ಲರ ಸಹಕಾರ ಹಾಗೂ ದಾನಿಗಳ ನೆರವಿನಿಂದ ಗೋಶಾಲೆ ನಡೆಯುತ್ತಿದೆ. ಸುತ್ತಮುತ್ತಲಿನ ಏಳೆಂಟು ಗ್ರಾಮಗಳ ಸಾರ್ವಜನಿಕರು ಅಗತ್ಯ ಸಹಕಾರ ನೀಡುತ್ತಿದ್ದಾರೆ. ಗೋಉತ್ಪನ್ನಗಳ ಸಿದ್ಧತೆ ಬಗ್ಗೆ ಆಲೋಚನೆ ನಡೆಯುತ್ತಿದೆ ಎಂದರು.

ಗೋವುಗಳಿಗೆ ಗೋಗ್ರಾಸ, ಗೋದಾನ ಹಾಗೂ ಗೋಪೂಜೆಗೆ ಅವಕಾಶ ಇರುತ್ತದೆ. ಗೋವುಗಳಿಗೆ ಮೇವು, ತರಕಾರಿ, ಹಿಂಡಿ, ಬಾಳೆಹಣ್ಣು ನೀಡುವುದು ಹಾಗೂ ಆರ್ಥಿಕ ಸಹಕಾರ ನೀಡಲು ಅವಕಾಶವಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಸೂರ್ಯನಾರಾಯಣ್‌, ಶಿವಶಂಕರ್‌, ವೆಂಕಟೇಶಮೂರ್ತಿ, ರಾಜು ಚಂದ್ರಶೇಖರ್‌, ಶಂಕರನಾರಾಯಣ, ಸರಳಾ ಹೆಗ್ಡೆ, ಕೇಶವಮೂರ್ತಿ, ಡಾ. ನಾಗಮಣಿ, ಕುಲಕರ್ಣಿ, ಲಕ್ಷ್ಮೀಕಾಂತ್‌, ಕುಮಾರಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

digimalenadu

ಶಿವಮೊಗ್ಗ
error: Content is protected !!