ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆ ಡಿಸೆಂಬರ್‌ 7ಕ್ಕೆ

ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆ ಡಿಸೆಂಬರ್‌ 7ಕ್ಕೆ

ಶಿವಮೊಗ್ಗ | 3 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ‌ ವತಿಯಿಂದ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಡಿಸೆಂಬರ್‌ 7ರಂದು 2022-23ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ ಏರ್ಪಡಿಸಲಾಗಿದೆ. 15 ರಿಂದ 29 ವರ್ಷ ವಯೋಮಿತಿ ಒಳಗಿರುವ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಜಾನಪದ ನೃತ್ಯ (ಗುಂಪು), ಜಾನಪದ ಗೀತೆ (ಗುಂಪು), ಏಕಪಾತ್ರಾಭಿನಯ ವೈಯಕ್ತಿಕ (ಕನ್ನಡ, ಇಂಗ್ಲೀಷ್, ಹಿಂದಿ), ಶಾಸ್ತ್ರೀಯ ಸಂಗೀತ (ಹಿಂದೂಸ್ಥಾನಿ ಮತ್ತು ಕರ್ನಾಟಕ), ಶಾಸ್ತ್ರೀಯ ವಾದ್ಯ (ಸಿತಾರ್, ಕೊಳಲು, ತಬಲಾ, ವೀಣಾ, ಮೃದಗಂ), ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ನೃತ್ಯಗಳು (ಮಣಿಪುರ, ಒಡಿಸ್ಸಿ, ಕಥಕ್, ಕೂಚುಪುಡಿ, ಭರತನಾಟ್ಯ), ಆಶುಭಾಷಣ (ಕನ್ನಡ, ಹಿಂದಿ, ಇಂಗ್ಲೀಷ್) ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಅವಶ್ಯಕ ವೇಷ ಭೂಷಣ ಹಾಗೂ ಸಂಗೀತ ಪರಿಕರಗಳನ್ನು ತರಬೇಕು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಸ್ಪರ್ಧಿಗಳ ಮಧ್ಯಾಹ್ನದ ಉಪಹಾರ ಹಾಗೂ ಶಿವಮೊಗ್ಗ ತಾಲೂಕು ಹೊರತುಪಡಿಸಿ ಬೇರೆ ತಾಲೂಕಿನಿಂದ ಭಾಗವಹಿಸುವವರಿಗೆ ಸಾಮಾನ್ಯ ಪ್ರಯಾಣ ಭತ್ಯೆ ನೀಡಲಾಗುವುದು. ಸ್ಪರ್ಧಿಗಳು ಡಿಸೆಂಬರ್‌ 7ರ ಬೆಳಗ್ಗೆ 9ರ ಒಳಗೆ ಕುವೆಂಪು ರಂಗಮಂದಿರದಲ್ಲಿ ವರದಿ ಮಾಡಿಕೊಂಡು  ವಯಸ್ಸಿನ ಪ್ರಮಾಣ ಪತ್ರದೊಂದಿಗೆ ಹೆಸರನ್ನು ನೋಂದಾಯಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಸಂಪರ್ಕಿಸಬಹುದಾಗಿದೆ.

digimalenadu

ಶಿವಮೊಗ್ಗ
error: Content is protected !!