ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಯೋಜನೆಗಳ ಸಂಪೂರ್ಣ ವಿವರ, ಅರ್ಜಿ ಸಲ್ಲಿಸಲು ಡಿಸೆಂಬರ್ 15ರವರೆಗೆ ಅವಕಾಶ

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಯೋಜನೆಗಳ ಸಂಪೂರ್ಣ ವಿವರ, ಅರ್ಜಿ ಸಲ್ಲಿಸಲು ಡಿಸೆಂಬರ್ 15ರವರೆಗೆ ಅವಕಾಶ

ಶಿವಮೊಗ್ಗ | 3 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ “ಬಸವ ಬೆಳಗು, ವಿದೇಶ ವಿದ್ಯಾವಿಕಾಸ, ಜೀವಜಲ, ಸ್ವಸಹಾಯ ಸಂಘಗಳಿಗೆ ಉತ್ತೇಜನ ಮತ್ತು ಕಾಯಕ ಕಿರಣ” ಯೋಜನೆಗಳಡಿ ವಿವಿಧ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯುವ ಆಸಕ್ತರು ಅರ್ಜಿ ಸಲ್ಲಿಸಲು ಡಿಸೆಂಬರ್‌ 15ರವರೆಗೆ ಅವಕಾಶ‌ ಕಲ್ಪಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು 2022-23ನೇ ಸಾಲಿನಲ್ಲಿ 5 ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ವೀರಶೈವ ಲಿಂಗಾಯತ ಸಮುದಾಯದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಷರತ್ತುಗಳು: ಅರ್ಜಿದಾರರು ಪ್ರವರ್ಗ 3ಬಿ ವರ್ಗಕ್ಕೆ ಸೇರಿದವರಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಅವಧಿ ವಿಸ್ತರಣೆ: ವೀರಶೈವ ಲಿಂಗಾಯತ ಸಮುದಾಯದ ಜನರಿಂದ ವಿವಿಧ ಸಾಲ ಯೋಜನೆಯಡಿ ಸೌಲಭ್ಯ ಪಡೆಯಲು ಆನ್‌ ಲೈನ್‌ ಅರ್ಜಿ ಆಹ್ವಾನಿಸಿ ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್‌ 30 ರವರೆಗೆ ನಿಗಧಿಪಡಿಸಲಾಗಿತ್ತು. ಇದೀಗ ಆನ್‍ಲೈನ್ ಅರ್ಜಿ ಸಲ್ಲಿಸಲು ಡಿಸೆಂಬರ್ 15 ರವರೆಗೆ ಅವಕಾಶ ನೀಡಲಾಗಿದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ “ಬಸವ ಬೆಳಗು”, “ವಿದೇಶ ವಿದ್ಯಾವಿಕಾಸ”, “ಜೀವಜಲ”, ಸ್ವಸಹಾಯ ಸಂಘಗಳಿಗೆ ಉತ್ತೇಜನ” ಹಾಗೂ “ಕಾಯಕ ಕಿರಣ” ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ. ಬಸವ ಬೆಳಗು : ವೃತ್ತಿಪರ ಕೋರ್ಸ್‌ಗಳಿಗೆ ವಾರ್ಷಿಕ 1.00 ಲಕ್ಷ ರೂ.ಗಳ ಮಿತಿಯಲ್ಲಿ ಗರಿಷ್ಠ 5.00 ಲಕ್ಷ ರೂ.ಗಳ ವರೆಗೆ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

ವಿದೇಶ ವಿದ್ಯಾವಿಕಾಸ : ಮಾನ್ಯತೆ ಪಡೆದಿರುವಂತಹ ವಿದೇಶ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ 3.50 ಲಕ್ಷ ರೂ.ಗಳಂತೆ 3 ವರ್ಷದ ಅವಧಿಗೆ ಒಟ್ಟು 10.00 ಲಕ್ಷ ರೂ.ಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಜೀವಜಲ : ಈ ಯೋಜನೆಯಡಿ ಸೌಲಭ್ಯ ಪಡೆಯಲು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು, ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ದಕ್ಷಿಣಕನ್ನಡ, ಉಡುಪಿ, ಕೊಡಗು, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ನಿಗಧಿಪಡಿಸಿರುವ ಘಟಕವೆಚ್ಚ: 7 ಜಿಲ್ಲೆಗಳಿಗೆ 3.50 ಲಕ್ಷ ರೂ. ಸಹಾಯಧನ ಹಾಗೂ 50,000 ರೂ. ಸಾಲ ಮತ್ತು ಉಳಿದ 25 ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ 2.00 ಲಕ್ಷ ರೂ. ಸಹಾಯಧನ ಹಾಗೂ 50,000 ರೂ. ಸಾಲ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು.

ಸ್ವಸಹಾಯ ಸಂಘಗಳಿಗೆ ಉತ್ತೇಜನ : ವೀರಶೈವ ಲಿಂಗಾಯತ ಸಮುದಾಯದ ಸ್ವ ಸಹಾಯ ಗುಂಪುಗಳ 15 ಸದಸ್ಯರಿಗೆ ತಲಾ 5,000 ರೂ. ಗಳ ಸಹಾಯಧನ ಹಾಗೂ ತಲಾ 10,000 ರೂ. ಗಳ ಸಾಲವನ್ನು ವಾರ್ಷಿಕ ಶೇ.4ರಷ್ಟು ಬಡ್ಡಿದರದಲ್ಲಿ ಹೀಗೆ ಪ್ರತಿ ಗುಂಪಿಗೆ 75,000 ರೂ. ಗಳ ಸಹಾಯಧನ ಹಾಗೂ 1.50,000 ರೂ. ಗಳ ಸಾಲ ಒಟ್ಟು 2,25,000 ರೂ.ಗಳನ್ನು ಮಂಜೂರು ಮಾಡುವುದು.

ಕಾಯಕಕಿರಣ : 50,000 ರೂ. ಗಳ ವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ. 30ರಷ್ಟು ಗರಿಷ್ಠ 10,000 ರೂ. ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.70ರಷ್ಟು ಗರಿಷ್ಠ  40,000 ರೂ. ಗಳನ್ನು ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವುದು. 50,001 ರೂ. ಇಂದ 1,00,000 ರೂ. ಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.20ರಷ್ಟು ಗರಿಷ್ಠ 20,000 ರೂ. ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ  80,000 ರೂ. ಗಳನ್ನು ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವುದು.

ಅರ್ಹ ಫಲಾಪೇಕ್ಷಿಗಳು ಹತ್ತಿರದ ಗ್ರಾಮಒನ್, ಬೆಂಗಳೂರುಒನ್,  ಕರ್ನಾಟಕ ಒನ್ ನಾಗರೀಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.

ಮಾಹಿತಿಗೆ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತದ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ: 08022865522 ಅಥವಾ ಆಯಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಶಿವಮೊಗ್ಗದ ಜನತೆ ಡಿ.ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಭಾಗ್ಯ ನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ ದೂ.ಸಂ: 08182229634, ವೆಬ್‍ಸೈಟ್ https://kvldcl.karnataka.gov.in ವೀಕ್ಷಿಸಿ ಮಾಹಿತಿ ಪಡೆಯಬಹುದಾಗಿದೆ.

digimalenadu

ಶಿವಮೊಗ್ಗ
error: Content is protected !!