ಗೃಹಶೋಭೆ ಅಂತರಾಷ್ಟ್ರೀಯ ಗೃಹ ಬಳಕೆ ವಸ್ತುಗಳ ಪ್ರದರ್ಶನ, ಡಿಸೆಂಬರ್‌ 12ವರೆಗೆ ವಿನೂತನ ವಸ್ತು ಪ್ರದರ್ಶನ

ಗೃಹಶೋಭೆ ಅಂತರಾಷ್ಟ್ರೀಯ ಗೃಹ ಬಳಕೆ ವಸ್ತುಗಳ ಪ್ರದರ್ಶನ, ಡಿಸೆಂಬರ್‌ 12ವರೆಗೆ ವಿನೂತನ ವಸ್ತು ಪ್ರದರ್ಶನ

ಶಿವಮೊಗ್ಗ | 5 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ನಗರದ ಹಳೇ ಜೈಲು ರಸ್ತೆಯ ಫ್ರೀಡಂ ಪಾರ್ಕ್‌ ಮೈದಾನದಲ್ಲಿ ಡಿಸೆಂಬರ್‌ 12ರವರೆಗೆ ಗೃಹಶೋಭೆ ಅಂತಾರಾಷ್ಟ್ರೀಯ ಗೃಹಬಳಕೆ ವಸ್ತುಗಳ ಅತಿದೊಡ್ಡ ಪ್ರದರ್ಶನ ಆಯೋಜಿಸಲಾಗಿದೆ. ಗೃಹಶೋಭೆ ವಸ್ತು ಪ್ರದರ್ಶನ ವಿಶೇಷತೆಗಳಿಂದ ಕೂಡಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಗೃಹಶೋಭೆ ಅಂತಾರಾಷ್ಟ್ರೀಯ ಗೃಹಬಳಕೆ ವಸ್ತುಗಳ ಅತಿದೊಡ್ಡ ಪ್ರದರ್ಶನವು ಡಿಸೆಂಬರ್‌ 12ರವರೆಗೆ ಪ್ರತಿ ದಿನ ಬೆಳಗ್ಗೆ 11ರಿಂದ ರಾತ್ರಿ 9ವರೆಗೆ ಇರಲಿದೆ. ಅನ್ಯಗ್ರಹ ಜೀವಿಗಳ ಪ್ರತಿಕೃತಿ, ಏಲಿಯನ್ಸ್‌ ಆಕೃತಿ ಸೇರಿದಂತೆ ಆಕರ್ಷಕ ಪ್ರತಿಕೃತಿಗಳು ಇವೆ.

ಪ್ರತಿಕೃತಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬಹುದಾಗಿದೆ. ವೈವಿಧ್ಯಮಯ ಪೀಠೋಪಕರಣಗಳು, ಆಸನಗಳು, ಗ್ರೈಂಡರ್ಸ್‌, ರೆಫ್ರಿಜರೇಟರ್ಸ್‌, ಜ್ಯೂಸರ್ಸ್, ಮಿಕ್ಸರ್, ವಾಟರ್ ಪ್ಯೂರಿಫೈಯರ್ಸ್‌, ಎಲೆಕ್ಟ್ರಾನಿಕ್ ಉಪಕರಣಗಳು, ತರಕಾರಿ ಹೆಚ್ಚುವ ಉಪಕರಣಗಳು ಪ್ರದರ್ಶನದಲ್ಲಿವೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಗೃಹಬಳಕೆ ವಸ್ತುಗಳ ಜತೆಗೆ ಬಾಡಿ ಮಸಜರ್ಸ್‌, ಹೇರ್ ಡ್ರೈಯರ್ಸ್‌, ಹೇರ್ ಸ್ಟ್ರೈಟ್ನರ್ಸ್‌ ಮತ್ತು ಸೋಲಾರ್ ಉತ್ಪನ್ನಗಳು ಹಾಗೂ ಉಪಯುಕ್ತ ವಸ್ತುಗಳು ಲಭ್ಯವಿದೆ. ಗೃಹಶೋಭೆ ಪ್ರದೃಶನದಲ್ಲಿ ರುಚಿಕರ ತಿಂಡಿ ತಿನಿಸುಗಳ ಸ್ಟಾಲ್‌ಗಳು ಸಹ ಇವೆ. ಇತ್ತಿಚೇಗೆ ಆರಂಭವಾದ 11 ದಿನಗಳ ಗ್ರಾಹಕರ ಮೇಳವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು. ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಸೈಮನ್ ಎಕ್ಸಿಬಿಟರ್ಸ್‌ ನಿರ್ದೇಶಕ ನಾಗಚಂದ್ರ, ವೆಂಕಟೇಶ್ ಉಪಸ್ಥಿತರಿದ್ದರು.

digimalenadu

ಶಿವಮೊಗ್ಗ
error: Content is protected !!