ಶಿವಮೊಗ್ಗ ನಗರ ಹೇಗಿದೆ ?, ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯ ದಾಖಲಿಸಿ

ಶಿವಮೊಗ್ಗ ನಗರ ಹೇಗಿದೆ ?, ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ನಿಮ್ಮ ಅಭಿಪ್ರಾಯ ದಾಖಲಿಸಿ

ಶಿವಮೊಗ್ಗ | 7 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರ ಹೇಗಿದೆ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು, ಆರೊಗ್ಯ, ಶಿಕ್ಷಣ, ನೀರು ಪೂರೈಕೆ, ಮೂಲಸೌಕರ್ಯ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ದಾಖಲಿಸುವ ಕಾರ್ಯವು ಭಾರತ ಸರ್ಕಾರದಿಂದ ನಡೆಯುತ್ತಿದೆ. ನೀವು ಕೂಡ ನಿಮ್ಮ ಅಭಿಪ್ರಾಯ ತಪ್ಪದೇ ದಾಖಲಿಸಿ.‌

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನಾಗರೀಕ ಸೌಲಭ್ಯಗಳ ಮಾಹಿತಿ ದಾಖಲೀಕರಣದ ಅರಿವು ಮೂಡಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಸ್ಮಾರ್ಟ್ ಸಿಟಿ ಮಿಷನ್ ಮೂಲಕ ಜೀವನ ಗುಣಮಟ್ಟ ಸೌಕರ್ಯ ಕುರಿತು “ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ” ನಡೆಸುತ್ತಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ದೇಶದಲ್ಲಿರುವ ನಗರಗಳಿಗೆ ಸಂಬಂಧಿಸಿದಂತೆ ವಿವಿಧ ಶೀರ್ಷಿಕೆಗಳಡಿ, ವಿವಿಧ ಇಲಾಖೆಗಳಡಿ ಇರುವ ಸೌಲಭ್ಯಗಳ ಪ್ರಗತಿ ಮೌಲ್ಯಮಾಪನ ಮಾಡಿ ಮುಖ್ಯ ನಗರಗಳ ಅಭಿವೃದ್ಧಿ ಸೂಚ್ಯಂಕವನ್ನು 2018 ರಿಂದ ಸಿದ್ಧಪಡಿಸಲಾಗುತ್ತಿದೆ. ಜೀವನ ಗುಣಮಟ್ಟ ಸೌಕರ್ಯ ಕುರಿತು “ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ”ಯು ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಪ್ರಸ್ತಾಪಿತ ನಗರದಲ್ಲಿನ ನಾಗರೀಕರ ಜೀವನದ ಗುಣಮಟ್ಟ ಮೌಲ್ಯಮಾಪನ ಮಾಡಲು ಉಪಯೋಗಿಸುವ ಮಾನದಂಡ ಆಗಿದೆ. ಈ ಮೌಲ್ಯಮಾಪನವು ನಗರದ ಜನಜೀವನದ ಗುಣ ಮಟ್ಟ, ಆರ್ಥಿಕ ಸದೃಢತೆ, ಆರ್ಥಿಕ ಸಾಮರ್ಥ್ಯ ಮತ್ತು ಇದರ ಸುಸ್ಥಿರತೆಯನ್ನು ಅಳೆಯುವ ಸಾಧನವಾಗಿದೆ.

ನಗರದಲ್ಲಿ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸುವಲ್ಲಿ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಅರಿಯುವ ಅಳತಗೋಲು ಸಹ ಆಗಿದೆ. ಹೆಚ್ಚಾಗಿ ಜೀವನದ ಗುಣಮಟ್ಟ ಸೌಕರ್ಯದ ಆಧಾರದ ಮೇಲೆ ನಗರ ಯೋಜನೆಗಳ ನೀತಿ ನಿರೂಪಣೆ ಮತ್ತು ಕಾರ್ಯಕ್ರಮ ಯೋಜನೆಯನ್ನು ಸರ್ಕಾರವು ಕೈಗೊಳ್ಳುತ್ತದೆ. ಮುಖ್ಯವಾಗಿ ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿ ಕ್ರಮಗಳು, ಎಲ್ಲರಿಗೂ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಸಾರ್ವಜನಿಕ ಪಾರ್ಕ್ ಗಳು, ನಗರ ಹಸಿರೀಕರಣದ ವ್ಯವಸ್ಥೆಗಳು ಇತ್ಯಾದಿಗಳು ಗಣನೆಗೆ ಬರುತ್ತದೆ. ಸುಮಾರು 13 ಇಲಾಖೆಗಳ ಮಾಹಿತಿಗಳು ಸೂಚ್ಯಂದ ತಯಾರಿಕೆಗೆ ಮುಖ್ಯವಾಗುತ್ತದೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶಿಕ್ಷಣ, ಆರೋಗ್ಯ, ವಸತಿ, ಘನತ್ಯಾಜ್ಯ ವಿಲೇವಾರಿ, ಸಾರಿಗೆ ವ್ಯವಸ್ಥೆ, ನಾಗರೀಕರ ಸುರಕ್ಷತೆ ಮತ್ತು ಭದ್ರತೆ, ಪರಿಸರ ಸಂರಕ್ಷಣ ಕ್ರಮಗಳು, ಮನೋರಂಜನೆ, ಆರ್ಥಿಕ ಅಭಿವೃದ್ಧಿಯ ಮಟ್ಟ, ಆರ್ಥಿಕ ಅಭಿವೃದ್ಧಿಯ ಅವಕಾಶಗಳು, ಹಸಿರೀಕರಣಗೊಂಡ ಪ್ರದೇಶಗಳು ಮತ್ತು ಹಸಿರೀಕರಣ ಅಳವಡಿಸಿದ ಕಟ್ಟಡಗಳು, ಇಂಧನ ಬಳಕೆ, ನಗರವು ಸವಾಲಿನ ಸನ್ನಿವೇಶದಲ್ಲಿ ಚೇತರಿಸಿಕೊಳ್ಳುವಿಕೆಯ ಮಟ್ಟ ಇತ್ಯಾದಿಗಳು ಪ್ರಮುಖವಾಗಿದೆ.

ವಿವಿಧ ಇಲಾಖೆಗಳಿಂದ ಈ ಮಾಹಿತಿಗಳನ್ನು ಈಗಾಗಲೇ ನಗರ ಯೋಜನೆಗಳ ಶೀರ್ಷಿಕೆಯಡಿ ಸ್ಮಾರ್ಟ್ ಸಿಟಿ, ಮಹಾನಗರಪಾಲಿಕೆ ವತಿಯಿಂದ ಸಂಗ್ರಹಿಸಲಾಗಿದೆ. ಜೀವನ ಗುಣಮಟ್ಟ ಸೌಕರ್ಯ ಕುರಿತು ಮಾಹಿತಿ ಸಂಗ್ರಹಣ ತಯಾರಿಸುವಾಗ ಶೇಕಡ 70 ರಷ್ಟು ಅಂಕಗಳು ಲಭ್ಯವಾಗುತ್ತದೆ. “ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ” ಮೂಲಕ ಶಿವಮೊಗ್ಗ ನಗರದ ನಾಗರೀಕರು ತಮ್ಮ ನಗರದಲ್ಲಿ ಲಭ್ಯ ಸೌಲಭ್ಯಗಳ ಬಗ್ಗೆ ದಾಖಲಿಸಲು ಅವಕಾಶ ಮಾಡಲಾಗಿದೆ. ಇದರಿಂದ “ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ” ಜೀವನ ಗುಣಮಟ್ಟ ಸೌಕರ್ಯ ಕುರಿತು ಮಾಹಿತಿ ಸಂಗ್ರಹಣ ತಯಾರಿಸುವಾಗ ಶೇಕಡ 30 ಅಂಕಗಳು ಲಭ್ಯವಾಗುತ್ತದೆ.

ಜೀವನ ಗುಣಮಟ್ಟ ಸೌಕರ್ಯ ಕುರಿತು ಮಾಹಿತಿ ಸಂಗ್ರಹಣ ತಯಾರಿಕೆಗೆ ಪೂರಕವಾದ “ಸಾರ್ವಜನಿಕ ಭಾಗವಹಿಸುವಿಕೆ ಸಮೀಕ್ಷೆ”ಯನ್ನು ಆನ್ ಲೈನ್ ಮತ್ತು ಆಫ್ ಲೈನ್ ಮುಖಾಂತರ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಸಮೀಕ್ಷೆಯಗೆ ಶೇಕಡ 30 ರಷ್ಟು ಪ್ರಾಮುಖ್ಯತೆ ಹೊಂದಿದೆ. ಪ್ರಸ್ತುತ ವಿವಿಧ ನಗರಗಳಲ್ಲಿ ಮತ್ತು ಎಲ್ಲಾ 100 ಸ್ಮಾರ್ಟ್ ಸಿಟಿಗಳಲ್ಲಿಯೂ ಸಮೀಕ್ಷೆ ನಡೆಯುತ್ತಿದೆ.

ಸಮೀಕ್ಷೆಗಾಗಿ ಸರ್ಕಾರವು ಕ್ಯೂ ಆರ್ ಕೋಡ್ ನೀಡಿದೆ. ಇದನ್ನು ಬಳಸಿಕೊಂಡು ಸ್ಕ್ಯಾನ್ ಮಾಡುವ ಮೂಲಕ ಸರ್ವಕಾರ್ಯ ಕೈಗೊಳ್ಳಬೇಕಾಗಿದೆ. ಸಮೀಕ್ಷೆಯು 23ನೇ ಡಿಸೆಂಬರ್ 2022 ರವರೆಗೆ ನಡೆಯಲಿದೆ. https://eol2022.org/CitizenFeedback%2c ಲಿಂಕ್ ಮುಖಾಂತರವು ಶಿವಮೊಗ್ಗ ನಗರದ ಹೇಗಿದೆ ಎಂಬುದರ ಮಾಹಿತಿ ದಾಖಲಿಸಬಹುದಾಗಿದೆ. ಶಿವಮೊಗ್ಗ ನಗರದ ಎಲ್ಲ ಜನರು ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು.

ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಡಿಜಿ ಮಲೆನಾಡು ಫೇಸ್‌ ಬುಕ್‌ : www.facebook.com/digimalenadu

ಡಿಜಿ ಮಲೆನಾಡು ಟ್ವಿಟರ್ : www.twitter.com/DMalenadu

ಡಿಜಿ ಮಲೆನಾಡು ಇನ್ಸ್ಟಾಗ್ರಾಮ್: www.instagram.com/digimalenadu

 

digimalenadu

ಶಿವಮೊಗ್ಗ
error: Content is protected !!