ಬಿಸಿಸಿಐ ವತಿಯಿಂದ ಕೆಎಸ್‌ಸಿಎ ಶಿವಮೊಗ್ಗ ವಲಯದಲ್ಲಿ ಡಿಸೆಂಬರ್‌ 26ರಿಂದ ಜನವರಿ 3ರವರೆಗೆ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ

ಬಿಸಿಸಿಐ ವತಿಯಿಂದ ಕೆಎಸ್‌ಸಿಎ ಶಿವಮೊಗ್ಗ ವಲಯದಲ್ಲಿ ಡಿಸೆಂಬರ್‌ 26ರಿಂದ ಜನವರಿ 3ರವರೆಗೆ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ

ಶಿವಮೊಗ್ಗ | 25 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ‌

ಮಹಿಳಾ ಕ್ರಿಕೆಟ್‌ ಪಂದ್ಯಾವಳಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಬಿಸಿಸಿಐ ವತಿಯಿಂದ ದೇಶದಲ್ಲಿ 15 ವರ್ಷದೊಳಗಿನ ಅಂತರ್‌ ರಾಜ್ಯ ಮಹಿಳಾ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದ್ದು, ಶಿವಮೊಗ್ಗ ನಗರದ ಕೆಎಸ್‌ಸಿಎ ಹಾಗೂ ಜೆಎನ್‌ಎನ್‌ಸಿಇ ಮೈದಾನದಲ್ಲಿ ಡಿಸೆಂಬರ್‌ 26ರಿಂದ ಜನವರಿ 3ವರೆಗೆ ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಎಚ್.ಎಸ್‌.ಸದಾನಂದ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu

ಶಿವಮೊಗ್ಗ ನಗರದಲ್ಲಿ ಎ ಗುಂಪಿನ 6 ತಂಡಗಳು ಭಾಗವಹಿಸಲಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರಖಂಡ, ವಿದರ್ಭ, ಹಿಮಾಚಲ ಪ್ರದೇಶ ಹಾಗೂ ತ್ರಿಪುರ ರಾಜ್ಯಗಳ ತಂಡದ ಪಂದ್ಯಗಳು ಶಿವಮೊಗ್ಗ ವಲಯದಲ್ಲಿ ನಡೆಯಲಿದೆ. ಬಿಸಿಸಿಐ ತೀರ್ಪುಗಾರರು ಹಾಗೂ ಪಂದ್ಯ ವೀಕ್ಷಕರ ನೇತೃತ್ವದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆಗಾರರು ಆಗಮಿಸುತ್ತಿದ್ದಾರೆ. ಪ್ರತಿ ತಂಡ 35 ಓವರ್‌ ಮಿತಿಯ ಪಂದ್ಯಗಳನ್ನು ಆಡಲಿದ್ದು, ಬೆಳಗ್ಗೆ 9ಕ್ಕೆ ಪಂದ್ಯ ಆರಂಭವಾಗಲಿದೆ. ಶಿವಮೊಗ್ಗದಲ್ಲಿ 15 ಪಂದ್ಯಗಳು ನಡೆಯಲಿವೆ. ಕೆಎಸ್‌ಸಿಎ ಶಿವಮೊಗ್ಗ ವಲಯದಿಂದ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ಡಿ.ಎಸ್‌.ಅರುಣ್‌ ಮಾತನಾಡಿ, ಡಿಸೆಂಬರ್‌ 26ರಂದು ಬೆಳಗ್ಗೆ 8.30ಕ್ಕೆ ಕೆಎಸ್‌ಸಿಇ ಸ್ಟೇಡಿಯಂನಲ್ಲಿ ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌, ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಪ್ರಾಚಾರ್ಯ ಡಾ. ಕೆ.ನಾಗೇಂದ್ರ ಪ್ರಸಾದ್‌ ಉದ್ಘಾಟಿಸುವರು ಎಂದು ಹೇಳಿದರು. ಸುಬ್ರಹ್ಮಣ್ಯ, ಮಹಿಳಾ ಕ್ರಿಕೆಟರ್‌ ಸಿ.ಜೆ.ನಿರ್ಮಿತಾ, ಎಂ.ಶ್ರೀಲಕ್ಷ್ಮೀ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!