ಶಬರಿಮಲೈ ತೆರಳುವ ಯಾತ್ರಿಗಳಿಗೆ ಸರ್ಜಿ ಫೌಂಡೇಶನ್ ವತಿಯಿಂದ ಮೆಡಿಕಲ್ ಕಿಟ್ ವಿತರಣೆ
ಶಿವಮೊಗ್ಗ | 29 ಡಿಸೆಂಬರ್ 2022 | ಡಿಜಿ ಮಲೆನಾಡು.ಕಾಂ
ಶಬರಿಮಲೈ ಯಾತ್ರೆಗೆ ತೆರಳುವ 300 ಮಂದಿಗೆ ಸರ್ಜಿ ಫೌಂಡೇಶನ್ ಹಾಗೂ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಶಿವಮೊಗ್ಗ ನಗರದ ಶ್ರೀ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಮೆಡಿಕಲ್ ಕಿಟ್, ನೀರಿನ ಬಾಟಲ್ ಹಾಗೂ 2023 ರ ಕ್ಯಾಲೆಂಡರ್‌ಗಳನ್ನು ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ವಿತರಿಸಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿರಂತರವಾಗಿ ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu
ಮುಂಜಾನೆ ದೇವರ ಜಪ ಹಾಗೂ ಭಜನೆಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ನೆನೆಯುತ್ತ ಗುರುಸ್ವಾಮಿಗಳು ಹಾಗೂ ಭಕ್ತರು ಮಾಡುತ್ತಿರುವ ಧಾರ್ಮಿಕ ಕಾರ್ಯಕ್ರಮ ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಲು ಪೂರಕವಾಗಿದೆ. ನಿತ್ಯ ಭಗವಂತನನ್ನು ಪ್ರಾರ್ಥಿಸುವುದರಿಂದ, ಭಜಿಸುವುದರಿಂದ, ಅನುಷ್ಠಾನ ಮಾಡುವುದರಿಂದ, ಉಪವಾಸ ವ್ರತಗಳನ್ನು ಕೈಗೊಳ್ಳುವ ಮೂಲಕ ಭಗವಂತನ ಜಪಿಸಿದರೆ ಆತ್ಮದಲ್ಲಿ ದೇವರನ್ನು ಕಾಣಲು ಸಾಧ್ಯವಿದೆ ಎಂದು ಡಾ. ಧನಂಜಯ ಸರ್ಜಿ ಹೇಳಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕಾರ್ಯಕ್ರಮದಲ್ಲಿ ಶಬರೀಶ್ ಗುರುಸ್ವಾಮಿ, ಧರ್ಮ ಲಿಂಗಂ ಗುರುಸ್ವಾಮಿ, ಆನಂದ ಗುರುಸ್ವಾಮಿ, ಎಸ್.ಮಣಿ ಗುರುಸ್ವಾಮಿ, ಜಗದೀಶ್ ಗುರುಸ್ವಾಮಿ ಅವರನ್ನು ಗೌರವಿಸಲಾಯಿತು. ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ, ಸರ್ಜಿ ಫೌಂಡೇಶನ್ ಟ್ರಸ್ಟಿಗಳಾದ ಹರ್ಷ ಸರ್ಜಿ, ಈಶ್ವರ್ ಸರ್ಜಿ ಅವರನ್ನು ಸನ್ಮಾನಿಸಲಾಯಿತು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu