ಶಿವಮೊಗ್ಗ ನಗರದಲ್ಲಿ ಜನವರಿ 26 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ, ಪುನೀತ್ ರಾಜ್ ಕುಮಾರ್, ಶಿವಮೊಗ್ಗ ವಿಮಾನ ನಿಲ್ದಾಣದ ಹೂವಿನ ಕಲಾಕೃತಿ ವಿಶೇಷ ಆಕರ್ಷಣೆ

ಶಿವಮೊಗ್ಗ ನಗರದಲ್ಲಿ ಜನವರಿ 26 ರಿಂದ 29 ರವರೆಗೆ ಫಲಪುಷ್ಪ ಪ್ರದರ್ಶನ, ಪುನೀತ್ ರಾಜ್ ಕುಮಾರ್, ಶಿವಮೊಗ್ಗ ವಿಮಾನ ನಿಲ್ದಾಣದ ಹೂವಿನ ಕಲಾಕೃತಿ ವಿಶೇಷ ಆಕರ್ಷಣೆ

ಶಿವಮೊಗ್ಗ | 24 ಜನವರಿ 2023 | ಡಿಜಿ ಮಲೆನಾಡು.ಕಾಂ

ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಶಿವಮೊಗ್ಗ ನಗರದ ತೋಟಗಾರಿಕೆ ಇಲಾಖೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಭವನದ ಆವರಣದಲ್ಲಿ ಜನವರಿ 26ರಿಂದ 29ರವರೆಗೆ 61ನೇ ಫಲ ಪುಷ್ಪ ಪ್ರದರ್ಶನ 2023 ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

61ನೇ ಫಲ ಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ಸಸ್ಯ ಸಂಪತ್ತು ಮತ್ತು ವನ್ಯಜೀವಿ ಆಕೃತಿ ಹಾಗೂ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್‌ ಅವರ ಹೂವಿನ ಕಲಾಕೃತಿ ಒಳಗೊಂಡ ‘ಗಂಧದ ಗುಡಿ’ ಥೀಮ್‌, ಶಿವಮೊಗ್ಗ ವಿಮಾನ ನಿಲ್ದಾಣ ಮಾದರಿಯನ್ನು ಹೂವಿನ ಕಲಾಕೃತಿಗಳಿಂದ ಸಿದ್ಧಪಡಿಸಲಾಗುತ್ತಿದೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ ಮಾಹಿತಿ ಫಲಕ, ಆಕರ್ಷಕ ಹೂವಿನ ಫೋಟೋ ಫ್ರೇಮ್‍ಗಳು ಹಾಗೂ ಮಕ್ಕಳನ್ನು ಆಕರ್ಷಸುವ ಹೂವಿನ ಗೊಂಬೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಸಾರ್ವಜನಿಕರು ಸೆಲ್ಫಿ, ಫೋಟೋ ತೆಗೆದುಕೊಳ್ಳಲು ಅನುಕೂಲವಾಗುವಂತೆ ಹೂವಿನ ಫ್ರೇಂಗಳನ್ನು ಮಾಡಲಾಗುತ್ತಿದೆ.

ಜಿಲ್ಲೆಯ ಎಲ್ಲ ತಾಲೂಕುಗಳ ರೈತರು ಬೆಳೆದ ವಿಶೇಷ ರೀತಿಯ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕೆ ಉತ್ಪನಗಳ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ. ವೈವಿಧ್ಯಮಯ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.

ಕೃಷಿ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಸ್ತ್ರೀ ಶಕ್ತಿ ಸಂಘ, ಕೃಷಿ ಮತ್ತು ತೋಟಗಾರಿಕೆ ಯಂತ್ರೋಪಕರಣಗಳು, ಹನಿ ನೀರಾವರಿ ಉಪಕರಣಗಳು, ಅಲಂಕಾರಿಕ ಹೂ ಗಿಡಗಳ ನರ್ಸರಿ ಸೇರಿದಂತೆ ಒಟ್ಟು ವಿವಿಧ ರೀತಿಯ 80 ಮಳಿಗೆಗಳು ಪ್ರದರ್ಶನದಲ್ಲಿರುತ್ತವೆ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಅರಣ್ಯ ಇಲಾಖೆ, ಮೃಗಾಲಯ ಪ್ರಾಧಿಕಾರದ ಹುಲಿ ಮತ್ತು ಸಿಂಹಧಾಮದ ವತಿಯಿಂದ ವಿವಿಧ ವನ್ಯಜೀವಿ ಲೋಕದ ಪರಿಚಯ, ಕೈತೋಟದ ಪ್ರಾತ್ಯಕ್ಷತೆ, ವಿವಿಧ ಅಲಂಕಾರಿಕೆ ಹೂ, ಕುಬ್ಜಗಿಡಗಳು(ಬೋನ್ಸಾಯ್), ಅಣಬೆ ಪ್ರಾತ್ಯಕ್ಷತೆ ಹಾಗೂ ಜೇನು ಕೃಷಿ ಕುರಿತಾದ ಪ್ರಾತ್ಯಕ್ಷತೆ ಹಾಗೂ ಸುಮಾರು 5 ಸಾವಿರ ವಿವಿಧ ಜಾತಿಯ ಆಕರ್ಷಕ ಹೂ ಕುಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಫಲ ಪುಷ್ಪ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಆಹಾರೋತ್ಪನ್ನಗಳ ಆಹಾರ ಮೇಳ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ 10 ರೂ. ಮತ್ತು ಮಕ್ಕಳಿಗೆ 5 ರೂ. ನಿಗಧಿಗೊಳಿಸಿದೆ. ಶಿಕ್ಷಕರ ಜೊತೆ ಬರುವ ಶಾಲಾ ಮಕ್ಕಳಿಗೆ ಪ್ರವೇಶ ಉಚಿತವಾಗಿರುತ್ತದೆ.

61ನೇ ಫಲ ಪುಷ್ಪ ಪ್ರದರ್ಶನ 2023 ಕುರಿತು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ವಿವರಣೆ ನೀಡಿದರು. ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಹರಳೆಣ್ಣೆ ಸಿದ್ದಪ್ಪ, ಖಜಾಂಚಿ ರಘು ದುಮ್ಮಳ್ಳಿ, ನಿರ್ದೇಶಕ ಚಂದ್ರಕಾಂತ ಅಸಗೋಡು, ಚಂದ್ರಕಲಾ, ಆಶಾ ಶೇಷಾದ್ರಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ವನಮಾಲಾ ಇದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!