ಶಿವಮೊಗ್ಗ ಆರೋಗ್ಯ ಇಲಾಖೆಯಿಂದ ಕುಷ್ಠ ರೋಗ ಜಾಗೃತಿ ಅಂದೋಲನ
ಶಿವಮೊಗ್ಗ | 30 ಜನವರಿ 2023 | ಡಿಜಿ ಮಲೆನಾಡು.ಕಾಂ
ವಿಶ್ವದಾದ್ಯಂತ ಜನವರಿ 30 ರಿಂದ ಫೆಬ್ರವರಿ 13ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಂದೋಲನ 2023 ಹಮ್ಮಿಕೊಂಡಿದ್ದು, ಶಿವಮೊಗ್ಗ ನಗರದಲ್ಲಿ ಜನವರಿ 30ರಂದು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಜಾಗೃತಿ ಜಾಥಾ ನಡೆಸಲಾಯಿತು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಕುಷ್ಠ ರೋಗದ ವಿರುದ್ಧ ಹೋರಾಡೋಣ ಮತ್ತು ಕುಷ್ಠರೋಗವನ್ನು ಇತಿಹಾಸವಾಗಿಸೋಣ ಎಂಬ ಘೋಷಣೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಕುಷ್ಠ ರೋಗವು ಎಂ.ಲೆಪ್ರೆ ಎಂಬ ಸೂಕ್ಷ್ಮಾಣು ಬ್ಯಾಕ್ಟೀರಿಯಾ, ಮೈಕೋ ಬ್ಯಾಕ್ಟೀರೀಯಾಂ ಲೆಪ್ರೇ ಯಿಂದ ಬರುವ ಕಾಯಿಲೆಯಾಗಿದೆ. ನಿಧಾನವಾಗಿ ಹರಡುವ ಕಾಯಿಲೆ ಆಗಿದ್ದು, ಕುಷ್ಠ ರೋಗ ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ರೋಗ ಹರಡುತ್ತದೆ. ನರಗಳು, ಚರ್ಮ, ಮೂಗಿನ ಒಳಪದರ, ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ.
ಚರ್ಮದ ಮೇಲೆ ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ ಸ್ಪರ್ಷ ಜ್ಞಾನವಿಲ್ಲದ ಮಚ್ಚೆಗಳು, ಚರ್ಮದ ಮೇಲೆ ಬೆಳವಣಿಗೆಗಳು, ನೋವು ರಹಿತ ಹುಣ್ಣುಗಳು, ಹುಬ್ಬುಗಳು ಅಥವಾ ಕಣ್ಣ ರೆಪ್ಪೆಗಳ ನಷ್ಟವು ಕುಷ್ಠ ರೋಗದ ಲಕ್ಷಣಗಳಾಗಿವೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕುಷ್ಠ ರೋಗದಿಂದ ಅಂಗವಿಕಲತೆಯಾಗಿ ಬಳಲುವವರಿಗೆ ಆರ್‌ಸಿಎಸ್ ಶಸ್ತ್ರಚಿಕಿತ್ಸೆಯನ್ನು ಆಯ್ದ ಆಸ್ಪತ್ರೆಗಳಲ್ಲಿ ಇಲಾಖೆಯಿಂದ ಉಚಿತವಾಗಿ ನಡೆಸಲಾಗುವುದು. ಕುಷ್ಠ ರೋಗದಿಂದ ಬಳಲುವವರಿಗೆ ಉಚಿತ ಎಂಸಿಆರ್ ಚಪ್ಪಲಿ ನೀಡಲಾಗುವುದು. ಸಹಾಯಕ ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಕುಷ್ಠ ರೋಗಕ್ಕೆ ಬಹುವಿಧ ಚಿಕತ್ಸೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ.
ಮಚ್ಚೆಗಳನ್ನು ಗುಪ್ತವಾಗಿರಿಸದೇ ವೈದ್ಯರಿಗೆ ತೋರಿಸುವುದು. ರೋಗದ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಹರಡುವುದು ತಡೆಗಟ್ಟಬಹುದಾಗಿದೆ. ಇದರಿಂದ ಅಂಗವಿಕಲತೆ ತಡೆಗಟ್ಟಬಹುದು.
ಜಿಲ್ಲಾ ಪಂಚಾಯಿತಿ ಆವರಣದಿಂದ ಶಿವಮೊಗ್ಗ ನಗರದ ಐಎಂಎ ಸಭಾಂಗಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಡಿಎಚ್‌ಒ ಡಾ. ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಶಮಾ ಬೇಗಂ ಫಕೃದ್ದೀನ್, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu