ರೋಚಕ ಹಣಾಹಣಿಯಿಂದ ಕೂಡಿದ ಕುಸ್ತಿ ಪಂದ್ಯಾವಳಿ, ಸಾಗರದ ಶ್ರೀ ಮಾರಿಕಾಂಬಾ ಜಾತ್ರೆ
ಶಿವಮೊಗ್ಗ | 14 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ
ಮೂರು ದಿನಗಳ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯು ಸಾವಿರಾರು ಜನರ ಮೆಚ್ಚುಗೆ ಗಳಿಸಿತು. ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಜಾತ್ರಾ ಸಮಿತಿ ವತಿಯಿಂದ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಭಾನುವಾರ ಮುಕ್ತಾಯವಾಯಿತು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಗಮನಸೆಳೆದ ರಾಜ್ಯ, ಅಂತರಾಜ್ಯ ಕುಸ್ತಿಪಟುಗಳ ಪಂದ್ಯಾವಳಿ : ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯ, ಅಂತರಾಜ್ಯದ ಕುಸ್ತಿಪಟುಗಳ ನಡುವಿನ ಪಂದ್ಯಗಳು ಗಮನ ಸೆಳೆದವು. ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಸಾಹಿಲ್ ಹಾಗೂ ಮೈಸೂರಿನ ಯಶವಂತ್ ಕಾಳಿಂಗ ನಡುವಿನ ಪಂದ್ಯದಲ್ಲಿ ಯಶವಂತ್ ವಿಜೇತರಾದರು. 90 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪಂಜಾಬ್ ಅಮೃತ್‌ಸರ್‌ನ ಕವಲ್‌ಜಿತ್‌ಸಿಂಗ್ ಕೊಲ್ಲಾಪುರದ ಹಸನ್ ಪಟೇಲ್ ನಡುವಿನ ರೋಚಕ ಹಣಾಹಣಿಯ ಪಂದ್ಯದಲ್ಲಿ ಕವಲ್‌ಜಿತ್‌ಸಿಂಗ್ ಗೆದ್ದರು. ಕುಸ್ತಿ ಪಂದ್ಯ ವಿಜೇತ ಕವಲ್‌ಜಿತ್‌ಸಿಂಗ್‌ಗೆ 1 ಲಕ್ಷ 10 ಸಾವಿರ ರೂ. ನಗದು ಬಹುಮಾನ ನೀಡಿ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಾಗರ ಮಾರಿಕಾಂಬಾ ಜಾತ್ರೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಪಂಜಾಬ್, ಮಹಾರಾಷ್ಟ್ರ , ಹರಿಯಾಣ ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ರಾಷ್ಟ್ರೀಯ ಕುಸ್ತಿಪಟುಗಳು ಆಗಮಿಸಿದ್ದರು. ಜಾತ್ರಾ ಸಮಿತಿ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಿತ್ತು. | ಎಸ್.ಅಶೋಕ್, ಸಂಚಾಲಕ, ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ, ಸಹಸಂಚಾಲಕರು
ಪಂಜಾಬ್‌ನ ಮನ್‌ಪ್ರೀತ್‌ಸಿಂಗ್ ಹಾಗೂ ಕರ್ನಾಟಕದ ಜಮಖಂಡಿಯ ಶಿವಯ್ಯ ಪೂಜಾರಿ ನಡುವಿನ ಪಂದ್ಯದಲ್ಲಿ ಶಿವಯ್ಯ ಗೆಲುವು ಸಾಧಿಸಿ 1 ಲಕ್ಷ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡರು. ಕುಸ್ತಿ ಸಂಚಾಲಕ ಎಸ್.ಅಶೋಕ್, ಸಹಸಂಚಾಲಕ ಎಂ.ಎಸ್.ಶಶಿಕಾಂತ್ ಮತ್ತು ಜಗನ್ನಾಥ್ ಜೇಡಿಕುಣಿ ಹಾಜರಿದ್ದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ 150ಕ್ಕೂ ಹೆಚ್ಚು ಪಂದ್ಯಗಳು ನಡೆದಿದ್ದು, 200ಕ್ಕೂ ಹೆಚ್ಚು ಕುಸ್ತಿಪಟುಗಳು ಆಗಮಿಸಿ ಭಾಗವಹಿಸಿದ್ದರು. 100ಕ್ಕೂ ಅಧಿಕ ಬೆಳ್ಳಿ ಪದಕಗಳನ್ನು ವಿಜೇತರಿಗೆ ನೀಡಲಾಯಿತು. ಕೊನೆಯ ಕುಸ್ತಿಯಾಗಿ ಅಖಾಡ ಬಳೆ ಪಂದ್ಯದಲ್ಲಿ ಹರಿಯಾಣದ ಬಂಟಿ ವಿಜೇತರಾಗಿ ಅಖಾಡ ಬಳೆ ಗೆದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu