ಮೋದಿ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಮೀರಿದ ಜನಸಾಗರ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಾಕ್ಷಿಯಾದ ಲಕ್ಷಾಂತರ ಜನತೆ

ಮೋದಿ ಕಾರ್ಯಕ್ರಮಕ್ಕೆ ಎರಡು ಲಕ್ಷಕ್ಕೂ ಮೀರಿದ ಜನಸಾಗರ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಾಕ್ಷಿಯಾದ ಲಕ್ಷಾಂತರ ಜನತೆ

ಶಿವಮೊಗ್ಗ | 28 ಫೆಬ್ರವರಿ 2023 | ಡಿಜಿ ಮಲೆನಾಡು.ಕಾಂ

ಬಹುನೀರಿಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಯ ಐತಿಹಾಸಿಕ ಕ್ಷಣಕ್ಕೆ ಶಿವಮೊಗ್ಗ ಜಿಲ್ಲೆಯ ಲಕ್ಷಾಂತರ ಜನರು ಸಾಕ್ಷಿಯಾದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಎರಡ್ಮೂರು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದಲೇ ಆಗಮಿಸಲು ಆರಂಭಿಸಿದ ಜನತೆ, ಮಧ್ಯಾಹ್ನ 12 ಗಂಟೆ ಆದರೂ ವೇದಿಕೆಯತ್ತ ಜನರು ಬರುತ್ತಲೇ ಇದ್ದರು. ಕಣ್ಣು ಹಾಯಿಸಿದಷ್ಟೂ ಜನರೇ ಕಾಣಿಸುತ್ತಿದ್ದರು. ಮೂರು ನಾಲ್ಕು ಕೀಮಿ ನಡೆದುಕೊಂಡೇ ವೇದಿಕೆ ತಲುಪಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಲಕ್ಷಾಂತರ ಜನರಿಗೂ ಎರಡು ಕಡೆಗಳಲ್ಲಿ ಊಟ, ಉಪಾಹಾರದ ವ್ವವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಲಕ್ಷಕ್ಕೂ ಅಧಿಕ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬಿಸಿಬೇಳೆಬಾತ್‌, ಮೈಸೂರ್‌ ಪಾಕ್‌ ನೀಡಲಾಯಿತು. ನೂರಕ್ಕೂ ಅಧಿಕ ಕೌಂಟರ್‌ಗಳಲ್ಲಿ ತಿಂಡಿ, ಊಟ ವಿತರಿಸಲಾಯಿತು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಮಧ್ಯಾಹ್ನ ಪಲಾವ್‌, ಮೊಸರನ್ನ, ಸಿಹಿ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕರಿಗೆ ನೀರಿನ ಪ್ಯಾಕೆಟ್‌ಗಳನ್ನು ಎಲ್ಲ ಕಡೆಗಳಲ್ಲೂ ವಿತರಿಸಲಾಗುತ್ತಿತ್ತು. ಊಟದ ಪ್ರದೇಶದಲ್ಲಿ ಮಧ್ಯಾಹ್ನ ಲಕ್ಷಾಂತರ ಜನರಿಗೂ ಮಜ್ಜಿಗೆ ಪ್ಯಾಕೆಟ್‌ ನೀಡಲಾಯಿತು. ವಿಮಾನ ನಿಲ್ದಾಣ ಆವರಣ, ಹೊರಭಾಗ, ಊಟ ವಿತರಣೆ ಕೌಂಟರ್‌ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತಾ ಕಾರ್ಯ ನಿರ್ವಹಿಸಲಾಯಿತು.

ನೀರಿಕ್ಷೇಗೂ ಮೀರಿದ ಜನರು ಆಗಮಿಸಿದ್ದರಿಂದ ಕೀಮಿಗಟ್ಟಲೇ ದೂರ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಬೆಳಗ್ಗೆ ಆಗಮಿಸಿದ ಜನರು ಕಾರ್ಯಕ್ರಮ ಮುಗಿಸಿ ಸಂಜೆ ಆದರೂ ಇನ್ನೂ ಬಸ್‌ಗಳಲ್ಲಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಬಸ್‌ಗಳಲ್ಲಿ ತೆರಳಿದರು. ಕಾರು, ಬೈಕ್‌ಗಳಲ್ಲಿ ಆಗಮಿಸಿದ ಸಾರ್ವಜನಿಕರು ಹಿಂದಿರುಗುವ ಸಂದರ್ಭದಲ್ಲಿ ಹರಸಾಹಸಪಟ್ಟರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/shivamogganews

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!