ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕುರಿತು ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಗೃತಿ ಕಾರ್ಯ
ಶಿವಮೊಗ್ಗ | 3 ಮಾರ್ಚ್ 2023 | ಡಿಜಿ ಮಲೆನಾಡು.ಕಾಂ
ಫ್ಲೋರೈಡ್ ಅಂಶ ಹೆಚ್ಚಾಗಿರುವ ಆಹಾರ ಹಾಗೂ ನೀರು ಸೇವನೆಯಿಂದ ಫ್ಲೋರೋಸಿಸ್ ಕಾಯಿಲೆ ಬರುತ್ತದೆ. ಇದನ್ನು ತಡೆಗಟ್ಟುವುದು ಅತ್ಯಂತ ಅವಶ್ಯಕ. ಫ್ಲೋರೋಸಿಸ್ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ. ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಇದ್ದರೆ ಫ್ಲೋರೋಸಿಸ್ ಉಂಟಾಗುತ್ತದೆ. ದಂತ ಫ್ಲೋರೋಸಿಸ್, ಮೂಳೆ ಫ್ಲೋರೋಸಿಸ್ ಕಾಣಿಸಿಕೊಳ್ಳುತ್ತದೆ.
ಹೆಚ್ಚು ಫ್ಲೋರೈಡ್ ಇರುವ ನೀರು ಮತ್ತು ಆಹಾರ ಸೇವನೆಯಿಂದ ಬರುವ ಫ್ಲೋರೋಸಿಸ್ ಒಂದು ಹಾನಿಕಾರಕ ಮತ್ತು ನೋವು ಉಂಟು ಮಾಡುವ ಕಾಯಿಲೆ ಆಗಿದೆ. ಮಕ್ಕಳಲ್ಲಿ ಹಲ್ಲು ಸಂಪೂರ್ಣವಾಗಿ ಬೆಳೆಯುವ ಮುನ್ನ ಹೆಚ್ಚು ಪ್ರಮಾಣದ ಫ್ಲೋರೈಡ್ ಸೇವಿಸಿದರೆ ದಂತ ಫ್ಲೋರೋಸಿಸ್ ಕಂಡು ಬರುತ್ತದೆ.
ಫ್ಲೋರೋಸಿಸ್ ಲಕ್ಷಣಗಳು: ಹಲ್ಲುಗಳಲ್ಲಿ ಹಳದಿ, ಕಂದು ಬಣ್ಣ ಬದಲಾವಣೆ ಕಾಣಿಸುತ್ತದೆ. ಮೂಳೆ, ಕೀಲುಗಳಲ್ಲಿ ವೀಪರೀತ ನೋವು, ವಾಂತಿ, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಕಾಣಿಸುತ್ತದೆ. ಹೆಚ್ಚು ಮೂತ್ರ ವಿಸರ್ಜಿಸುವುದು ಹಾಗೂ ನಿಶ್ಯಕ್ತಿ ಕಾಣಿಸುವುದು ರೋಗದ ಲಕ್ಷಣಗಳಾಗಿವೆ. ಮೂತ್ರ ಪರೀಕ್ಷೆ ಹಾಗೂ ನೀರಿನ ಪರೀಕ್ಷೆಯ ಮೂಲಕ ಫ್ಲೋರೋಸಿಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಫ್ಲೋರೋಸಿಸ್ ತಡೆಗಟ್ಟಲು ಸೇವಿಸಬೇಕಾದ ಆಹಾರ ಪದಾರ್ಥಗಳು: ಫ್ಲೋರೈಡ್ ಅಂಶ ಕಡಿಮೆಯಿರುವ ಒಂದು ಪಿಪಿಎಂಗಿಂತ ಕಡಿಮೆ ಇರುವ ಶುದ್ಧ ನೀರು ಹಾಗೂ ಕೆಳಕಂಡ ಆಹಾರ ಪದಾರ್ಥಗಳನ್ನು ಸೇವಿಸುವುದು. ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೇಕಾಯಿ, ಸೀಬೆ, ನೆಲ್ಲಿಕಾಯಿ, ನಿಂಬೆ, ಟೋಮಾಟೋ, ಕ್ಯಾರೆಟ್, ಕಿತ್ತಳೆ, ಬೆಳ್ಳುಳ್ಳಿ, ಶುಂಠಿ, ಈರುಳ್ಳಿ, ಪರಂಗಿಹಣ್ಣು, ಗೆಣಸು ಸೇವಿಸಬಹುದಾಗಿದೆ.
ಸೇವಿಸಬಾರದ ಆಹಾರ ಪದಾರ್ಥಗಳು: ಹೆಚ್ಚು ಫ್ಲೋರೈಡ್ ಇರುವ ನೀರು ಕುಡಿಯಬಾರದು. ಹೆಚ್ಚು ಫ್ಲೋರೈಡ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಕಪ್ಪು ಟೀ, ಅಡಕೆ, ಕಪ್ಪು ಕಲ್ಲುಪ್ಪು ಹಾಗೂ ಅದರಿಂದ ತಯಾರಿಸಿದ ಆಹಾರ ಪದಾರ್ಥ, ತಂಬಾಕು ಸೇವಿಸಬಾರದು. ಹೆಚ್ಚು ಫ್ಲೋರೈಡ್ ಅಂಶವಿರುವ ಟೂತ್‌ಪೇಸ್ಟ್, ಬಾಯಿ ಸ್ವಚ್ಛಗೊಳಿಸುವ ದ್ರಾವಣಗಳನ್ನು ಬಳಸಬಾರದು.
ಫ್ಲೋರೋಸಿಸ್ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಫ್ಲೋರೋಸಿಸ್ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu