ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 22ರಿಂದ 30ರವರೆಗೆ ವಿಶೇಷ ಅಲಂಕಾರ, ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ
ಶಿವಮೊಗ್ಗ | 22 ಮಾರ್ಚ್ 2023 | ಡಿಜಿ ಮಲೆನಾಡು.ಕಾಂ
ದೂರ್ವಾಸ ಕ್ಷೇತ್ರ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಸೀತಾರಾಮಾಂಜನೇಯ ಕೈಂಕರ್ಯ ಅಭಿವೃಧಿನಿ ಸಭಾದ ಸಹಯೋಗದಲ್ಲಿ ಮಾರ್ಚ್ 22ರಿಂದ 30ರವರೆಗೆ ವಿಶೇಷ ಅಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi ಚಾಂದ್ರಮಾನ ಯುಗಾದಿ ಹಾಗೂ ಶ್ರೀ ಶೋಭಕೃತು ನಾಮ ಸಂವತ್ಸರದ ಶುಭಾಶಯಗಳು.
ದೂರ್ವಾಸ ಕ್ಷೇತ್ರ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 22ರಿಂದ 30ರವರೆಗೆ ಶ್ರೀ ರಾಮರಿಗೆ ಸಹಸ್ರ ನಾಮಾರ್ಚನೆ ಹಾಗೂ ಉತ್ಸವ ಶ್ರೀ ರಾಮರಿಗೆ ಪ್ರತಿ ದಿನ ಒಂದೊಂದು ವಿಶೇಷ ಅಲಂಕಾರ ಇರುತ್ತದೆ. ಚಾಂದ್ರಮಾನ ಯುಗಾದಿ ಪ್ರಯುಕ್ತ ಬೆಳಗ್ಗೆ 9.30ಕ್ಕೆ ಶ್ರೀ ಆಂಜನೇಯರಿಗೆ ಮತ್ತು ಉತ್ಸವ ಶ್ರೀ ರಾಮರಿಗೆ ಅಭಿಷೇಕ ನಡೆಯಲಿದೆ. ಗರುಡಾರೂಢ ಮಹಾವಿಷ್ಣು ಅಲಂಕಾರ ಮಾಡಲಾಗುತ್ತದೆ. ಸಂಜೆ 7.30ಕ್ಕೆ ವಿದ್ವಾನ್ ಹಂದಲಸು ವಾಸುದೇವಭಟ್ಟ ಅವರಿಂದ ಪಂಚಾಂಗ ಶ್ರವಣ ಇರಲಿದೆ.
ಮಾರ್ಚ್ 23ರ ಗುರುವಾರ ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ, ಸಂಜೆ 6.45ಕ್ಕೆ ಭರತನ ಭಕ್ತಿ ಕುರಿತು ವಿದ್ವಾನ್ ವಿನಾಯಕ ಎಂ.ಎಸ್. ಅವರಿಂದ ಉಪನ್ಯಾಸ ನಡೆಯಲಿದೆ. ಮಾರ್ಚ್ 24ರ ಶುಕ್ರವಾರ ಸೀತಾ ಸ್ವಯಂವರ ಅಲಂಕಾರ, ಸಂಜೆ 7ಕ್ಕೆ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯ ವತಿಯಿಂದ ಉತ್ಸವ ಸಂಪ್ರದಾಯದ ಕೃತಿಗಳು ಕುರಿತು ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 25ರಂದು ಸೀತಾ ಕಲ್ಯಾಣ ಅಲಂಕಾರ, ಸಂಜೆ 7.30ಕ್ಕೆ ದೇವಾಲಯ ಭಕ್ತರಿಂದ ಭಜನಾ ಕಾರ್ಯಕ್ರಮ, ಮಾರ್ಚ್ 26ರಂದು ಕಬಂಧ ಮೋಕ್ಷ ಅಲಂಕಾರ, ಸಂಜೆ 7.30ಕ್ಕೆ ವಿದ್ವಾನ್ ಸಂಹಿತ್ ನಟೇಶ್ ಮತ್ತು ಹರಿ ಡಿ.ಜೆ. ತಂಡದವರಿಂದ ಯುಗಳ ಹಾಡುಗಾರಿಕೆ, ಮಾರ್ಚ್ 27ರಂದು ದರ್ಭಶಯನ ಅಲಂಕಾರ, ಸಂಜೆ 7.30ಕ್ಕೆ ವಿದ್ವಾನ್ ಅಚ್ಚುತ ಅವಧಾನಿ ಕಾವ್ಯವಾಚನ, ವಿದ್ವಾನ್ ಕುಮಾರಸ್ವಾಮಿ ಅವರಿಂದ ವ್ಯಾಖ್ಯಾನ ನಡೆಯಲಿದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಮಾರ್ಚ್ 28ರಂದು ಸೇತುಬಂಧ ಅಲಂಕಾರ, ಸಂಜೆ 7.30ಕ್ಕೆ ವಿದ್ವಾನ್ ಆದಿತ್ಯ ಎಂ.ಆರ್. ಮತ್ತೂರು ತಂಡದವರಿಂದ ಹಾಡುಗಾರಿಕೆ, ಮಾರ್ಚ್ 29ರಂದು ರಾವಣ ಸಂಹಾರ ಅಲಂಕಾರ, ಸಂಜೆ 7.30ಕ್ಕೆ ಹರಿದಾಸರು ಕಂಡ ಶ್ರೀ ರಾಮ ವ್ಯಾಖ್ಯಾನ ಮತ್ತು ಹಾಡುಗಾರಿಕೆ ನಡೆಯಲಿದೆ.
ಮಾರ್ಚ್ 30ರಂದು ಶ್ರೀ ರಾಮ ನವಮಿ ಪ್ರಯುಕ್ತ ಶ್ರೀ ಆಂಜನೇಯರಿಗೆ ಅಭಿಷೇಕ, ಬೆಳಗ್ಗೆ 7.30ಕ್ಕೆ ಶ್ರೀ ರಾಮ ತಾರಕ ಹೋಮ, ಬೆಳಗ್ಗೆ 9.30ಕ್ಕೆ ಮೂಲ ದೇವರಿಗೆ ಹಾಗೂ ಉತ್ಸವ ದೇವರಿಗೆ ಮಹಾಭಿಷೇಕ, ಬೆಳಗ್ಗೆ 11.30ಕ್ಕೆ ಮಂಜಕಾಪು ಸೇವೆ (ಅರಿಶಿಣದ ಅಲಂಕಾರ), ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ವಸಂತ ಸೇವೆ ನಡೆಯಲಿದೆ.
ಮಾರ್ಚ್ 30ರ ಸಂಜೆ 4.30ಕ್ಕೆ ಪಟ್ಟಾಭಿಷೇಕದ ಅಲಂಕಾರ, ಮಹಾಪೂಜೆ, ಮಹಾನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರಲಿದೆ. ಮಾರ್ಚ್ 31ರ ಸಂಜೆ 7ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಲಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu