ವಿನ್ ಲೈಫ್ ಟ್ರಸ್ಟ್ ವತಿಯಿಂದ “ಆರೋಗ್ಯ ಉತ್ಸವ” ಜಾಗೃತಿ ಕಾರ್ಯಕ್ರಮ ಏಪ್ರಿಲ್ 2ಕ್ಕೆ
ಶಿವಮೊಗ್ಗ | 31 ಮಾರ್ಚ್ 2023 | ಡಿಜಿ ಮಲೆನಾಡು.ಕಾಂ
ವಿನ್ ಲೈಫ್ ಟ್ರಸ್ಟ್ ವತಿಯಿಂದ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಏಪ್ರಿಲ್ 2ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2ರವರೆಗೆ “ಆರೋಗ್ಯ ಉತ್ಸವ” ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿನ್ ಲೈಫ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪೃಥ್ವಿ ಬಿ.ಸಿ. ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/shivamogganews ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಪ್ರಾಯೋಗಿಕ ತರಬೇತಿ, ಕಾರ್ಯಾಗಾರ, ಯೋಗ, ಉಪನ್ಯಾಸ ಸರಣಿ, ವಸ್ತು ಪ್ರದರ್ಶನ, ರಸಪ್ರಶ್ನೆ, ಕಿರುನಾಟಕ ಹಾಗೂ ಸಮಾಲೋಚನೆ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಗುತ್ತದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ ಘೋಷವಾಕ್ಯದೊಂದಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಪ್ರಿಲ್ 2ರಂದು ಬೆಳಗ್ಗೆ 9ಕ್ಕೆ ಶಾಸಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತರಬೇತಿ ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ, ಮೆಟ್ರೊ ಆಸ್ಪತ್ರೆ ಅಧ್ಯಕ್ಷ ಡಾ. ಪಿ.ಲಕ್ಷ್ಮೀನಾರಾಯಣ ಆಚಾರ್, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಮೆಟ್ರೊ ಆಸ್ಪತ್ರೆ ಸಿಇಒ ಡಾ. ತೇಜಸ್ವಿ ಟಿ.ಎಸ್ ಉಪಸ್ಥಿತರಿರುವರು ಎಂದು ಹೇಳಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ತುರ್ತು ಜೀವರಕ್ಷಕ ತರಬೇತಿ ಕಾರ್ಯಾಗಾರ ಕುರಿತು ಬೆಂಗಳೂರಿನ ಡಾ. ದೇವಾನಂದ.ಎನ್.ಎಸ್., ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ ಕುರಿತು ಡಾ. ಪ್ರೀತಿ ವಿ ಶಾನಬಾಗ್, ಡಾ. ಶಶಿಕಾಂತ್ ಕುಂಬಾರ್ ಮಾತನಾಡಲಿದ್ದಾರೆ. ನಂತರ ಮಧುಮೇಹ @ 360 ಕುರಿತು ಉಪನ್ಯಾಸ ಇರಲಿದೆ ಎಂದು ತಿಳಿಸಿದರು.
ಮೆಟ್ರೊ ಆಸ್ಪತ್ರೆ, ಬೆಂಗಳೂರು ಮಣಿಪಾಲ್ ಆಸ್ಪತ್ರೆ ಸಹಯೋಗ ನೀಡಲಿವೆ ಎಂದರು. ಡಾ. ಶಂಕರ್, ಡಾ. ವಿಜಯ್, ರಹಮತ್, ಬದ್ರಿನಾಥ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/shivamogganews
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu