ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸುವ ಕಾರ್ಯ ಶ್ಲಾಘನೀಯ
ಶಿವಮೊಗ್ಗ | 22 ಏಪ್ರಿಲ್ 2023 | ಡಿಜಿ ಮಲೆನಾಡು.ಕಾಂ
ಮಲೆನಾಡಿನ ಭಾಗದಲ್ಲಿ ಪ್ರಾರಂಭವಾದ ಎನ್ವೆಂಚರ್ ಘಟಕವು ಮೆಕ್ಯಾನಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಪಿಇಎಸ್ ಸಂಸ್ಥೆಯ ಸಿಇಓ ಎಸ್ ವೈ ಉಮಾದೇವಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಪಿಇಎಸ್ ಶಿವಮೊಗ್ಗದಲ್ಲಿ ಎನ್ವೆಂಚರ್ ಇಂಜಿನಿಯರಿಂಗ್ ಕಂಪನಿಯ 3 ನೇ ಶಾಖೆಯ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಪದವೀಧರರಿಗೆ ದೊರಕುವ ಆಕರ್ಷಕ ಸಂಬಳವನ್ನು ಕಂಪನಿಯು ಶಿವಮೊಗ್ಗದಲ್ಲಿ ನೀಡುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದ ಪಿಇಎಸ್ಐಟಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಎನ್ವೆಂಚರ್ ಇಂಜಿನಿಯರಿಂಗ್ ಎಲ್ ಎಲ್ ಪಿ ಬೆಂಗಳೂರು ಕಂಪನಿಯು 3 ನೇ ಶಾಖೆಯನ್ನು ಆರಂಭಿಸಿದೆ. ಕಂಪನಿಯ ಅಧ್ಯಕ್ಷ ಅನಿಲ್ ಶಿವದಾಸ್, ಎನ್ವೆಂಚರ್ ಸಂಸ್ಥೆಯು 2000 ರಲ್ಲಿ ಸ್ಥಾಪಿಸಿದ್ದು, ಜಗತ್ತಿನಾದ್ಯಂತ 300 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ಪಿಇಎಸ್ ನ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗಗಳ 25 ವಿದ್ಯಾರ್ಥಿಗಳಿಂದ ಶುರುವಾದ ಘಟಕವು ಮುಂದಿನ ದಿನಗಳಲ್ಲಿ 250 ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಲಿದೆ ಎಂದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕಂಪನಿಯ ಎಂಜಿನಿಯರಿಂಗ್ ಸೇವೆಗಳ ಉಪಾಧ್ಯಕ್ಷ ಗಿರೀಶ್ ಚಂದ್ರ ಬಾಬು ಶೆಟ್ಟಿ, ಪಿಇಎಸ್ ಟ್ರಸ್ಟ್ ಆಡಳಿತಾಧಿಕಾರಿ ಡಾ. ನಾಗರಾಜ ಆರ್, ಪಿಇಎಸ್ ಐಟಿಎಂ ಕಾಲೇಜಿನ ಪ್ರಾಚಾರ್ಯ ಡಾ. ಚೈತನ್ಯಕುಮಾರ ಎಂ ವಿ, ಕಂಪನಿಯ ಸಿ ಓ ಓ ವಿಲಫರ್ಡ್ ಫೆರ್ನಾಂಡಿಸ್, ಪಿಇಎಸ್ಐಟಿಎಂ ನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.
ಪಿಇಎಸ್ ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ಕುಮಾರ್ ಟಿ ಎಂ, ಎನ್ವೆಂಚರ್ ಇಂಜಿನಿಯರಿಂಗ್ ಎಲ್ ಎಲ್ ಪಿ ಬೆಂಗಳೂರು ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕ ರವಿ ಶಂಕರ ಹಾಜರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu