ಕೋಕೋ ಬೆಳೆಯಲು ಯುವಜನರಲ್ಲಿ ಆಸಕ್ತಿ ಅಗತ್ಯ, ಕೋಕೋ ರಾಷ್ಟ್ರೀಯ ಸಮ್ಮೇಳನ
ಶಿವಮೊಗ್ಗ | 4 ಜೂನ್ 2023 | ಡಿಜಿ ಮಲೆನಾಡು.ಕಾಂ
ಕೋಕೋ ಬೆಳೆಯನ್ನು ಬೆಳೆಯಲು ಯುವಜನತೆ ಹೆಚ್ಚು ಆಸಕ್ತಿ ವಹಿಸಬೇಕು. ಕೋಕೋ ಸಣ್ಣ ಉದ್ದಿಮೆಗಳು, ಸ್ಟಾರ್ಟ್ ಅಪ್‍ಗಳನ್ನು ಆರಂಭಿಸಲು ಉತ್ತೇಜನ ಅಗತ್ಯವಿದೆ ಎಂದು ಭಾರತ ಸರ್ಕಾರದ ಕೃಷಿ ಸಚಿವಾಲಯದ ತೋಟಗಾರಿಕೆ ಆಯುಕ್ತ ಡಾ. ಪ್ರಭಾತ್ ಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಡೈರಕ್ಟರೇಟ್ ಆಫ್ ಕ್ಯಾಶು ಆಂಡ್ ಕೋಕೊ ಡೆವಲಪ್‍ಮೆಂಟ್ ಕೊಚಿನ್ ಸಹಯೋಗದಲ್ಲಿ ಶಿವಮೊಗ್ಗ ನಗರದ ಜೆಎನ್‍ಎನ್ ಕಾಲೇಜಿಲ್ಲಿ ಏರ್ಪಡಿಸಿದ್ದ ಕೋಕೊ ಅಭಿವೃದ್ದಿ, ಸವಾಲುಗಳು ಮತ್ತು ಅವಕಾಶ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೋಕೋ ವಾಣಿಜ್ಯ ಬೆಳೆಯಾಗಿದ್ದು ಕೋಕೋವನ್ನು ಅಂತರಬೆಳೆಯಾಗಿ ಬೆಳೆದಲ್ಲಿ ರೈತರಿಗೆ ಅನುಕೂಲವಾಗುವುದು. ಸಣ್ಣ ಸಣ್ಣ ಇಡುವಳಿದಾರರು ಅಡಕೆ, ತೆಂಗು, ರಬ್ಬರ್ ಹೀಗೆ ವಿವಿಧ ಬೆಳೆಗಳೊಂದಿಗೆ ಅಂತರ ಬೆಳೆಯಾಗಿ ಬೆಳೆದಲ್ಲಿ ಉತ್ಪಾದನಾ ವೆಚ್ಚವೂ ತಗ್ಗುತ್ತದೆ ಎಂದರು.
ಅಡಕೆಯಿಂದ ಲಾಭ ಹೆಚ್ಚಿರುವುದರಿಂದ ಸರ್ಕಾರದ ಸಬ್ಸಿಡಿ, ಉತ್ತೇಜನ ಇಲ್ಲದಿದ್ದರೂ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಕೋಕೋ ಬೆಳೆಗೆ ಪೈಲಟ್ ಕಾರ್ಯಕ್ರಮ, ಪ್ರಾತ್ಯಕ್ಷಿಕೆ ಹಾಗೂ ಕಾಳಜಿ ಅವಶ್ಯಕವಾಗಿದೆ. ಕೋಕೋ ಉತ್ಪನ್ನ ಕಂಪೆನಿಗಳು ರೈತರಲ್ಲಿ ವಿಶ್ವಾಸ ಮುಡಿಸಬೇಕು. ಬೆಳೆಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ಮಾರ್ಗಸೂಚಿ ಬೇಕಿದೆ. ಯುವಜನತೆ ಕೋಕೋ ಬೆಳೆ ಬೆಳೆಯಬೇಕು ಎಂದು ಹೇಳಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿದರು. ಕೋಕೋ ಬೆಳೆದು ಯಶಸ್ವಿಯಾದ ರಾಜ್ಯದ ನವೀನ್ ಕೃಷ್ಣ ಶಾಸ್ತ್ರಿ ಮತ್ತು ಪ್ರಶಾಂತಿ ಶಾಸ್ತ್ರಿ, ಕೇರಳದ ಟೋನಿ ಜೇಮ್ಸ್, ತಮಿಳುನಾಡಿನ ಡಿ.ಚಂದ್ರಶೇಖರನ್, ಆಂಧ್ರಪ್ರದೇಶದ ನೇಮಣಿ ಗಣೇಶ್ವರ ರಾವ್ ಅವರನ್ನು ಸನ್ಮಾನಿಸಲಾಯಿತು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಸಂಶೋಧನಾ ನಿರ್ದೇಶಕ ಡಾ. ಬಿ.ಹೇಮ್ಲಾನಾಯ್ಕ್, ಕೊಚ್ಚಿ ಡಿಸಿಸಿಓ ಮಾಜಿ ನಿರ್ದೇಶಕ ಡಾ. ವೆಂಕಟೇಶ್ ಎನ್ ಹುಬ್ಬಳ್ಳಿ, ವಿವಿ ನಿರ್ವಹಣಾ ಮಂಡಳಿ ಸದಸ್ಯ ಕೆ.ನಾಗರಾಜ್, ವೀರಭದ್ರದ್ದಪ್ಪ ಪೂಜಾರ್, ಕೊಚಿನ್ ಡಿಸಿಸಿಓ ನಿರ್ದೇಶಕ ಡಾ. ರವೀಂದ್ರ ಕುಮಾರ್ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu