ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜೂನ್ 25ಕ್ಕೆ ಸಹಚೇತನ ನಾಟ್ಯಾಲಯದಿಂದ ಸಾಮೂಹಿಕ ರಂಗ ಪ್ರವೇಶ “ನೃತ್ಯಕದಂಬಕಂ”
ಶಿವಮೊಗ್ಗ | 23 ಜೂನ್ 2023 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜೂನ್ 25ರ ಸಂಜೆ 5.30ಕ್ಕೆ ಸಹಚೇತನ ನಾಟ್ಯಾಲಯ ಸಂಸ್ಥೆ ವತಿಯಿಂದ ಐದು ವಿದ್ಯಾರ್ಥಿನಿಯರ ಸಾಮೂಹಿಕ ರಂಗ ಪ್ರವೇಶವನ್ನು “ನೃತ್ಯಕದಂಬಕಂ” ಹೆಸರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಜೂನ್ 25ರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಮೈಸೂರಿನ ಹಿರಿಯ ನೃತ್ಯ ವಿದ್ವಾಂಸರಾದ ಡಾ. ತುಳಸಿ ರಾಮಚಂದ್ರ ಉದ್ಘಾಟಿಸುವರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಕಲಾಪೋಷಕ ಎಸ್.ಕೆ.ಶೇಷಾಚಲ, ಕೆ.ಇ.ಕಾಂತೇಶ್, ಸಹಚೇತನ ನಾಟ್ಯಾಲಯ ಅಧ್ಯಕ್ಷ ಎನ್.ಆರ್.ಪ್ರಕಾಶ್, ನೃತ್ಯಗುರು ಸಹನಾ ಚೇತನ್ ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಹಚೇತನ ನಾಟ್ಯಾಲಯದಲ್ಲಿ ಈವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿದ್ದು, ನೂರಾರು ವಿದ್ಯಾರ್ಋಥಿಗಳು ಜ್ಯೂನಿಯರ್ ಹಾಗೂ ಸಿನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ನಮ್ಮ ಸಂಸ್ಥೆಯ ಜತೆಯಲ್ಲಿ ರಾಜ್ಯ, ಹೊರರಾಜ್ಯಗಳಲ್ಲಿ ಪ್ರದರ್ಶನ ಕೂಡ ನೀಡುತ್ತಿದ್ದಾರೆ. | ಸಹನಾ ಚೇತನ, ನೃತ್ಯ ಗುರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಪ್ರತಿಭಾವಂತ ನೃತ್ಯ ವಿದ್ಯಾರ್ಥಿಗಳಿಗೆ ಸಾಮೂಹಿಕ ರಂಗಪ್ರವೇಶ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅತ್ಯಂತ ವಿಶೇಷವಾಗಿದೆ. ಸಹಚೇತನ ನಾಟ್ಯಾಲಯ ನಡೆಸುತ್ತಿರುವ ವಿಶೇಷ ಪ್ರಯತ್ನಕ್ಕೆ ಎಲ್ಲರ ಪ್ರೋತ್ಸಾಹ ಅತ್ಯಂತ ಅವಶ್ಯಕ. | ಎಸ್.ಎನ್.ಚನ್ನಬಸಪ್ಪ, ಸಹಚೇತನಾ ನಾಟ್ಯಾಲಯ ಗೌರವಾಧ್ಯಕ್ಷ.
ಸಾಮೂಹಿಕ ರಂಗ ಪ್ರವೇಶವನ್ನು ಉಚಿತವಾಗಿ ನಾಟ್ಯಾಲಯವೇ ಆಯೋಜಿಸುವ ಮೂಲಕ ರಾಜ್ಯದಲ್ಲಿಯೇ ಮಾದರಿ ಪ್ರಯತ್ನ ನಡೆಸುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಇತರರಿಗೂ ಸ್ಫೂರ್ತಿ ಸಿಗುತ್ತದೆ. ಪ್ರತಿಭಾವಂತ ನೃತ್ಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಎಲ್ಲೆಡೆಯು ಆಗಬೇಕು. | ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ.
ಭರತನಾಟ್ಯ ವಿದ್ಯಾರ್ಥಿಗಳಾದ ಸಿಂಧುಶ್ರೀ ಅಡಿಗ, ಕಾಮಾಕ್ಷಿ ಆರ್.ಪ್ರಭು, ಸೇಜಲ್.ಡಿ.ಎ., ಶರಣ್ಯ.ಎ.ಸಿ., ರಕ್ಷಿತಾ.ಆರ್., ಎಂಎಲ್ಸಿ ಡಿ.ಎಸ್.ಅರುಣ್, ನೃತ್ಯಗುರು ಸಹನಾ ಚೇತನ್, ಆನಂದರಾಮ್, ಹರೀಶ್ ಕಾರ್ಣಿಕ್, ಜಾಧವ್, ಮಾಲತೇಶ್, ಕೌಶಿಕ್ ಪಂಡಿತ್, ರೇಣುಕಯ್ಯ, ಪ್ರಜ್ವಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu