ಸ್ವಾತಂತ್ರ್ಯ ದಿನದಂದು ತುಂಗಾ ನದಿದಂಡೆ ಯೋಜನೆ ಲೋಕಾರ್ಪಣೆ, ಆಗಸ್ಟ್‌ 15ರ ನಂತರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ

ಸ್ವಾತಂತ್ರ್ಯ ದಿನದಂದು ತುಂಗಾ ನದಿದಂಡೆ ಯೋಜನೆ ಲೋಕಾರ್ಪಣೆ, ಆಗಸ್ಟ್‌ 15ರ ನಂತರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ

ಶಿವಮೊಗ್ಗ | 29 ಜೂನ್ 2023 | ಡಿಜಿ ಮಲೆನಾಡು.ಕಾಂ

ಸ್ಮಾರ್ಟ್‌ ಸಿಟಿ ಶಿವಮೊಗ್ಗ ನಗರದ ತುಂಗಾ ನದಿ ದಡದಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿದಂಡೆ ಯೋಜನೆ ಪೂರ್ಣಗೊಂಡಿದ್ದು, ಸ್ವಾತಂತ್ರ್ಯ ದಿನದಂದು ಲೋಕಾರ್ಪಣೆಗೊಳ್ಳಲಿದೆ. ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಸಿಗಲಿದೆ ಎಂದು ಸ್ಮಾರ್ಟ್‌ ಸಿಟಿ ಎಂಡಿ ಚಿದಾನಂದ ವಟಾರೆ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಬೆಕ್ಕಿನ ಕಲ್ಮಠದಿಂದ ಬೈಪಾಸ್‌ ರಸ್ತೆವರೆಗಿನ ತುಂಗಾ ನದಿ ಪಕ್ಕದ ಜಾಗದಲ್ಲಿ (2.7 ಕಿಮೀ ) ಗುಜರಾತ್‌ನ ಸಾಬರಮತಿ ರಿವರ್‌ ಫ್ರಂಟ್‌ ಯೋಜನೆ ಮಾದರಿಯಾಗಿಸಿಕೊಂಡು ಶಿವಮೊಗ್ಗದಲ್ಲಿಯೂ ತುಂಗಾ ರಿವರ್‌ ಫ್ರಂಟ್‌ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಪ್ರವಾಸಿಗರ ಆಕರ್ಷಣೆ ದೃಷ್ಠಿಯಿಂದಲೂ ಮಹತ್ತರ ಯೋಜನೆ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಯೋಜನೆಯು ಪಾದಾಚಾರಿ ಮಾರ್ಗ,  ಸೈಕಲ್‌ ಟ್ರ್ಯಾಕ್‌, ಹೂದೋಟ, ಮಕ್ಕಳ ಮನರಂಜನೆಗೆ ಆಟಿಕೆ, ಜಿಮ್‌ ಉಪಕರಣ, ಅಲಂಕಾರಿಕಾ ಗೋಡೆ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ವೀಕ್ಷಣಾ ಗೋಪುರ, ಕಾರಂಜಿ, ಮಾಹಿತಿ ಕೇಂದ್ರ ಸಹ ಇರಲಿದೆ. 70ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಬೋಟಿಂಗ್‌ ವ್ಯವಸ್ಥೆ ಸಹ ಇರಲಿದೆ ಎಂದರು.

Click on this Picture, Like & Follow Facebook Page ” Digi Malenadu”

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

digimalenadu

ಶಿವಮೊಗ್ಗ
error: Content is protected !!