ಆಗಸ್ಟ್‌ 1 ರಿಂದ ನಂದಿನಿ ಹಾಲು, ಮೊಸರು, ಉತ್ಪನ್ನಗಳ ದರ ಹೆಚ್ಚಳ

ಆಗಸ್ಟ್‌ 1 ರಿಂದ ನಂದಿನಿ ಹಾಲು, ಮೊಸರು, ಉತ್ಪನ್ನಗಳ ದರ ಹೆಚ್ಚಳ

ಶಿವಮೊಗ್ಗ | 31 ಜುಲೈ 2023 | ಡಿಜಿ ಮಲೆನಾಡು.ಕಾಂ

ನಂದಿನಿ ಹಾಲು, ಮೊಸರು ದರ ಆಗಸ್ಟ್‌  1 ರಿಂದ ಹೆಚ್ಚಳ ಆಗಲಿದ್ದು, ಪ್ರತಿ ಲೀಟರ್‌ ಗೆ 3 ರೂ. ದರ ಏರಿಕೆಯಾಗಿದೆ. ಹಾಲು, ಮೊಸರು ಸೇರಿ ಇತರ ಉತ್ಪನ್ನಗಳ ದರವು ಹೆಚ್ಚಳವಾಗಿದೆ ಎಂದು ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಎನ್.ಎಚ್‌.ಶ್ರೀಪಾದರಾವ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ರಾಜ್ಯ ಸರ್ಕಾರದ ಸೂಚನೆಯಂತೆ ಪ್ರತಿ ಲೀಟರ್‌ಗೆ 3 ರೂ. ದರ ಹೆಚ್ಚಿಸಿದ್ದು, ಹೆಚ್ಚುವರಿ ಮಾಡಿರುವ ಸಂಪೂರ್ಣ ದರವನ್ನು ಹಾಲು ಉತ್ಪಾದಕ ರೈತರಿಗೆ ವರ್ಗಾಯಿಸಲು ಸೂಚಿಸಲಾಗಿದೆ. ಆಗಸ್ಟ್‌ 1 ರಿಂದ ಅನ್ವಯ ಆಗುವಂತೆ ಹಾಲು ಉತ್ಪಾದಕ ಸಂಘಗಳಿಗೆ 36.83 ರೂ. ಹಾಗೂ ಹಾಲು ಉತ್ಪಾದಕರಿಗೆ 34.97 ರೂ. ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1ಲೀ. ಟೋನ್ಡ್ ಹಾಲು ರೂ.39.00 ರಿಂದ ರೂ.42.00, 510ಮಿ.ಲೀ. ಟೋನ್ಡ್ ಹಾಲು ರೂ.20.00 ರಿಂದ ರೂ.22.00, 1ಲೀ. ಶುಭಂ ಸ್ಟಾಂಡರ್ಡ್ ರೂ.45.00 ರಿಂದ ರೂ.48.00, 510ಮಿ.ಲೀ. ಶುಭಂ ಸ್ಟಾಂಡರ್ಡ್ ರೂ.23.00 ರಿಂದ ರೂ.25.00, 1ಲೀ. ಹೊಮೋಜಿನೈಸ್ಡ್ ಶುಭಂ ಹಾಲು ರೂ.46.00 ರಿಂದ ರೂ.49.00, 510ಮಿ.ಲೀ. ಹೊಮೋಜಿನೈಸ್ಡ್ ಶುಭಂ ಹಾಲು ರೂ.23.00 ರಿಂದ ರೂ.25.00, 500ಗ್ರಾಂ. ಮೊಸರು ರೂ.24.00 ರಿಂದ ರೂ.26.00, 200ಗ್ರಾಂ. ಮೊಸರು ರೂ.11.00ರಿಂದ ರೂ.12.00ಗಳಿಗೆ ಹೆಚ್ಚಿಸಲಾಗಿದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಹೆಚ್.ಕೆ.ಬಸಪ್ಪ, ಸಿ.ವೀರಭದ್ರಬಾಬು, ಡಿ.ಆನಂದ, ವಿದ್ಯಾಧರ, ಟಿ.ಶಿವಶಂಕರಪ್ಪ, ಎಚ್.ಬಿ.ದಿನೇಶ್, ಬಿ.ಜಿ.ಬಸವರಾಜಪ್ಪ, ಕೆ.ಎ.ತಾರನಾಥ, ಕೆ.ಎನ್.ಸೋಮಶೇಖರಪ್ಪ, ಜಿ.ಪಿ.ಯಶವಂತರಾಜು, ಎನ್.ಹೆಚ್.ಭಾಗ್ಯ, ಎನ್.ಡಿ.ಹರೀಶ್, ಕೆ.ಪಿ.ರುದ್ರೇಗೌಡ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!