ಶಿವಮೊಗ್ಗ ಜಿಲ್ಲೆಯ ಹೋಮ್ ಸ್ಟೇಗಳ ನೊಂದಣಿಗೆ ಸೂಚನೆ
ಶಿವಮೊಗ್ಗ | 3 ಆಗಸ್ಟ್ 2023 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋಮ್ ಸ್ಟೇಗಳು ಸರ್ಕಾರದ ಅದೇಶದನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಈವರೆಗೂ ಕಾಲಾವಕಾಶ ನೀಡಿದರೂ ನೋಂದಣಿ ಮಾಡಿರದ ಹೋಮ್ ಸ್ಟೇ ಮಾಲೀಕರು ಆಗಸ್ಟ್ 31ರೊಳಗೆ ನೋಂದಾಯಿಸಿಕೊಳ್ಳುವುದು. ತಪ್ಪಿದ್ದಲ್ಲಿ ಅಂತಹ ಹೋಮ್ ಸ್ಟೇಗಳನ್ನು ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಎಚ್ಚರಿಸಿದ್ದಾರೆ.
Click on below this picture, Like & Follow Facebook Page ” Digi Malenadu “
2015-20ನೇ ಸಾಲಿನಲ್ಲಿ ಹೋಮ್ ಸ್ಟೇ ನಡೆಸಲು ನೀಡಿರುವ ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಂಡಿದೆ. ಅಂತಹ ಹೋಮ್ ಸ್ಟೇಗಳು ಪರವಾನಿಗೆಯನ್ನು ನವೀಕರಿಸುವುದು. ಈ ಸಂಬಂಧ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ. ಇಲಾಖೆ ಅಂತರ್ಜಾಲ ತಾಣ ಮುಖಾಂತರ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳುವುದು.
ಹೋಮ್ ಸ್ಟೇ ಪರಿವೀಕ್ಷಣೆಗೆ ಅಧಿಕಾರಿಗಳು ಭೇಟಿ ನೀಡಿದಾಗ ಹೋಮ್ ಸ್ಟೇ ಪ್ರಮಾಣ ಪತ್ರ ಅಥವಾ ನೋಂದಣಿಗೆ ಅರ್ಜಿ ಸಲ್ಲಿಸಿರುವ ದಾಖಲಾತಿಗಳನ್ನು ಹಾಜರುಪಡಿಸುವುದು. ಇಲ್ಲವಾದಲ್ಲಿ ಮಾಲೀಕರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಅನುಮತಿ ಅಥವಾ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹೋಮ್ ಸ್ಟೇಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ, ದೂರು ಇದ್ದಲ್ಲಿ ಅವುಗಳ ವಿವರಗಳನ್ನು ಪತ್ರ ಮುಖೇನ ಸಹಾಯಕ ನಿರ್ದೇಶಕರ ಕಚೇರಿ, ‘ಎ’ ಬ್ಲಾಕ್, 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ-577205, ದೂ.ಸಂ.: 08182-251444 ಅಥವಾ ಇ-ಮೇಲ್ [email protected] ಗೆ ದೂರು ನೀಡಬಹುದಾಗಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/