ಟಿ ಸೀನಪ್ಪ ಶೆಟ್ಟಿ ವೃತ್ತ ನಾಮಫಲಕ ಅನಾವರಣ ಆಗಸ್ಟ್‌ 11ಕ್ಕೆ

ಟಿ ಸೀನಪ್ಪ ಶೆಟ್ಟಿ ವೃತ್ತ ನಾಮಫಲಕ ಅನಾವರಣ ಆಗಸ್ಟ್‌ 11ಕ್ಕೆ

ಶಿವಮೊಗ್ಗ | 10 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿರುವ ಶ್ರೀನಿಧಿ ಸಿಲ್ಕ್ಸ್‌ ಮತ್ತು ಟೆಕ್ಸ್‌ ಟೈಲ್ಸ್‌ ಎದುರಿನ ವೃತ್ತದಲ್ಲಿ ಆಗಸ್ಟ್‌ 11 ರಂದು ಬೆಳಗ್ಗೆ 11ಕ್ಕೆ “ಟಿ ಸೀನಪ್ಪ ಶೆಟ್ಟಿ ವೃತ್ತ” ನಾಮಫಲಕ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟಿ ಸೀನಪ್ಪ ಶೆಟ್ಟಿ ಕುಟುಂಬದ ಸದಸ್ಯ, ಉದ್ಯಮಿ ಟಿ.ಆರ್.ಅಶ್ವತ್ಥ್‌ ನಾರಾಯಣ ಶೆಟ್ಟಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ಟಿ ಸೀನಪ್ಪ ಶೆಟ್ಟಿ ಸಹೋದರರು ಅಣ್ಣನ ನೆನಪಿನಲ್ಲಿ ಪುರಸಭೆ ಅನಮತಿಯೊಂದಿಗೆ 1958ರಲ್ಲಿ ವೃತ್ತ ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ್ದರು. 25 ಸಾವಿರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ನಂತರದ ದಿನಗಳಲ್ಲಿಯೂ ವೃತ್ತದ ಅಭಿವೃದ್ಧಿಗೆ ಅನುದಾನ ಒದಗಿಸುತ್ತಿದ್ದರು.  ಸಾರ್ವಜನಿಕರಿಗೆ ವೃತ್ತದ ಮಾಹಿತಿ ಸಿಗುವ ಆಶಯದಿಂದ ನಾಮಫಲಕ ಅನಾವರಣ ಕೈಗೊಳ್ಳಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟಿ ಸೀನಪ್ಪ ಶೆಟ್ಟಿ ವೃತ್ತ ಆಗಿದ್ದರೂ ಬಹುತೇಕ ಸಂದರ್ಭಗಳಲ್ಲಿ ಗೋಪಿ ವೃತ್ತ ಎಂದೇ ಬಳಕೆ ಆಗುತ್ತಿತ್ತು. ಮುಂದಿನ ದಿನಗಳಲ್ಲಿ ಆದರೂ ವೃತ್ತವು ಟಿ ಸೀನಪ್ಪ ಶೆಟ್ಟಿ ವೃತ್ತ ಎಂದು ಕರೆಯಲ್ಪಡಬೇಕು ಎಂಬುದು ಕುಟುಂಬ ಸದಸ್ಯರ ಆಶಯ ಆಗಿದೆ. ಸ್ಮಾರ್ಟ್‌ ಸಿಟಿಯು ವೃತ್ತ ಅಭಿವೃದ್ಧಿಪಡಿಸಿದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಶ್ರೀನಿಧಿ ಸಿಲ್ಕ್ಸ್‌ ಮತ್ತು ಟೆಕ್ಸ್‌ ಟೈಲ್ಸ್‌ ಎದುರಿನ ವೃತ್ತದಲ್ಲಿ ಆಗಸ್ಟ್‌ 11 ರಂದು ಬೆಳಗ್ಗೆ 11ಕ್ಕೆ “ಟಿ ಸೀನಪ್ಪ ಶೆಟ್ಟಿ ವೃತ್ತ” ನಾಮಫಲಕ ಅನಾವರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಸಕ ಎಸ್‌.ಎನ್‌.ಚನ್ನಬಸಪ್ಪ ಉದ್ಘಾಟಿಸುವರು. ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು. ಪ್ರಮುಖರಾದ ವೆಂಕಟೇಶಮೂರ್ತಿ, ಸಂದೀಪ್‌, ವಿಶ್ವನಾಥ್‌, ಗುರುಚರಣ್‌, ರಘುನಂದನ್‌ ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!