ಶಿವಮೊಗ್ಗದಲ್ಲಿ ಕ್ಷೇತ್ರಪತಿ ಸಿನಿಮಾ ತಂಡ ಪ್ರಚಾರ, ಆಗಸ್ಟ್‌ 18ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಶಿವಮೊಗ್ಗದಲ್ಲಿ ಕ್ಷೇತ್ರಪತಿ ಸಿನಿಮಾ ತಂಡ ಪ್ರಚಾರ, ಆಗಸ್ಟ್‌ 18ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಶಿವಮೊಗ್ಗ | 12 ಆಗಸ್ಟ್‌ 2023 | ಡಿಜಿ ಮಲೆನಾಡು.ಕಾಂ

ಗುಲ್ಟೂ, ಹೊಂದಿಸಿ ಬರೆಯಿರಿ, ಹೊಯ್ಸಳ ಸಿನಿಮಾಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ನಟ ನವೀನ್‌ ಶಂಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ “ಕ್ಷೇತ್ರಪತಿ” ಸಿನಿಮಾ ತಂಡ ಶಿವಮೊಗ್ಗ ನಗರದ ವಿವಿಧ ಕಾಲೇಜುಗಳಲ್ಲಿ ಪ್ರಚಾರ ನಡೆಸಿತು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಸ್ಟೈಲ್‌ ಡ್ಯಾನ್ಸ್‌ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಕ್ಷೇತ್ರಪತಿ ಸಿನಿಮಾ ತಂಡ ಪ್ರಚಾರ ಕಾರ್ಯ ನಡೆಸಿತು.

Click on below this picture, Like & Follow Facebook Page ” Digi Malenadu “

ನಾಯಕ ನಟ ನವೀನ್‌ ಶಂಕರ್‌ ಮಾತನಾಡಿ, ಕ್ಷೇತ್ರಪತಿ ಸಿನಿಮಾ ಉತ್ತರ ಕರ್ನಾಟಕ ಶೈಲಿಯ ಕಥೆ, ತಂದೆ ಮಗನ ಬಾಂಧವ್ಯ, ರೈತರ ಸಮಸ್ಯೆ ಸೇರಿದಂತೆ ಪ್ರಮುಖ ಅಂಶಗಳನ್ನು ಒಳಗೊಂಡಿದ್ದು, ನಿರೂಪಣೆಯು ರೋಚಕತೆಯಿಂದ ಕೂಡಿರುವಂತೆ ಚಿತ್ರಿಸಲಾಗಿದೆ. ರವಿ ಬಸ್ರೂರ್‌ ಸಂಗೀತವಿದೆ. ಶ್ರೀಕಾಂತ್‌ ಕಟಗಿ ಸಿನಿಮಾ ನಿರ್ದೇಶಿಸಿದ್ದಾರೆ ಎಂದು ತಿಳಿಸಿದರು.

ನಾಯಕ ನಟಿ ಅರ್ಚನಾ ಜೋಯಿಸ್‌ ಮಾತನಾಡಿ, ಪತ್ರಕರ್ತೆ ಭೂಮಿಕಾ ಪಾತ್ರದಲ್ಲಿ ನಟಿಸಿದ್ದು, ಹೊಸ ತಲೆಮಾರಿನ ಪತ್ರಕರ್ತೆಯಾಗಿ ಹೋರಾಟಕ್ಕೆ ಯಾವ ರೀತಿ ಬೆಂಬಲಿಸಬಹುದು ಎಂಬುದರ ಕುರಿತು ನನ್ನ ಪಾತ್ರವಿದೆ. ಅತ್ಯಂತ ಉತ್ತಮವಾಗಿ ಮೂಡಿಬಂದಿರುವ ಸಿನಿಮಾಕ್ಕೆ ಎಲ್ಲ ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕ್ಷೇತ್ರಪತಿ ಸಿನಿಮಾ ಪ್ರಚಾರ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಪ್ರೇಕ್ಷಕರು ನೆಚ್ಚಿನ ನಾಯಕ, ನಾಯಕಿಯ ಜತೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡರು.

ಇದೇ ಸಂದರ್ಭದಲ್ಲಿ ನಟ ನವೀನ್‌ ಶಂಕರ್‌, ನಟಿ ಅರ್ಚನಾ ಜೋಯಿಸ್‌ ಅವರಿಗೆ ಸನ್ಮಾನಿಸಲಾಯಿತು. ಶಶಿಕುಮಾರ್‌, ಹರ್ಷ, ರಾಹುಲ್‌, ರಘು ಗುಂಡ್ಲ, ಚಂದ್ರು, ಅಶ್ವಿನಿ, ಡ್ಯಾನ್ಸ್‌ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!