ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿವೀಕ್ಷಣೆ
ಶಿವಮೊಗ್ಗ | 20 ಆಗಸ್ಟ್ 2023 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಪ್ಯಾಕೇಜ್‌ಗಳಲ್ಲಿ ಆಯ್ದ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಫುಟ್‌ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್‌ವೆನ್ಸಿ, ವೃತ್ತಗಳ ಅಭಿವೃದ್ಧಿ, ಶೌಚಗೃಹಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಸ್ಮಾರ್ಟ್ ಸಿಟಿ ನಿರ್ಮಾಣ ಕಾಮಗಾರಿಗಳನ್ನು ಹಸ್ತಾಂತರಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯು ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಜಂಟಿ ಪರಿವೀಕ್ಷಣೆ ನಡೆಸಲಿದ್ದಾರೆ.
Click on below this picture, Like & Follow Facebook Page ” Digi Malenadu “
ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅಳವಡಿಸಿರುವ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಸಂಬಂಧ ಮೆಸ್ಕಾಂ, ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ವಾರ್ಡ್ ಸದಸ್ಯರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗುತ್ತಿಗೆದಾರರ ಸಮ್ಮುಖದಲ್ಲಿ ಆಗಸ್ಟ್ 22 ರಿಂದ 25ರವರೆಗೆ ಬೆಳಗ್ಗೆ 10.00 ರಿಂದ ಮಧ್ಯಾಹ್ನ 12.00ರವರೆಗೆ ಜಂಟಿ ಸ್ಥಳ ಪರಿಶೀಲನೆ ಸಮೀಕ್ಷೆ ನಡೆಸಲಾಗುತ್ತದೆ.
ಆಗಸ್ಟ್ 22 ರಂದು ದುರ್ಗಿಗುಡಿ, ಸವಾರ್ ಲೈನ್‌ರಸ್ತೆ ದೇವಸ್ಥಾನದ ಹತ್ತಿರ, ಗಾರ್ಡನ್ ಏರಿಯಾ, ಗೌರವ್ ಲಾಡ್ಜ್ ಎದುರು, ಗಾರ್ಡನ್ ಏರಿಯಾ ಸ್ಕ್ರಾಪ್ ಷಾಪ್ ಎದುರು, ಜ್ಯೂಯಲ್ ರಾಕ್ ರಸ್ತೆ, ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಮಿಷನ್ ಕಾಂಪೌಂಡ್, ಖಾಸಗಿ ಬಸ್ ನಿಲ್ದಾಣ ಎದುರು ಪರಿವೀಕ್ಷಣೆ ನಡೆಸಲಾಗುತ್ತದೆ.
ಆಗಸ್ಟ್ 23 ರಂದು ಜೈಲ್‌ರಸ್ತೆ, ಎಎನ್‌ಕೆ ರಸ್ತೆ, ವೆಂಕಟೇಶ್‌ನಗರ, ಗಾಂಧಿನಗರ, ಚೆನ್ನಪ್ಪ ಲೇಔಟ್, ರವೀಂದ್ರನಗರ, ಅಚ್ಯುತರಾವ್ ಲೇಔಟ್, ಗಾಂಧಿನಗರ ಮುಖ್ಯರಸ್ತೆ, ಶರಾವತಿನಗರ, ಹೊಸಮನೆ, ಕುವೆಂಪುರಸ್ತೆ, ಲಾಸ್ಟ್ ಮೈಲ್ ಕನೆಕ್ಟಿವಿಟಿ ಪರಿವೀಕ್ಷಿಸಲಾಗುತ್ತದೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಆಗಸ್ಟ್ 24ರಂದು ಜಯನಗರ, ಬಸವನಗುಡಿ, ವಿನಾಯಕನಗರ, ಹನುಮಂತನಗರ, ಎ.ಎ.ಕಾಲೋನಿ, ಆಗಸ್ಟ್ 25 ರಂದು ಸೋಮಯ್ಯ ಲೇಔಟ್, ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾ, ಕೋಟೆರಸ್ತೆ, ಸಿಎಲ್ ರಾಮಣ್ಣ ರಸ್ತೆ, ಎಸ್‌ಪಿಎಂ ರಸ್ತೆ, ಗುಂಡಪ್ಪ ಶೆಡ್, ಶೇಷಾದ್ರಿಪುರ ಪ್ರದೇಶಗಳಲ್ಲಿ ಪರಿವೀಕ್ಷಣೆ ನಡೆಸಲಾಗುತ್ತದೆ.
ಸಾರ್ವಜನಿಕರು, ಸಂಘಸಂಸ್ಥೆಗಳು ಶಿವಮೊಗ್ಗ ಸ್ಮಾರ್ಟ್ ಸಿಟಿ ನಿರ್ವಹಿಸಿದ ಭೂಗತ ಕೇಬಲ್, ಬೀದಿದೀಪ ಕಂಬಗಳ ಕಾಮಗಾರಿಗಳಿಗೆ ಸಂಬಂಧಿಸಿ ದೂರು, ಸಮಸ್ಯೆ ಇದ್ದಲ್ಲಿ ಲಿಖಿತವಾಗಿ ಅಥವಾ ಪರಿಶೀಲನೆ ದಿನ ಸೂಚಿತ ಸಮಯದಂದು ಸ್ಥಳದಲ್ಲಿ ಹಾಜರಿದ್ದಾಗಲಿ ಪರಿವೀಕ್ಷಣೆಗೆ ಸಹಕರಿಸುವಂತೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/