ಕೆ.ಎ.ದಯಾನಂದ ಐಎಎಸ್ ವಾಚನಾಲಯ ಶೀಘ್ರದಲ್ಲೇ ಆರಂಭ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸೆಪ್ಟೆಂಬರ್ 17ಕ್ಕೆ ಪ್ರವೇಶ ಪರೀಕ್ಷೆ
ಶಿವಮೊಗ್ಗ | 5 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಆಕಾಂಕ್ಷಿಗಳಿಗೆ ನೆರವಾಗುವ ಆಶಯದಿಂದ ಸಮನ್ವಯ ಟ್ರಸ್ಟ್ “ಕೆ.ಎ.ದಯಾನಂದ್ ಐಎಎಸ್” ಹೆಸರಿನಲ್ಲಿ ಉಚಿತ ವಾಚನಾಲಯ” ಅಧ್ಯಯನ ಕೇಂದ್ರ ಆರಂಭಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸೌಲಭ್ಯ ಒದಗಿಸುವ ಸಮನ್ವಯ ಟ್ರಸ್ಟ್‌ನ ವಿಶೇಷ ಪ್ರಯತ್ನ ಇದಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಉಚಿತ ವಾಚನಾಲಯ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, 2023 ರಲ್ಲಿ ಪದವಿ ಪೂರೈಸುತ್ತಿರುವ ಹಾಗೂ ಪದವಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 17 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಗೂಗಲ್ ಫಾರ್ಮ್ ಭರ್ತಿ ಮಾಡಿ https://forms.gle/9nRT3Z9scywNpUYPA ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಳ್ಳಬೇಕು.
Click on below this picture, Like & Follow Facebook Page ” Digi Malenadu “
ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ವಿವರ: ಪರೀಕ್ಷೆಯನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ವಿದ್ಯಾರ್ಥಿ ವೇತನ ಪರೀಕ್ಷೆಯು 100 ಪ್ರಶ್ನೆ ಹಾಗೂ 200 ಅಂಕಗಳನ್ನು ಒಳಗೊಂಡಿರುತ್ತದೆ. ಎಲ್ಲಾ ಪ್ರಶ್ನೆಗಳು ಕಡ್ಡಾಯವಾಗಿರುತ್ತವೆ. ಪ್ರಶ್ನೆ ಪತ್ರಿಕೆಯನ್ನು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ. ಪ್ರತಿ ಪ್ರಶ್ನೆಯು 2 ಅಂಕಗಳನ್ನು ಹೊಂದಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ನೇಯ ಅಂಕಗಳನ್ನು ಅಂದರೆ 0.50 (2 ಅಂಕಗಳಲ್ಲಿ) ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪರೀಕ್ಷೆಯ ಅವಧಿಯು 2 ಗಂಟೆ ಇರಲಿದೆ. ಲಿಖಿತ ಪರೀಕ್ಷೆಯ ಫಲಿತಾಂಶದ ಕಟ್ ಆಫ್ ನಿಗದಿಪಡಿಸುವುದು ಸಮನ್ವಯ ಟ್ರಸ್ಟ್ ವಿವೇಚನೆಗೆ ಒಳಪಟ್ಟಿರುತ್ತದೆ.
ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಮನ್ವಯ ಟ್ರಸ್ಟ್ ಆವರಣದಲ್ಲಿ ಹಾಜರಿರಬೇಕು. ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ವಿದ್ಯಾರ್ಥಿವೇತನ ವಿವರಗಳ ಬಗ್ಗೆ ವೈಯಕ್ತಿಕವಾಗಿ ತಿಳಿಸಲಾಗುತ್ತದೆ. ಸಾಮಾನ್ಯ ಅಧ್ಯಯನ ಪತ್ರಿಕೆ ಪರೀಕ್ಷಾ ಪಠ್ಯಕ್ರಮ ( 200 ಅಂಕಗಳು) : ಭಾರತದ ಇತಿಹಾಸ, ಭಾರತದ ರಾಜಕೀಯ ಮತ್ತು ಸಂವಿಧಾನ, ಭೂಗೋಳ ಶಾಸ್ತ್ರ, ಭಾರತದ ಆರ್ಥಿಕತೆ, ಸಾಮಾನ್ಯ ವಿಜ್ಞಾನ, ಮಾನಸಿಕ ಸಾಮರ್ಥ್ಯ, ಡಿಸೆಂಬರ್ 2022 ರಿಂದ ಆಗಸ್ಟ್ 2023 ರವರೆಗಿನ ಪ್ರಚಲಿತ ವಿದ್ಯಮಾನಗಳು, ಆಕಾಂಕ್ಷಿಗಳ ಸಾಮಾನ್ಯ ಪ್ರಶ್ನೆಗಳು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಉಚಿತ ವಾಚನಾಲಯ ಸೌಲಭ್ಯಕ್ಕೆ ಯಾರನ್ನು ಆಯ್ಕೆ ಮಾಡಲಾಗುತ್ತದೆ?: ಪರೀಕ್ಷೆಯು ಮುಖ್ಯವಾಗಿ ನಾಗರೀಕ ಸೇವಾ ಆಕಾಂಕ್ಷಿಯಾಗಿರುವ ಪ್ರತಿಭಾವಂತ ಮತ್ತು ಕಠಿಣ ಪರಿಶ್ರಮಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯ ವಿಧಾನ : ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಮನ್ವಯ ಟ್ರಸ್ಟ್ ಸಂಸ್ಥೆಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಸಂದರ್ಶನದ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಂತಿಮ ಆಯ್ಕೆಯು ಸಮನ್ವಯ ಟ್ರಸ್ಟ್ ಆಡಳಿತ ಮಂಡಳಿಯ ವಿವೇಚನೆಗೆ ಒಳಪಟ್ಟಿರುತ್ತದೆ.
ಆಫ್‌ಲೈನ್ ಪರೀಕ್ಷೆಗೆ ಹಾಜರಾಗಲು ಪರೀಕ್ಷೆಯ 2 ದಿನಗಳ ಮೊದಲು ನಿಮ್ಮ ನೋಂದಾಯಿತ ಇಮೇಲ್/ಮೊಬೈಲ್‌ಗೆ ಸ್ಥಳ ಮತ್ತು ಪರೀಕ್ಷಾ ಸಮಯವನ್ನು ಕಳುಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮನ್ವಯ ಟ್ರಸ್ಟ್ [email protected] ಸಂಪರ್ಕಿಸಬಹುದಾಗಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/