ಉದ್ಯಮಿಗಳಿಗೆ ಪ್ರೋತ್ಸಾಹಿಸುವ “ಅನ್ವೇಷಣ ಫೋರಂ” ಪೆಸಿಟ್‌ ಕಾಲೇಜಿನಲ್ಲಿ ಉದ್ಘಾಟನೆ ಸೆಪ್ಟೆಂಬರ್‌ 9ಕ್ಕೆ

ಉದ್ಯಮಿಗಳಿಗೆ ಪ್ರೋತ್ಸಾಹಿಸುವ “ಅನ್ವೇಷಣ ಫೋರಂ” ಪೆಸಿಟ್‌ ಕಾಲೇಜಿನಲ್ಲಿ ಉದ್ಘಾಟನೆ ಸೆಪ್ಟೆಂಬರ್‌ 9ಕ್ಕೆ

ಶಿವಮೊಗ್ಗ | 8 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ

ಅನ್ವೇಷಣ ಫೋರಂ ಸಂಸ್ಥೆಯು ಹೊಸದಾಗಿ ಉದ್ಯಮ ಆರಂಭಿಸಲು ಆಲೋಚನೆ ಹೊಂದಿರುವ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ದಿಸೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಉದ್ಯೋಗ ಅವಕಾಶ ಸೃಷ್ಠಿಸುವುದು, ತಂತ್ರಜ್ಞಾನದ ಪ್ರಯೋಜನದಿಂದ ಹೊಸ ಸ್ಟಾರ್ಟ್‌ಅಪ್‌ ಸ್ಥಾಪಿಸಲು ಬೆಂಬಲಿಸುವ ಕಾರ್ಯ ನಡೆಸಲಿದೆ ಎಂದು ಪಿಇಎಸ್‌ ಮ್ಯಾನೇಜಿಂಗ್‌ ಟ್ರಸ್ಟಿ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ಪೆಸಿಟ್‌ ಕಾಲೇಜಿನಲ್ಲಿ ಸೆಪ್ಟೆಂಬರ್‌ 9 ರಂದು ಬೆಳಗ್ಗೆ 10ಕ್ಕೆ ಅನ್ವೇಷಣಾ ಫೋರಂ ಉದ್ಘಾಟನೆಯಾಗಲಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ವಿದ್ಯಾಶಂಕರ್‌ ಎಸ್.‌, ಅಸ್ಸೆಲ್‌ ಸ್ಥಾಪಕ ಪಾಲುದಾರ ಪ್ರಶಾಂತ್‌ ಪ್ರಕಾಶ್‌, ಪಿಇಎಸ್‌ ಟ್ರಸ್ಟಿ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೆಸಿಟ್‌ ಕಾಲೇಜಿನಲ್ಲಿ ಅನ್ವೇಷಣ ಫೋರಂ ಕಾರ್ಯ ನಿರ್ವಹಿಸಲಿದ್ದು, ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವುದು, ಹೊಸ ತಂತ್ರಜ್ಞಾನ, ಮಾರುಕಟ್ಟೆ ಸೌಲಭ್ಯ ಒದಗಿಸುವುದು, ಹೊಸ ಉದ್ಯಮ ಆಕಾಂಕ್ಷಿಗಳಿಗೆ ಸಹಯೋಗ ನೀಡುವುದು ಮುಖ್ಯ ಆಶಯವಾಗಿದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಅನ್ವೇಷಣ ಎಂಡಿ ಸಿ.ಎಂ.ಪಾಟೀಲ್‌ ಮಾತನಾಡಿ, ನೂರಾರು ಸಂಖ್ಯೆಯಲ್ಲಿ ಉದ್ಯಮದಲ್ಲಿ ಆಸಕ್ತಿ ಇರುವ ಆಕಾಂಕ್ಷಿಗಳು ನೋಂದಣಿ ಮಾಡಿದ್ದು, 20ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. 25ಕ್ಕೂ ಹೆಚ್ಚು ಹೂಡಿಕೆದಾರರು ಪಾಲ್ಗೊಳ್ಳಲಿದ್ದಾರೆ. ಹೊಸ  ಉದ್ಯಮ ಆಕಾಂಕ್ಷಿಗಳು ಹಾಗೂ ಹೂಡಿಕೆದಾರರಿಗೆ ವೇದಿಕೆ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಅನ್ವೇಷಣ ನಿರ್ದೇಶಕ ಸುಭಾಷ್‌ ಬಿ.ಆರ್.‌, ಪಿಇಎಸ್‌ ಟ್ರಸ್ಟ್‌ ಆಡಳಿತ ಮುಖ್ಯ ಸಂಯೋಜಕ ಡಾ. ನಾಗರಾಜ್‌ ಆರ್.‌ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!