ಯುವ ಸಮೂಹಕ್ಕೆ ಜೀವನ ಮೌಲ್ಯದ ಶಿಕ್ಷಣ ಅವಶ್ಯಕ

ಯುವ ಸಮೂಹಕ್ಕೆ ಜೀವನ ಮೌಲ್ಯದ ಶಿಕ್ಷಣ ಅವಶ್ಯಕ

ಶಿವಮೊಗ್ಗ | 12 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ

ಜೀವನ ಮೌಲ್ಯಗಳ ಮೂಲಕ ಸಮಸಮಾಜ ನಿರ್ಮಾಣ ಮಾಡುವುದು ಯುವ ಸಮೂಹದ ಗುರಿಯಾಗಬೇಕು ಎಂದು ತುಮಕೂರಿನ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಎಂಬಿಎ ವಿಭಾಗ ಮತ್ತು ಯುಎನ್ಒಡಿಸಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಸುಸ್ಥಿರ ವೈಯುಕ್ತಿಕ ಸಮಗ್ರತೆ ಉತ್ತಮ ಜೀವನ ಮತ್ತು ಆರೋಗ್ಯ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಇತಿಹಾಸದ ಮೌಲ್ಯಗಳನ್ನು ಯುವ ಸಮೂಹ ಅರಿಯಬೇಕು. ಆದರೆ ಇತಿಹಾಸವೇ ಕಣ್ಮರೆಯಾಗುತ್ತಿರುವುದು ವಿಷಾದನೀಯ. ಜೀವನ ಮೌಲ್ಯಗಳಿಂದ ಯುವ ಸಮೂಹ ತನ್ನ ವೈಯುಕ್ತಿಕ ಸಮಗ್ರತೆಯನ್ನು ಸುಸ್ಥಿರಗೊಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ದಕ್ಷಿಣ ಏಷ್ಯಾದ ಯುಎನ್ಒಡಿಸಿ ಸಂವಹನ ಅಧಿಕಾರಿ ಸಮರ್ಥ ಪಾಟಕ್ ಮಾತನಾಡಿ, ಸಮಾಜದ ಉನ್ನತಿಕರಣಕ್ಕೆ ಯುವ ಸಮೂಹ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕಿದೆ. ಸಮಾಜವು ಕೋವಿಡ್, ಡ್ರಗ್ಸ್, ಸೈಬರ್ ಕ್ರೈಮ್ ನಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅಂತಹ ವಾತಾವರಣದಿಂದ ಹೊರಬರುವ ಮೌಲ್ಯಾಧಾರಿತ ನಡೆ ಯುವ ಸಮೂಹದಾಗಬೇಕಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್ .ನಾಗರಾಜ ಮಾತನಾಡಿ, ಸಮಗ್ರ‌ ಚಿಂತನೆಗಳು ಎಂಬುದನ್ನು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲಿ ಅಭಿವೃದ್ಧಿ ಪಡಿಸಿಕೊಂಡು ಹೋಗಬೇಕು ಎಂದು ಹೇಳಿದರು. ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ ಮಾತನಾಡಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಎಂಬಿಎ ವಿಭಾಗದ ನಿರ್ದೇಶಕ ಡಾ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕಿ ಅನುರಾಧ ಉಪಸ್ಥಿತರಿದ್ದರು.

ದೈಹಿಕ ಆರೋಗ್ಯ ಸುಧಾರಣೆ ಕುರಿತು ಜಯಶ್ರೀ ಹಳ್ಳೂರು ಹಾಗೂ ವೈದ್ಯ ಡಾ. ಪಿ.ನಾರಾಯಣ್, ದೀರ್ಘಾವಧಿಯ ಯಶಸ್ಸು ಕುರಿತು ಜಿಲ್ಲಾ ನ್ಯಾಯಾಧೀಶ  ಚಂದನ್, ಭಾವನಾತ್ಮಕ ಯೋಗ ಕ್ಷೇಮ ಕುರಿತು ಕಟೀಲ್ ಅಶೋಕ್ ಪೈ ಕಾಲೇಜಿನ ಕರಣ್ ಹಾಗೂ ಮನೋವೈದ್ಯ ಡಾ.ನವೀನ್ ಆನಂದ್, ಆರೋಗ್ಯಕರ ಸಂಬಂಧ ಕುರಿತು ಸಂಜನಾ ಫರ್ನಾಂಡಿಸ್ ಹಾಗೂ ಡಾ. ಅರ್ಚನಾ ಭಟ್, ಸ್ಥಿತಿಸ್ಥಾಪಕತ್ವ ಕುರಿತು ಅಪೇಕ್ಷಾ ಪ್ರಭು ಹಾಗೂ ಪ್ರೊ. ನ್ಯಾನ್ಸಿ, ನೈತಿಕ ನಿರ್ಧಾರ ಮಾಡುವ ಬಗೆ ಕುರಿತು ವೀರೇಶಾನಂದ ಸ್ವಾಮೀಜಿ ಮಾತನಾಡಿದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!