ಶಿವಮೊಗ್ಗದಲ್ಲಿ ಸೆಪ್ಟೆಂಬರ್ 21ರಂದು ಉದ್ಯಮಶೀಲತಾ ತಿಳುವಳಿಕೆ ತರಬೇತಿ ಶಿಬಿರ, ಸ್ವಯಂ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ
ಶಿವಮೊಗ್ಗ | 19 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ
ಶಿವಮೊಗ್ಗದ ಜನಶಿಕ್ಷಣ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ ಸಿಡಾಕ್ (ಕರ್ನಾಟಕ ಉದ್ಯಮಶೀಲತಾಬಿವೃದ್ದಿ ಕೇಂದ್ರ, ಧಾರವಾಡ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 21 ರಂದು ಒಂದು ದಿನದ ‘ಉದ್ಯಮಶೀಲತಾ ತಿಳುವಳಿಕೆ ತರಬೇತಿ ಶಿಬಿರ’ ಆಯೋಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
Click on below this picture, Like & Follow Facebook Page ” Digi Malenadu “
ಶಿಬಿರದಲ್ಲಿ ಸ್ವಂತ ಉದ್ಯ ಸ್ಥಾಪನೆಗೆ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳಿಂದ ದೊರೆಯುವ ನೆರವು, ಪ್ರೋತ್ಸಾಹ ವಿಷಯ ಕುರಿತು ಮಾಹಿತಿ ನೀಡಲಾಗುವುದು. 18 ವರ್ಷ ವಯಸ್ಸಿನ ಮೇಲ್ಪಟ್ಟು, ಓದಲು, ಬರೆಯಲು ಬರುವ ಅಭ್ಯರ್ಥಿಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಶಿಬಿರದಲ್ಲಿ ಭಾಗವಹಿಸುವವರು 2 ಪಾಸ್‍ಪೋರ್ಟ್ ಅಳತೆ ಫೋಟೊ ಮತ್ತು ಆಧಾರ್ ಕಾರ್ಡ್ ಪ್ರತಿ ತರಬೇಕು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಮಾಹಿತಿಗೆ ಜಂಟಿ ನಿರ್ದೇಶಕ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್, ನೆಹರು ರಸ್ತೆ, ಶಿವಮೊಗ್ಗ ಹಾಗೂ ಸಿಡಾಕ್ ತರಬೇತುದಾರ ಅವಿನಾಶ್ 9164811887 ಸಂಪರ್ಕಿಸಬಹುದಾಗಿದೆ.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/