ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ, ಪೆಟ್ ಶಾಪ್ ನೋಂದಣಿ ಕಡ್ಡಾಯ
ಶಿವಮೊಗ್ಗ | 19 ಸೆಪ್ಟೆಂಬರ್ 2023 | ಡಿಜಿ ಮಲೆನಾಡು.ಕಾಂ
ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾದ ಕಾಲುಬಾಯಿ ರೋಗವನ್ನು ತಡೆಯಲು ದನ, ಎಮ್ಮೆ ಮತ್ತು ಕರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಶಿವಮೊಗ್ಗ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 4ನೇ ಸುತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
Click on below this picture, Like & Follow Facebook Page ” Digi Malenadu “
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ
26-09-2023 ರಿಂದ 25-10-2023 ವರೆಗೆ ಉಚಿತವಾಗಿ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದೆ. ದನ, ಎಮ್ಮೆ ಮತ್ತು ಕರುಗಳಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡುವ ಕಾಲುಬಾಯಿ ರೋಗ ನಿಯಂತ್ರಿಸಿ, ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ರೋಗದ ವಿರುದ್ದ ಲಸಿಕೆ ಹಾಕಿಸುವುದು ಕಡ್ಡಾಯವಾಗಿದೆ. ಲಸಿಕೆದಾರರು ನಿಮ್ಮ ಗ್ರಾಮಕ್ಕೆ, ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕುವರು ಎಂದರು.
ಪೆಟ್ ಶಾಪ್ ನೋಂದಣಿ ಕಡ್ಡಾಯ: ಪ್ರ್ರಿವೆನ್ಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್ (ಪೆಟ್ ಶಾಪ್) ರೂಲ್ಸ್ 2018 ರ ಪ್ರಕಾರ ಶಿವಮೊಗ್ಗ ಜಿಲ್ಲೆಯ ಪೆಟ್ ಶಾಪ್ ಮಾಲೀಕರು ಉದ್ದಿಮೆ ಪರವಾನಗಿ ತೆಗೆದುಕೊಳ್ಳುವ ಮುನ್ನ 5000 ರೂ. ಶುಲ್ಕ ನೀಡಿ ಜಿಲ್ಲಾ ಪ್ರಾಣಿ ದಯಾ ಸಂಘದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಳ್ಳದೇ ಪೆಟ್ ಶಾಪ್ ವಹಿವಾಟು ಮಾಡಿದರೆ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು. ಪ್ರಸ್ತುತ ನೋಂದಣಿಗೆ 15 ಅರ್ಜಿಗಳು ಬಂದಿವೆ. ಈ ಸಂಬಂಧ ಸಮಿತಿ ರಚಿಸಿ ನಿಯಮಾನುಸಾರ ಅನುಮೋದನೆ ನೀಡುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಉಪನಿರ್ದೇಶಕ ಡಾ. ಶಿವಯೋಗಿ ಯಲಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1586 ಗ್ರಾಮಗಳಿದ್ದು, 4ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ 639250 ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 653573 ಸಿರಿಂಜ್‍ಗಳು ಲಭ್ಯವಿದ್ದು ಸರಬರಾಜಾದ ಲಸಿಕೆ ಶೇಖರಿಸಿಡಲು 4 ವಾಕ್ ಇನ್ ಕೂಲರ್ ಮತ್ತು 23 ಐಸ್‍ಲೈನ್ ರೆಫ್ರಿಜರೇಟರ್‍ಗಳಿವೆ ಹಾಗೂ ಒಟ್ಟು 467 ಲಸಿಕಾದಾರರು ಇದ್ದಾರೆ. 3 ನೇ ಲಸಿಕಾ ಅಭಿಯಾನದಲ್ಲಿ 554010 ಜಾನುವಾರುಗಳಿಗೆ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ.95 ಪ್ರಗತಿ ಸಾಧಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಲಸಿಕಾ ಅಭಿಯಾನದ ಮಾಹಿತಿ ವೆಬ್‍ಸೈಟ್ www.ahvs.kar.nic.in ನಲ್ಲಿ ಲಭ್ಯವಿದೆ. ಮಾಹಿತಿಗೆ ಸಮೀಪದ ಪಶಪಾಲನಾ ಇಲಾಖೆಯ ಪಶು ಆಸ್ಪತ್ರೆ ಅಥವಾ ಹಾಲು ಉತ್ಪಾದಕರ ಸಹಕಾ ಸಂಘಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾಲುಬಾಯಿ ರೋಗ ಉಚಿತ ಲಸಿಕಾ ಅಭಿಯಾನದ ಪೊಸ್ಟರ್‍ನ್ನು ಡಿಸಿ ಮತ್ತು ಇತರೆ ಅಧಿಕಾರಿಗಳು ಬಿಡುಗಡೆಗೊಳಿಸಿದರು. ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ವಿವಿಧ ತಾಲ್ಲೂಕುಗಳ ಸಹಾಯಕ ನಿರ್ದೇಶಕರು, ಪಶುವೈದ್ಯರು ಹಾಜರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/