ಅಕ್ಟೋಬರ್ 7ಕ್ಕೆ ಅಜೇಯ ಸಂಸ್ಕೃತಿ ಬಳಗದಿಂದ ಅಭಿನಂದನಾ ಸಮಾರಂಭ, ಕಾವ್ಯ ಸಲ್ಲಾಪ ಗಾನ ಸಂಜೆ

ಅಕ್ಟೋಬರ್ 7ಕ್ಕೆ ಅಜೇಯ ಸಂಸ್ಕೃತಿ ಬಳಗದಿಂದ ಅಭಿನಂದನಾ ಸಮಾರಂಭ, ಕಾವ್ಯ ಸಲ್ಲಾಪ ಗಾನ ಸಂಜೆ

ಶಿವಮೊಗ್ಗ | 5 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಕರ್ನಾಟಕ ಸಾಧಕ ಪ್ರಶಸ್ತಿ ಪುರಸ್ಕೃತ ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡಶೆಟ್ಟಿ ಅವರಿಗೆ ಅಜೇಯ ಸಂಸ್ಕೃತಿ ಬಳಗದಿಂದ ಅಕ್ಟೋಬರ್‌ 7ಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಜೇಯ ಸಂಸ್ಕೃತಿ ಬಳಗದ ಅಧ್ಯಕ್ಷ ಜೋಯಿಸ್‌ ರಾಮಾಚಾರ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

Click on below this picture, Like & Follow Facebook Page ” Digi Malenadu “

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಅಕ್ಟೋಬರ್‌ 7 ರಂದು ಸಂಜೆ 7.30ಕ್ಕೆ ಅಜೇಯ ಸಂಸ್ಕೃತಿ ಬಳಗವು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬಿ.ಸಿ.ನಂಜುಂಡ ಶೆಟ್ಟಿ ಅವರಿಗೆ ಅಭಿನಂದಿಸಲಾಗುವುದು. ಸರ್ಜಿ ಸಮೂಹ ಸಂಸ್ಥೆಯ ಚೇರ್ಮನ್‌ ಡಾ. ಧನಂಜಯ ಸರ್ಜಿ, ಉದ್ಯಮಿ ಎಚ್.ಎಸ್‌.ಶಿವಶಂಕರ್‌ ಪಾಲ್ಗೊಳ್ಳುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿನಯ್‌ ಶಿವಮೊಗ್ಗ ಮಾತನಾಡಿ, ಸಭಾ ಕಾರ್ಯಕ್ರಮಕ್ಕೂ ಮುನ್ನ ಅಕ್ಟೋಬರ್‌ 7ರ ಸಂಜೆ 6ಕ್ಕೆ ಗಾಯನ ಕಲಾವಿದರಿಂದ ಕನ್ನಡ ಕವಿಗಳ ಕಾವ್ಯಾಧಾರಿತ ಚಲನಚಿತ್ರ ಗೀತೆಗಳ ಗಾನ ಸಂಜೆ ಕಾರ್ಯಕ್ರಮ ನಡೆಯಲಿದೆ. ರವಿ, ಮಂಗಳಾ ರವಿ, ಪೃಥ್ವಿ ಗೌಡ ಹಾಗೂ ಪಾರ್ಥ ಚಿರಂತನ್‌ ಗಾನ ಸಂಜೆ ನಡೆಸಿಕೊಡಲಿದ್ದಾರೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಬಳಗದ ಕಾರ್ಯದರ್ಶಿ ಆರ್.ಅಚ್ಚುತ್‌ರಾವ್‌ ಮಾತನಾಡಿ, 2015ರಿಂದ ಅಜೇಯ ಸಂಸ್ಕೃತಿ ಬಳಗವು ಸದ್ವಿಚಾರ ಒಳಗೊಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಅಪರೂಪದ ಕಾವ್ಯಾಧಾರಿತ ಚಲನಚಿತ್ರ ಗೀತೆಗಳ ಗಾನ ಸಂಜೆ ಆಯೋಜಿಸಿದೆ ಎಂದರು. ನಾಗೇಶ್‌, ಚೇತನ್‌, ಕುಮಾರಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!