ಶಿವಮೊಗ್ಗದಲ್ಲಿ ಸ್ವ ಉದ್ಯೋಗ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಶಿವಮೊಗ್ಗದಲ್ಲಿ ಸ್ವ ಉದ್ಯೋಗ ಉಚಿತ ತರಬೇತಿಗೆ  ಅರ್ಜಿ ಆಹ್ವಾನ

ಶಿವಮೊಗ್ಗ | 9 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ತಾಲೂಕಿನ ಹೊಳಲೂರಿನಲ್ಲಿ ಇರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಉಚಿತ ತರಬೇತಿ ಹಮ್ಮಿಕೊಂಡಿದ್ದು, ಆಸಕ್ತಿ ಇರುವ ರೈತರು,  ಕಾರ್ಮಿಕರು, ಯುವಕ ಮತ್ತು ಯುವತಿ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಅಭ್ಯರ್ಥಿಯು 18 ರಿಂದ 45 ವರ್ಷ ವಯೋಮಿತಿ ಇರಬೇಕು. 8ನೇ ತರಗತಿ ಉತ್ತೀರ್ಣರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದ್ದು, ಉಚಿತ ತರಬೇತಿ ಪಡೆದ ನಂತರ ಸ್ವ ಉದ್ಯೋಗ ಪ್ರಾರಂಭ ಮಾಡುವ ಆಸಕ್ತಿ ಹೊಂದಿರಬೇಕು.

Click on below this picture, Like & Follow Facebook Page ” Digi Malenadu “

ತರಬೇತಿ ಅವಧಿಯಲ್ಲಿ ಉಚಿತ ಊಟ ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ತರಬೇತಿ ಮಾಹಿತಿ: * ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ, 10 ದಿನ, ಅಕ್ಟೋಬರ್‌ 9 ರಿಂದ ಆರಂಭ. * ಜೂಟ್ ಬ್ಯಾಗ್ ತಯಾರಿಕೆ, 13 ದಿನ, ಅಕ್ಟೋಬರ್‌ 26ರಿಂದ ಆರಂಭ. * ಕಂಪ್ಯೂಟರ್ ಡೆಸ್ಕ ಟಾಪ್ ಪಬ್ಲಿಶಿಂಗ್, ಡಿಟಿಪಿ, 45 ದಿನ, ಅಕ್ಟೋಬರ್‌ 26ರಿಂದ ಆರಂಭ. * ಕುರಿ ಸಾಕಾಣಿಕೆ, 10 ದಿನ, ಅಕ್ಟೋಬರ್‌ 26 ರಿಂದ ಪ್ರಾರಂಭ. * ವಿದ್ಯುತ್ ಮೋಟರ್ ರಿವೈಂಡಿಗ್ ಮತ್ತು ದುರಸ್ತಿ, 30 ದಿನ, ಅಕೋಬರ್‌ 30 ರಿಂದ ಪ್ರಾರಂಭ.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ: ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು, ಶಿವಮೊಗ್ಗ 577216 ಅಥವಾ

ಮೊಬೈಲ್ ನಂ. 9743429595, 8660062683, 8722384541, 9449371579, 9481955721, 8105378735 ಸಂಪರ್ಕಿಸಬಹುದಾಗಿದೆ.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!