ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳುವುದು ಅವಶ್ಯಕ

ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳುವುದು ಅವಶ್ಯಕ

ಶಿವಮೊಗ್ಗ | 11 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಕಠಿಣ ಪರಿಸ್ಥಿತಿಗಳನ್ನು ಮೀರಿ ನಿಲ್ಲುವ ಆತ್ಮವಿಶ್ವಾಸ ನಿಮ್ಮದಾಗಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಪ್ರಥಮ ವರ್ಷದ ಬಿಸಿಎ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಅನುಭವದಿಂದ ಬದುಕಿನಲ್ಲಿ ನಿಜವಾದ ಪರಿಪಕ್ವತೆ ಸಾಧ್ಯ. ಅಂತಹ ಪರಿಪಕ್ವತೆಯನ್ನು ಪುಸ್ತಕಗಳು ನೀಡಲಾರದು. ಕಠಿಣ ಪರಿಸ್ಥಿತಿಗಳನ್ನು ಒಳಗಾದ ವ್ಯಕ್ತಿ ಸನ್ಮಾನಕ್ಕೆ ನಿಜವಾಗಿಯೂ ಅರ್ಹ. ಅಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ತಿಳಿಸಿದರು.

ಕಲಿಕೆಯಲ್ಲಿ ಯಾರು ದಡ್ಡರಲ್ಲ, ಕಲಿಕೆಯ ಸ್ಥಿತಿ ನಿಧಾನವಾಗಿರುತ್ತದೆ. ಅಂತಹ ಕಲಿಕಾ ಗುಣಮಟ್ಟವನ್ನು ಪೋಷಕರು ಮತ್ತು ಶಿಕ್ಷಕ ವರ್ಗ ಅವಲೋಕಿಸಿ ಕಲಿಕೆಯ ಪ್ರೇರಣಾ ವಿಧಾನಗಳನ್ನು ಕಲಿಸಬೇಕು. ಪದವಿ ಹಂತದಲ್ಲಿ ಗುರಿಯನ್ನು ಸೇರುವ ತವಕ‌ ನಿಮ್ಮದಾಗಬೇಕಿದೆ. ಪೋಷಕರ ಕಷ್ಟಗಳಿಗೆ ಹೆಗಲು ನೀಡುವ ಜವಾಬ್ದಾರಿ ನಿಮ್ಮಲ್ಲಿ ಬರಬೇಕು. ಸಮಾಜಮುಖಿ ಚಿಂತನೆಗಳ ಮನೋಭೂಮಿಕೆ ನಿಮ್ಮದಾಗಬೇಕು ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ತಂದೆ ತಾಯಿಯ ಕೊಡುಗೆ ಎಂದಿಗೂ ಮರೆಯಲಾಗದು. ತಾಯಿ ತನ್ನ ಮಕ್ಕಳಿಗೆ ಆ ಹೊತ್ತಿನ ಅವಶ್ಯಕತೆ ಪೂರೈಸಿದರೆ, ತಂದೆ ನಾಳೆಯ ಅವಶ್ಯಕತೆಗಳನ್ನು ಪೂರೈಸುತ್ತಾರೆ. ಪೋಷಕರು ಹೆಮ್ಮೆ ಪಡುವ ಮಕ್ಕಳಾಗಿ ಬಾಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಆರ್.ಎನ್.ಎಂ ಕಾಲೇಜಿನ ಪ್ರಾಚಾರ್ಯ ಡಾ.ಕೆ‌.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸಂಗೀತ ಪ್ರಾರ್ಥಿಸಿ, ಉಪನ್ಯಾಸಕ ಲಕ್ಷ್ಮಣ್ ಸ್ವಾಗತಿಸಿ, ಡಾ.ಮುಕುಂದ ನಿರೂಪಿಸಿದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!