ಪ್ರವಾಸೋದ್ಯಮಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಅವಕಾಶ, ಮಲ್ನಾಡ್‌ ಶೈರ್‌ ರೆಸಾರ್ಟ್‌ ಲೋಕಾರ್ಪಣೆ

ಪ್ರವಾಸೋದ್ಯಮಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಅವಕಾಶ, ಮಲ್ನಾಡ್‌ ಶೈರ್‌ ರೆಸಾರ್ಟ್‌ ಲೋಕಾರ್ಪಣೆ

ಶಿವಮೊಗ್ಗ | 18 ಅಕ್ಟೋಬರ್ 2023 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ  ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ಪ್ರವಾಸಿ ತಾಣಗಳು, ವಿಮಾನ ನಿಲ್ದಾಣ, ಹೊಟೇಲ್‌, ರೆಸಾರ್ಟ್‌, ಮೂಲ ಸೌಕರ್ಯ ಲಭ್ಯತೆ ಎಲ್ಲವೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರಿಯ ವಿದ್ಯಾಲಯ ಸಮೀಪದಲ್ಲಿ ಡಾ. ಮಲ್ಲೇಶ್‌ ಕನ್ವೆಷನ್‌ ಸೆಂಟರ್‌ ಹಾಗೂ “ಮಲ್ನಾಡ್‌ ಶೈರ್‌ ರೆಸಾರ್ಟ್‌” ಲೋಕಾರ್ಪಣೆಗೊಳಿಸಿ ಮಾತನಾಡಿದರು.

Click on below this picture, Like & Follow Facebook Page ” Digi Malenadu “

ಕರ್ನಾಟಕ ರಾಜ್ಯದಲ್ಲಿ ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸಿದ್ದು, ಪ್ರವಾಸೋದ್ಯಮದ ವಿಶೇಷ ಆಕರ್ಷಣೆ ಹೊಂದಿರುವ ತಾಣಗಳು ರಾಜ್ಯದಲ್ಲಿ ಇರುವುದು ವಿಶೇಷ. ಶಿವಮೊಗ್ಗ ಸಹ ನೈಸರ್ಗಿಕ, ಅರಣ್ಯ, ಪ್ರವಾಸಿ ತಾಣ ಹಾಗೂ ಮೂಲ ಸೌಕರ್ಯ ಹೊಂದಿರುವ ವಿಶೇಷ ಜಿಲ್ಲೆಯಾಗಿದೆ. ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಡಾ. ಮಲ್ಲೇಶ್‌ ಹುಲ್ಲಮನಿ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಶಿವಮೊಗ್ಗ ಜಿಲ್ಲೆ ಜನಮಾನಸದಲ್ಲಿ ನೆಲೆಯೂರಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುವ ಜತೆಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಪ್ರವಾಸೋದ್ಯಮ ಕ್ಷೇತ್ರದ ಅವರ ಕನಸನ್ನು ಕುಟುಂಬದ ಸದಸ್ಯರು ಸಾಕಾರಗೊಳಿಸುತ್ತಿದ್ದಾರೆ ಎಂದರು.

ರೆಸಾರ್ಟ್‌ ಎಂ.ಡಿ. ಡಾ. ಸ್ವರೂಪ್‌ ಮಲ್ಲೇಶ್‌ ಮಾತನಾಡಿ, ನಾಲ್ಕು ದಶಕಗಳ ವೈದ್ಯಕೀಯ ಸೇವೆ ಹಾಗೂ ನಿಸ್ವಾರ್ಥ ಕಾರ್ಯಗಳ ಮೂಲಕ ಡಾ. ಮಲ್ಲೇಶ್‌ ಹುಲ್ಲಮನಿ ಅವರು ಶಿವಮೊಗ್ಗ ಜನರ ಸೇವೆ ಸಲ್ಲಿಸಿದ್ದರು. ಅವರ ಆದರ್ಶ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆ. ಇದೀಗ ಅವರ ಕನಸಿನ ಮಲ್ನಾಡ್‌ ಶೈರ್‌ ರೆಸಾರ್ಟ್‌ ಶುಭಾರಂಭಗೊಂಡಿದೆ ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಡಾ. ಶಶಿಕಲಾ ಮಲ್ಲೇಶ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಶಾಸಕಿ ಶಾರದಾ ಪೂರ್ಯಾನಾಯ್ಕ, ಶಾಸಕ  ಬೇಳೂರು ಗೋಪಾಲಕೃಷ್ಣ, ಬ್ಯಾಂಕ್‌ ಆಫ್‌ ಬರೋಡಾ ಜನರಲ್‌ ಮ್ಯಾನೇಜರ್‌ ಗಾಯತ್ರಿ, ಪಾಲಿಕೆ ಸದಸ್ಯ ಎಚ್‌.ಸಿ.ಯೋಗೀಶ್‌, ಕರಿಬಸವರಾಜ್‌ ಬೆನ್ನೂರು, ರಾಜೇಶ್‌ ರಾವತ್‌, ರಾಮಚಂದ್ರ ರೆಡ್ಡಿ, ಶ್ರೀನಿವಾಸ್‌, ಶಮಾ, ಶ್ರೇಯಾ, ಪ್ರೀಯಾಂಕ, ಭೀಮಸಮುದ್ರ ಮಂಜಣ್ಣ, ಸಮನ್ವಯ ಕಾಶಿ, ಕುಟುಂಬ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!