ಆರೋಗ್ಯ ಜಾಗೃತಿಗೆ ಆದ್ಯತೆ ನೀಡುವುದು ಮುಖ್ಯ

ಆರೋಗ್ಯ ಜಾಗೃತಿಗೆ ಆದ್ಯತೆ ನೀಡುವುದು ಮುಖ್ಯ

ಶಿವಮೊಗ್ಗ | 17 ನವೆಂಬರ್ 2023 | ಡಿಜಿ ಮಲೆನಾಡು.ಕಾಂ

ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಆಗಿದ್ದು, ಆರೋಗ್ಯ ಜಾಗೃತಿಗೆ ಆದ್ಯತೆ ನೀಡಬೇಕು ಎಂದು ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಶಿವಮೊಗ್ಗ ನಗರದ ಸಹ್ಯಾದ್ರಿ ಪ್ರೌಢಶಾಲೆ ಸಭಾಂಗಣದಲ್ಲಿ ಡಾ. ಪವಿತ್ರಾ ಅವರ ಶ್ರೀ ವಿಜಯ ಕಲಾನಿಕೇತನ ವತಿಯಿಂದ ಆಯೋಜಿಸಿದ್ದ ಒಂದು ವಾರದ “ಆನಂದ ಆರೋಗ್ಯ” ವಿಶೇಷ ನೃತ್ಯ ಪ್ರಾತ್ಯಕ್ಷಿಕಾ ಮಾಲಿಕಾ ಉದ್ಘಾಟಿಸಿ ಮಾತನಾಡಿ, . ಮಾನಸಿಕ ಒತ್ತಡ ಮಾಡಿಕೊಳ್ಳದೇ ಆರೋಗ್ಯ ಸದೃಢವಾಗಿಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

Click on below this picture, Like & Follow Facebook Page ” Digi Malenadu “

ವೈದ್ಯೆ ಡಾ. ಪವಿತ್ರಾ ಮಾತನಾಡಿ, ನೃತ್ಯವನ್ನು ಬೆಸೆಯುವುದರ ಮುಖಾಂತರ ಮಕ್ಕಳ ಮನೋವಿಕಾಸಕ್ಕೆ ಒತ್ತು ನೀಡುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಕನ್ನಡ ಕಾವ್ಯಗಳನ್ನು, ಕವಿಗಳನ್ನು, ಕನ್ನಡ ಇತಿಹಾಸ ಸಂಸ್ಕೃತಿ ಪರಂಪರೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಕನ್ನಡ ಸಾಹಿತ್ಯವನ್ನು ಯುವಸಮುದಾಯಕ್ಕೆ ತಲುಪಿಸುವ ಆಶಯ ಹೊಂದಲಾಗಿದೆ ಎಂದರು.

ಜಿಲ್ಲಾದ್ಯಂತ ಕನ್ನಡ ಕಾವ್ಯಗಳನ್ನು ಆಯ್ದ ನೃತ್ಯ ಮಾಲಿಕೆ ಮುಖಾಂತರ ಪ್ರಸ್ತುತ ಪಡಿಸಲಾಗುವುದು. ವಿವಿಧ ಶಾಲೆ, ಸಂಘ ಸಂಸ್ಥೆಗಳಲ್ಲಿ ಒಂದು ವಾರಗಳ ಕಾಲ ಕಾರ್ಯಕ್ರಮ ನಡೆಯಲಿದೆ.

ಶ್ರೀನಿಧಿ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಕೊಳಿಗ ವಾಸಪ್ಪಗೌಡ ಮಾತನಾಡಿ, ಕಲೆ ಹಾಗೂ ವಿದ್ಯೆಗೂ ಪೂರಕ ಸಂಬಂಧ ಇದ್ದು, ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳಿಂದ ತುಂಬಾ ಅನುಕೂಲವಾಗುತ್ತದೆ. ಮಕ್ಕಳ ಮನಸ್ಸು ವಿಕನಸಗೊಳ್ಳುತ್ತದೆ ಎಂದು ಹೇಳಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ವೈದ್ಯೆ ಡಾ. ಪವಿತ್ರಾ ಅವರ ಪ್ರಯತ್ನ ಶ್ಲಾಘನೀಯ. ಮಕ್ಕಳಿಗೆ ನೃತ್ಯದ ಮುಖಾಂತರ ಅತ್ಯಂತ ಪ್ರಮುಖ ವಿಷಯಗಳ ಅರಿವು ಮೂಡುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಆಡಳಿತಾಧಿಕಾರಿ ಟಿ.ಪಿ.ನಾಗರಾಜ್, ಗುರುಮೂರ್ತಿಗೌಡ, ಮುಖ್ಯಶಿಕ್ಷಕ ಕುಮಾರಸ್ವಾಮಿ, ಸಲ್ಮಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!