ಶಿವಮೊಗ್ಗದಿಂದ ತಿರುಪತಿ, ಹೈದರಬಾದ್, ಗೋವಾಗೆ ವಿಮಾನ ಸಂಚಾರ ಸೇವೆ ಆರಂಭ, ವಿಮಾನಗಳ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ
ಶಿವಮೊಗ್ಗ | 21 ನವೆಂಬರ್ 2023 | ಡಿಜಿ ಮಲೆನಾಡು.ಕಾಂ
ಸ್ಟಾರ್ ಏರ್ ಸಂಸ್ಥೆಯು ಶಿವಮೊಗ್ಗ ನಗರದಿಂದ ದೇಶದ ಪ್ರಮುಖ ಸ್ಥಳಗಳಾದ ತಿರುಪತಿ, ಹೈದರಬಾದ್ ಹಾಗೂ ಗೋವಾ ಪ್ರದೇಶಗಳಿಗೆ ನವೆಂಬರ್ 21ರಿಂದ ವಿಮಾನ ಸಂಚಾರ ಸೇವೆ ಆರಂಭಗೊಂಡಿದೆ.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಉಡಾನ್ ಯೋಜನೆಯಡಿ ಮೂರು ಸ್ಥಳಗಳಿಗೆ ವಿಮಾನ ಸಂಚಾರ ಸೇವೆ ಇರಲಿದ್ದು, ವಾರದಲ್ಲಿ ನಾಲ್ಕು ದಿನಗಳ ಕಾಲ ತಿರುಪತಿ, ಹೈದರಬಾದ್ ಹಾಗೂ ಗೋವಾ ಸ್ಥಳಗಳಿಗೆ ಸಂಚಾರ ಸೇವೆ ದೊರಕಲಿದೆ.
Click on below this picture, Like & Follow Facebook Page ” Digi Malenadu “
ಶಿವಮೊಗ್ಗದಿಂದ ಗೋವಾ : ಪ್ರತಿ ಮಂಗಳವಾರ, ಗುರುವಾರ, ಶನಿವಾರ ಮಧ್ಯಾಹ್ನ 1.55ಕ್ಕೆ ನಿರ್ಗಮನ, ಗೋವಾದಿಂದ ಶಿವಮೊಗ್ಗ : ಮಧ್ಯಾಹ್ನ 3.10ಕ್ಕೆ, ಶಿವಮೊಗ್ಗದಿಂದ ಗೋವಾ : ಪ್ರತಿ ಬುಧವಾರ ಬೆಳಗ್ಗೆ 11ಕ್ಕೆ ನಿರ್ಗಮನ, ಗೋವಾದಿಂದ ಶಿವಮೊಗ್ಗ : ಪ್ರತಿ ಬುಧವಾರ ಮಧ್ಯಾಹ್ನ 12.20ಕ್ಕೆ.
ಶಿವಮೊಗ್ಗದಿಂದ ಹೈದರಬಾದ್ : ಪ್ರತಿ ಮಂಗಳವಾರ, ಬುಧವಾರ, ಗುರುವಾರ, ಶನಿವಾರ ಸಂಜೆ 4.30ಕ್ಕೆ ಹೈದರಬಾದ್ ನಿಂದ ಶಿವಮೊಗ್ಗ: ಪ್ರತಿ ಮಂಗಳವಾರ, ಬುಧವಾರ, ಗುರುವಾರ, ಶನಿವಾರ ಬೆಳಗ್ಗೆ 9.30ಕ್ಕೆ.
ಶಿವಮೊಗ್ಗದಿಂದ ತಿರುಪತಿ : ಪ್ರತಿ ಮಂಗಳವಾರ, ಗುರುವಾರ, ಶನಿವಾರ ಬೆಳಗ್ಗೆ 11ಕ್ಕೆ, ತಿರುಪತಿಯಿಂದ ಶಿವಮೊಗ್ಗ : ಮಧ್ಯಾಹ್ನ 12.15ಕ್ಕೆಕ್ಕೆ, ಶಿವಮೊಗ್ಗದಿಂದ ತಿರುಪತಿ : ಪ್ರತಿ ಬುಧವಾರ ಮಧ್ಯಾಹ್ನ 1.40ಕ್ಕೆ, ತಿರುಪತಿಯಿಂದ ಶಿವಮೊಗ್ಗ : ಪ್ರತಿ ಬುಧವಾರ ಮಧ್ಯಾಹ್ನ 3ಕ್ಕೆ.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಶಿವಮೊಗ್ಗ ಬೆಂಗಳೂರು ನಡುವಿನ ವಿಮಾನ ಸಂಚಾರ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ದೇಶದ ಪ್ರಮುಖ ಸ್ಥಳಗಳಿಗೆ ವಿಮಾನ ಸಂಚಾರ ಸೇವೆ ಆರಂಭ ಆಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಶಿವಮೊಗ್ಗ ದೆಹಲಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ವಿಮಾನ ಸೇವೆ ಆರಂಭಗೊಳ್ಳುವ ನೀರಿಕ್ಷೆಯಿದೆ. | ಬಿ.ವೈ.ರಾಘವೇಂದ್ರ, ಲೋಕಸಭೆ ಸದಸ್ಯ, ಶಿವಮೊಗ್ಗ ಕ್ಷೇತ್ರ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್, ಸ್ಟಾರ್ ಏರ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/