ಶಿವಮೊಗ್ಗದಲ್ಲಿ “ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಫ್ಟ್ಸ್” ಉದ್ಘಾಟನೆ ಜನವರಿ 26ಕ್ಕೆ

ಶಿವಮೊಗ್ಗದಲ್ಲಿ “ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಫ್ಟ್ಸ್” ಉದ್ಘಾಟನೆ ಜನವರಿ 26ಕ್ಕೆ

ಶಿವಮೊಗ್ಗ | 24 ಜನವರಿ 2024 | ಡಿಜಿ ಮಲೆನಾಡು.ಕಾಂ

ಕಿಶನ್‌ ಹ್ಯಾಂಡಿಕ್ರಾಫ್ಟ್ಸ್‌ ಸಂಸ್ಥೆಯು 40 ವರ್ಷಗಳಿಂದ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದೀಗ ನಮ್ಮ ಸಂಸ್ಥೆ ವತಿಯಿಂದ ನೂತನವಾಗಿ “ಕಿಶನ್‌ ವರ್ಲ್ಡ್‌ ಆಫ್‌ ಹ್ಯಾಂಡಿಕ್ರಾಫ್ಟ್ಸ್‌” ಉದ್ಘಾಟನೆಗೊಳ್ಳುತ್ತಿದೆ ಎಂದು ಕಿಶನ್‌ ಸಮೂಹ ಸಂಸ್ಥೆಯ ಬಿ.ಆರ್.ಸಂತೋಷ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಕರಕುಶಲ ನೈಪುಣ್ಯತೆ ಹೊಂದಿ ನುರಿತ ಕರಕುಶಲಕರ್ಮಿಗಳಿಂದ ತಯಾರಾದ ನಮ್ಮ ಸಂಸ್ಥೆಯ ಕಲಾಕೃತಿಗಳು ದೇಶ ವಿದೇಶಗಳಿಗೂ ತಲುಪುತ್ತಿವೆ. ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡುವ ಆಶಯದಿಂದ ನೂತನ ಶೋರೂಂ ಆರಂಭಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

“ಕಿಶನ್‌ ವರ್ಲ್ಡ್‌ ಆಫ್‌ ಹ್ಯಾಂಡಿಕ್ರಾಫ್ಟ್ಸ್‌”ನ ಒಂದೇ ಸೂರಿನಡಿಯಲ್ಲಿ ಶ್ರೀಗಂಧದ ಮೇರು ಕೆತ್ತನೆಯ ಕಲಾಕೃತಿಗಳು, ಶಿವನಿ ಮರದ ಉತ್ಕೃಷ್ಟ ವಿಗ್ರಹಗಳು, ಚನ್ನಪಟ್ಟಣ ಗೊಂಬೆಗಳು, ಹಿತ್ತಾಳೆ, ಕಂಚಿನ ಗೃಹಾಲಂಕಾರ ವಸ್ತುಗಳು, ಪೂಜಾ ಮಂಟಪಗಳು, ಪಾರಿತೋಷಕ ಹೀಗೆ ವೈವಿಧ್ಯಮಯ ಹಾಗೂ ಅತ್ಯಾಕರ್ಷಕ ಕಲಾಕೃತಿಗಳ ಸಂಗ್ರಹ ಲಭ್ಯವಿರಲಿದೆ ಎಂದರು.

“ಕಿಶನ್‌ ವರ್ಲ್ಡ್‌ ಆಫ್‌ ಹ್ಯಾಂಡಿಕ್ರಾಫ್ಟ್ಸ್‌” ಜನವರಿ 26ರಂದು ಸಂಜೆ 5ಕ್ಕೆ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸುವರು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ, ಡಿ.ಎಸ್‌.ಅರುಣ್‌, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್‌.ಗೋಪಿನಾಥ್‌, ನೆಹರು ರಸ್ತೆ ವರ್ತಕರ ಸಂಘದ ಅಧ್ಯಕ್ಷ ಬಿ.ಎ.ರಂಗನಾಥ್‌, ಶಾಸಕ ಎಸ್‌.ಎನ್‌.ಚನ್ನಬಸಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಕಿಶನ್‌ ಸಮೂಹ ಸಂಸ್ಥೆಯ ಬಿ.ಆರ್.ಸುಭಾಷ, ರವಿಕಿಶನ್‌ ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!