ಎಸ್.ರುದ್ರೇಗೌಡ ಬದುಕು ಸಾಧನೆ ಕುರಿತ “ದಿ ಐರನ್ ಮ್ಯಾನ್” ಕೃತಿ ಲೋಕಾರ್ಪಣೆ, ಅಮೃತಮಯಿ ಅಭಿನಂದನಾ ಸಮಾರಂಭ ಜನವರಿ 27ಕ್ಕೆ

ಎಸ್.ರುದ್ರೇಗೌಡ ಬದುಕು ಸಾಧನೆ ಕುರಿತ “ದಿ ಐರನ್ ಮ್ಯಾನ್” ಕೃತಿ ಲೋಕಾರ್ಪಣೆ, ಅಮೃತಮಯಿ ಅಭಿನಂದನಾ ಸಮಾರಂಭ ಜನವರಿ 27ಕ್ಕೆ

ಶಿವಮೊಗ್ಗ | 25 ಜನವರಿ 2024 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ಸರ್ಜಿ ಕನ್ವೆನ್‌ಷನ್‌ ಹಾಲ್‌ನಲ್ಲಿ ಜನವರಿ 27ರಂದು ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡರ ಬದುಕು ಸಾಧನೆ ಕುರಿತ “ದಿ ಐರನ್‌ ಮ್ಯಾನ್‌” ಕೃತಿ ಲೋಕಾರ್ಪಣೆ ಹಾಗೂ ಅಮೃತಮಯಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌.ರುದ್ರೇಗೌಡ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಜನವರಿ 27ರ ಸಂಜೆ 5.30ಕ್ಕೆ ಆಯೋಜಿಸಿರುವ ಅಮೃತಮಯಿ ಅಭಿನಂದನಾ ಸಮಾರಂಭವನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಸುಪ್ರೀಂಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಬಿ.ಎಲ್ ಶಂಕರ್, ಕಾಗೋಡು ತಿಮ್ಮಪ್ಪ, ಕೆ.ಎಸ್‌.ಈಶ್ವರಪ್ಪ, ನಾಡೋಜ ಎಸ್‌.ಷಡಾಕ್ಷರಿ, ಆಯನೂರು ಮಂಜುನಾಥ್‌, ಪಟ್ಟಾಭಿರಾಮ್‌, ಬಿ.ಸಿ.ನಂಜುಂಡಶೆಟ್ಟಿ, ಶಾಂತಮ್ಮ ಶಿವಣ್ಣಗೌಡ, ಡಿ.ಎಸ್.ಚಂದ್ರಶೇಖರ್ ಉಪಸ್ಥಿತರಿರುವರು ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ಜನವರಿ 27ರ ಬೆಳಗ್ಗೆ 10.30 ರಿಂದ ಶ್ರಮದಿಂದ ಸಾರ್ಥಕತೆಯೆಡೆಗೆ

ಶೀರ್ಷಿಕೆಯಡಿ ಯುವಕರಿಗೆ ಮಾರ್ಗದರ್ಶಿ ವಿಚಾರಗೋಷ್ಠಿ ನಡೆಯಲಿದೆ. ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌, ಬೆಂಗಳೂರು ಅದಮ್ಯ ಚೇತನ ಫೌಂಡೇಷನ್‌ ತೇಜಸಿನಿ ಅನಂತಕುಮಾರ್‌, ಸಂಪನ್ಮೂಲ ವ್ಯಕ್ತಿ ಬಿ.ಎಸ್.ಗೋವಿಂದ್ ಗೋಷ್ಠಿಯಲ್ಲಿ ಮಾತನಾಡುವರು. ಬೆಂಗಳೂರು ರಮಣಶ್ರೀ ಫೌಂಡೇಷನ್‌ ಅಧ್ಯಕ್ಷ ನಾಡೋಜ ಎಸ್.ಷಡಕ್ಷರಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ವಿವಿಧ ಕ್ಷೇತ್ರಗಳ ಆಯ್ದ ಯುವಜನರೊಂದಿಗೆ ರುದ್ರೇಗೌಡರ ಬದುಕು ಸಾಧನೆ ಕುರಿತು ಅಂತರಂಗ-ಬಹಿರಂಗ ಸಂವಾದ ಕಾರ್ಯಕ್ರಮ ಆಯೋಜಿಸಿದ್ದು, ಪುತ್ರಿ ಚೈತ್ರ ಅರುಣ್ ಸಂವಾದ ನಡೆಸಿಕೊಡುವರು ಎಂದು ಮಾಹಿತಿ ನೀಡಿದರು. ಅಭಿನಂದನಾ ಸಮಿತಿ ಅಧ್ಯಕ್ಷ‌ ಡಿ.ಜಿ. ಬೆನಕಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಎಸ್.ಎಸ್.ಜ್ಯೋತಿಪ್ರಕಾಶ್, ಉದ್ಯಮಿ ಬಾಳೆಕಾಯಿ ಮೋಹನ್, ಸಂತೋಷ ಬಳ್ಳೆಕೇರೆ, ಎನ್‌.ಜೆ.ರಾಜಶೇಖರ್‌, ತಮ್ಮಡಿಹಳ್ಳಿ ನಾಗರಾಜ್‌ ಮತ್ತಿತರರು ಹಾಜರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!