ಶಿವಮೊಗ್ಗ ನಗರದಲ್ಲಿ ಪ್ಲೇಟ್‌ ಬ್ಯಾಂಕ್‌ ಲೋಕಾರ್ಪಣೆ ಜನವರಿ 27ಕ್ಕೆ

ಶಿವಮೊಗ್ಗ ನಗರದಲ್ಲಿ ಪ್ಲೇಟ್‌ ಬ್ಯಾಂಕ್‌ ಲೋಕಾರ್ಪಣೆ ಜನವರಿ 27ಕ್ಕೆ

ಶಿವಮೊಗ್ಗ | 26 ಜನವರಿ 2024 | ಡಿಜಿ ಮಲೆನಾಡು.ಕಾಂ

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ಹಾಗೂ ಎಸ್‌.ರುದ್ರೇಗೌಡ ಅಭಿನಂದನಾ ಸಮಿತಿ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಜನವರಿ 27ರಂದು ಪ್ಲೇಟ್‌ ಬ್ಯಾಂಕ್‌ ಲೋಕಾರ್ಪಣೆ ಆಗಲಿದೆ ಎಂದು ಸೇವಾ ಸಂಘದ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್‌ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಗರದ ಸರ್ಜಿ ಕನ್ವೆನ್‌ಷನ್‌ ಹಾಲ್‌ನಲ್ಲಿ ಜನವರಿ 27ರ ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಮ್ಯ ಚೇತನ ಫೌಂಡೇಷನ್‌ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್‌ ಲೋಕಾರ್ಪಣೆ ನಡೆಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಓಪನ್‌ ಮೈಂಡ್‌ ವರ್ಲ್ಡ್‌ ಸ್ಕೂಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಕಿರಣಕುಮಾರ್‌ ಮಾತನಾಡಿ, ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್‌, ಪೇಪರ್‌ ಪ್ಲೇಟ್‌ ಬಳಸದೇ ಸ್ಟಿಲ್‌ ತಟ್ಟೆಗಳನ್ನು ಬಳಸುವುದರಿಂದ ತ್ಯಾಜ್ಯ ಕಡಿಮೆ ಮಾಡಬಹುದಾಗಿದೆ. ಸ್ಟೀಲ್‌ ತಟ್ಟೆ, ಲೋಟಗಳನ್ನು ಸಾರ್ವಜನಿಕರು ಪ್ಲೇಟ್‌ ಬ್ಯಾಂಕ್‌ ಮುಖಾಂತರ ಕಾರ್ಯಕ್ರಮಗಳಿಗೆ ತೆಗೆದುಕೊಂಡು ಹಿಂದಿರುಗಿಸಬಹುದಾಗಿದೆ. ಸೇವೆಯು ಉಚಿತವಾಗಿರುತ್ತದೆ ಎಂದರು.

ಪ್ಲಾಸ್ಟಿಕ್‌, ಪೇಪರ್‌ ತಟ್ಟೆ, ಲೋಟಗಳನ್ನು ಬಳಸುವುದರಿಂದ ತ್ಯಾಜ್ಯ ಉತ್ಪತ್ತಿ ಆಗುತ್ತದೆ. ತ್ಯಾಜ್ಯವು ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷಗಳು ಬೇಕಾಗುತ್ತದೆ. ತ್ಯಾಜ್ಯ ವಿಲೇವಾರಿಯು ದೊಡ್ಡ ಸಮಸ್ಯೆ. ಆದ್ದರಿಂದ ಜನರು ಅರಿವು ಮೂಡಿಸಿಕೊಂಡು ಪ್ಲಾಸ್ಟಿಕ್‌, ಪೇಪರ್‌ ತಟ್ಟೆ, ಲೋಟಗಳನ್ನು ಕಾರ್ಯಕ್ರಮಗಳಲ್ಲಿ ಬಳಸಬಾರದು. ಪರಿಸರ ಸ್ನೇಹಿ ಆಗಿರುವ ಪ್ಲೇಟ್‌ ಬ್ಯಾಂಕ್‌ ಯೋಜನೆಯನ್ನು ಶಿವಮೊಗ್ಗದ ಸಾರ್ವಜನಿಕರು ಹೆಚ್ಚು ಬಳಸಬೇಕು ಎಂದು ತಿಳಿಸಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಎಸ್‌.ರುದ್ರೇಗೌಡ ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ.ಜಿ.ಬೆನಕಪ್ಪ, ಉದ್ಯಮಿ ಬಾಳೆಕಾಯಿ ಮೋಹನ್‌, ಸಂತೋಷ್‌ ಬಳ್ಳೆಕೇರೆ, ರುದ್ರೇಶ್‌, ಮಹಾಲಿಂಗಯ್ಯ ಶಾಸ್ತ್ರಿ, ಅನಿತಾ ರವಿಶಂಕರ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!