ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮ, ನೋವುರಹಿತ ಕಿಮೋಥೆರಪಿ ಚಿಕಿತ್ಸೆ

ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮ, ನೋವುರಹಿತ ಕಿಮೋಥೆರಪಿ ಚಿಕಿತ್ಸೆ

ಶಿವಮೊಗ್ಗ | 2 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ

ಕ್ಯಾನ್ಸರ್‌ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣಮುಖರಾಗಿಸಲು ಸಾಧ್ಯವಿದ್ದು, ಆಧುನಿಕ ವ್ಯವಸ್ಥೆಯಲ್ಲಿ ಕ್ಯಾನ್ಸರ್‌ ರೋಗಿಗಳಿಗೆ “ಪಿಕ್‌ಲೈನ್‌” ಕಾರ್ಯ ವಿಧಾನದ ಮೂಲಕ ನೋವುರಹಿತ ಕಿಮೋಥೆರಪಿ ಚಿಕಿತ್ಸೆ ನೀಡಬಹುದಾಗಿದೆ ಎಂದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯೆ ಡಾ. ಅಪರ್ಣ ಶ್ರೀವತ್ಸ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಕಿಮೋಥೆರಪಿಯಿಂದ ಅನೇಕ ಕ್ಯಾನ್ಸರ್‌ಗಳನ್ನು ಗುಣಪಡಿಸಲು ಸಾಧ್ಯವಿದ್ದು , ಇತರೆ ತೊಂದರೆ ಸಹ ಉಂಟಾಗುತ್ತವೆ. ಇಂತಹ ತೊಂದರೆ ತಡೆಗಟ್ಟಲು ಕಿಮೋಥೆರಪಿಯನ್ನು ಸರಿಯಾಗಿ ಮತ್ತು ನೋವಿಲ್ಲದೇ ಕೊಡಲು “ಪಿಕ್‌ಲೈನ್‌” ಕ್ಯಾನ್ಸರ್‌ ರೋಗಿಗಳಿಗೆ ಲೈಫ್‌ಲೈನ್‌ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಪಿಕ್‌ಲೈನ್‌ ಚಿಕಿತ್ಸೆಯಿಂದ ನೋವು ಇಲ್ಲದೇ ಕಿಮೋಥೆರಪಿ ಮಾಡಬಹುದು. ರಕ್ತನಾಳಗಳ ಹಾನಿಯನ್ನು ತಡೆಗಟ್ಟಬಹುದಾಗಿದೆ. ರಕ್ತ ಪರೀಕ್ಷೆಗಳಿಗೆ ರಕ್ತವನ್ನು ನೋವಿಲ್ಲದೇ ತೆಗೆಯಬಹುದು. ಪಿಕ್‌ಲೈನ್‌ ಅಳವಡಿಸಲು ಆಪರೇಷನ್‌ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಫೆಬ್ರವರಿ 5 ರಿಂದ 10ವರೆಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಜಾಗೃತಿ ಮೂಡಿಸಲಾಗುವುದು. ಜೀವನಶೈಲಿ, ಯೋಗ, ವ್ಯಾಯಾಮ, ಆಹಾರ ಪದ್ಧತಿ, ಶಸ್ತ್ರಚಿಕಿತ್ಸೆಯ ಕುರಿತು ಮಾಹಿತಿ ನೀಡಲಾಗುವುದು ಎಂದರು. ಆಸ್ಪತ್ರೆಯ ಡಾ. ವಿವೇಕ.ಎಂ.ಎ., ಡಾ. ರವಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!