ಶಿವಮೊಗ್ಗದಲ್ಲಿ ಬಂಟರ ಭವನ ಲೋಕಾರ್ಪಣೆ ಫೆಬ್ರವರಿ 10ಕ್ಕೆ

ಶಿವಮೊಗ್ಗದಲ್ಲಿ ಬಂಟರ ಭವನ ಲೋಕಾರ್ಪಣೆ ಫೆಬ್ರವರಿ 10ಕ್ಕೆ

ಶಿವಮೊಗ್ಗ | 8 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ

ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ ಬಂಟರ ಯಾನೆ ನಾಡವರ ಸಂಘದಿಂದ ನಿರ್ಮಾಣಗೊಂಡಿರುವ ನೂತನ “ಶಿವಮೊಗ್ಗ ಬಂಟರ ಭವನ” ಲೋಕಾರ್ಪಣೆಯು ಫೆಬ್ರವರಿ 10ರಂದು ನಡೆಯಲಿದೆ ಎಂದು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಡಾ. ಸತೀಶ್‌ ಕುಮಾರ ಶೆಟ್ಟಿ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ನಮ್ಮ ಸಂಘದ ವತಿಯಿಂದ 10 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಭವನ ನಿರ್ಮಾಣ ಮಾಡಿದ್ದು, ಭವನದ ವಾರ್ಷಿಕ ಆದಾಯದಲ್ಲಿ ಶೇ. 10ರಷ್ಟು ಹಣವನ್ನು ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳ ವಿದ್ಯಾಭ್ಯಾಸ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸಲು ಅಲೋಚನೆ ನಡೆಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Click on below this picture, Like & Follow Facebook Page ” Digi Malenadu “

ಫೆಬ್ರವರಿ 10ರ ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮುದಾಯ ಭವನದ ಉದ್ಘಾಟನೆ ನೆರವೇರಿಸುವರು. ಸಚಿವ ಮಧು ಬಂಗಾರಪ್ಪ, ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಎಂಆರ್‌ಜಿ ಗ್ರೂಪ್‌ ಚೇರ್ಮನ್‌ ಕೆ.ಪ್ರಕಾಶ್‌ ಶೆಟ್ಟಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ ಶೆಟ್ಟಿ ಗಂಟಿಹೊಳೆ, ಹರೀಶ್‌ ಪೂಂಜಾ, ಅಶೋಕ್‌ ಪೈ,  ವಿಧಾನ ಪರಿಷತ್‌ ಶಾಸಕ ಮಂಜುನಾಥ ಭಂಡಾರಿ, ಡಿ.ಎಸ್‌.ಅರುಣ್‌, ಎಸ್‌.ರುದ್ರೇಗೌಡ, ಭಾರತಿ ಶೆಟ್ಟಿ, ಪ್ರಮುಖರಾದ ಕಿಶೋರಕುಮಾರ್‌ ಹೆಗ್ಡೆ, ಮಂಡಗದ್ದೆ ಅಡ್ಡಮನೆ ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿರುವರು ಎಂದರು.

ಎಲ್ಲರಿಗಾಗಿ ತಾನು, ತನಗಾಗಿ ಎಲ್ಲರೂ ಘೋಷವಾಕ್ಯದೊಂದಿಗೆ ಸಂಘ ಮುನ್ನಡೆಯುತ್ತಿದ್ದು, ಶಿವಮೊಗ್ಗದಲ್ಲಿ ನೆಲೆಸಿರುವ ಸಮುದಾಯದ ಹೆಚ್ಚಿನ ಜನರು ಹೊಟೇಲ್‌ ಉದ್ಯಮ, ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೂ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಶಿಬಿರ, ಸಾಧಕರಿಗೆ ಪುರಸ್ಕಾರ ಹೀಗೆ ಹತ್ತು ಹಲವು ವೈವಿಧ್ಯ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಪ್ರಮುಖರಾದ ರಾಜಮೋಹನ್‌ ಹೆಗ್ಡೆ, ರಾಜೀವ್‌ ಶೆಟ್ಟಿ, ಎಂ.ಕೆ.ಸುರೇಶಕುಮಾರ್‌, ಡಾ. ವೈ.ವಿ.ಶೆಟ್ಟಿ, ಸುರೇಶ್‌ ಶೆಟ್ಟಿ, ದಿವಾಕರ್‌ ಶೆಟ್ಟಿ, ಪುಷ್ಪಾ ಎಸ್.ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ವಿವಿಧ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!