ಫೌಂಡ್ರಿ ಉದ್ಯಮದ ಬೆಳವಣಿಗೆಯಲ್ಲಿ ಐಐಎಫ್ ಪಾತ್ರ ಮಹತ್ತರ
ಶಿವಮೊಗ್ಗ | 14 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ
ಫೌಂಡ್ರಿ ಉದ್ಯಮದ ಬೆಳವಣಿಗೆಯಲ್ಲಿ ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಮಹತ್ತರ ಪಾತ್ರ ವಹಿಸಿದೆ ಎಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್ ಪೇಜ್ ಲೈಕ್ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್ ಗ್ರೂಪ್ ಸೇರಲು ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಐಐಎಫ್ ವತಿಯಿಂದ ಆಯೋಜಿಸಿದ್ದ 72 ನೇ ಇಂಡಿಯನ್ ಫೌಂಡ್ರಿ ಸಮ್ಮೇಳನ ಮತ್ತು ಅಂತರಾಷ್ಟ್ರೀಯ ಫೌಂಡ್ರಿ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು.
Click on below this picture, Like & Follow Facebook Page ” Digi Malenadu “
ಸರ್ಕಾರಿ ಸಂಸ್ಥೆಗಳೊಂದಿಗೆ ಉದ್ಯಮಕ್ಕೆ ಬೇಕಾದಂತಹ ಸವಲತ್ತುಗಳ ಬಗ್ಗೆ ಗಮನ ಸೆಳೆಯುವುದು ಹಾಗೂ ಕೈಗಾರಿಕೆಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳು ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಐಐಎಫ್ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.
ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಸ್ವಾಯತ್ತ ಸಂಸ್ಥೆ ಆಗಿದ್ದು, ಕೋಲ್ಕತ್ತಾ ನಗರದಲ್ಲಿ ಮುಖ್ಯ ಕಚೇರಿ ಇದೆ. ಸಂಸ್ಥೆಯು 4 ವಲಯ, 3 ಶ್ರೇಷ್ಠತಾ ಘಟಕ ಹಾಗೂ 24 ಶಾಖೆಗಳನ್ನು ದೇಶಾದ್ಯಂತ ಹೊಂದಿದೆ. “ಅವಕಾಶಗಳನ್ನು ಅನಾವರಣಗೊಳಿಸುವುದು” ಎಂಬ ಘೋಷವಾಕ್ಯದೊಂದಿಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶ ವಿದೇಶಗಳಿಂದ 1500 ಕ್ಕೂ ಹೆಚ್ಚು ನೊಂದಾಯಿತ ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಸಂದರ್ಶಕರು ಭಾಗವಹಿಸಿದ್ದರು. 350 ಪ್ರದರ್ಶಕರು ಉತ್ಪನ್ನಗಳನ್ನು ಪ್ರದರ್ಶಿಸಲು ಮಳಿಗೆಗಳನ್ನು ಪಡೆದಿದ್ದರು. ಅಂತರರಾಷ್ಟ್ರೀಯ ಗುಣಮಟ್ಟದ ಮಳಿಗೆಗಳನ್ನು ತಯಾರಿಸಿದ್ದ ಪ್ರದರ್ಶಕರು ಉತ್ಪನ್ನಗಳನ್ನು ಪ್ರದರ್ಶಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ತಾಂತ್ರಿಕ ಅಧಿವೇಶನ, ಮಾರಾಟಗಾರರ ಭೇಟಿ ಕಾರ್ಯಕ್ರಮ, ಸಂವಾದ, ಹೊಸ ತಾಂತ್ರಿಕತೆಯ ಅನಾವರಣ, ಯುವ ಉದ್ಯಮಿಗಳೊಂದಿಗೆ ಮಾತುಕತೆ, ವಿಜಯ ಪ್ರಕಾಶ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಡಿಜಿ ಮಲೆನಾಡು.ಕಾಂ | ಇ-ಮೇಲ್ : [email protected]
ಒಲ್ವೋ ಸಂಸ್ಥೆ ಮುಖ್ಯಸ್ಥ ಗಿರೀಶ್.ಡಿ.ಎಂ, ಆಟೋಮೊಟೀವ್ ಆಕ್ಸೆಲ್ ಲಿಮಿಟೆಡ್ ಸಂಸ್ಥೆ ಮುಖ್ಯ ನಿರ್ವಾಹಕ ಅಧಿಕಾರಿ ಮುತ್ತು ಕುಮಾರ್.ಎನ್, ಫ್ಲೋಸರ್ವ್ ಸಂಸ್ಥೆ ಜಾಗತಿಕ ವರ್ಗದ ನಿರ್ದೆಶಕ ಶ್ರೀರಾಂ ಸತೀಶ್, ಐಐಎಫ್ ರಾಷ್ಟ್ರೀಯ ಗೌರವ ಕಾರ್ಯದರ್ಶಿ ಮುತ್ತು ಕುಮಾರ್.ಎಸ್, ಸಂಘಟನಾ ಸಮಿತಿಯ ಅಧ್ಯಕ್ಷ ರುದ್ರೇಗೌಡ.ಎಸ್, ಮಾರ್ಗದರ್ಶಕ ಎಸ್.ಆರ್.ವಿ.ರಮಣನ್, ಉಪಾಧ್ಯಕ್ಷ ಸಂಜಯ್ ಶ್ರಾಫ್, ಸಿದ್ದರಾಜು.ಸಿ, ಬೆನಕಪ್ಪ.ಡಿ.ಜಿ, ಗೌರವ ಕಾರ್ಯದರ್ಶಿ ಅಂಕಿತ್.ಎಸ್.ದಿವೇಕರ್, ವಿಶ್ಲೇಶ್ ರಮಣನ್, ಉಪಕಾರ್ಯದರ್ಶಿ ಗೋಪಾಲ್.ಎನ್, ರಾಘವೇಂದ್ರ.ಎಂ.ವಿ, ಗೌರವ ಖಜಾಂಚಿ ಕುಪ್ಪುಸಾಮಿ.ಎಸ್, ಐಫೆಕ್ಸ್ 2024 ಅಧ್ಯಕ್ಷ ಯೋಗೀಶ್‌ಕುಮಾರ್ ಹಾಗೂ ಉಪಾಧ್ಯಕ್ಷ ಮಹಾವೀರ್ ಜೈನ್, ಉಪ ಸಮಿತಿಯ ಎಲ್ಲಾ ಸದಸ್ಯರು, ಐಐಎಫ್ ಶಿವಮೊಗ್ಗ ಶಾಖೆಯ ಅಧ್ಯಕ್ಷ ಪರಮಶೇಖರ್ ಟಿ ಎನ್, ನಂಜುಂಡೇಶ್ವರ.ಎಚ್.ಬಿ, ಆಡಳಿತ ಪರಿಷತ್ ಎಲ್ಲಾ ಸದಸ್ಯರು, ಕಾರ್ಯಕ್ರಮದ ಪ್ರಾಯೋಜಕರು ಭಾಗವಹಿಸಿದ್ದರು.
ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿರಿ https://chat.whatsapp.com/HH6rBBWfYwcGOOW3vBAtzi
ಫೇಸ್ ಬುಕ್ : www.facebook.com/digimalenadu
ಟ್ವಿಟರ್ : www.twitter.com/DMalenadu
ಇನ್ಸ್ಟಾಗ್ರಾಮ್: www.instagram.com/digimalenadu
ನಮ್ಮ ಬಗ್ಗೆ : https://digimalenadu.com/about-us/