ಚಾರಣ ಪ್ರವಾಸದಿಂದ ಮನೋಲ್ಲಾಸ ವೃದ್ಧಿ

ಚಾರಣ ಪ್ರವಾಸದಿಂದ ಮನೋಲ್ಲಾಸ ವೃದ್ಧಿ

ಶಿವಮೊಗ್ಗ | 15 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ

ಪ್ರಕೃತಿಯೊಂದಿಗೆ ಬೆರೆತು ನಡೆದಾಡುವ ಚಾರಣ ಬದುಕಿನಲ್ಲಿ ವಿಶೇಷ ಅನುಭವ ನೀಡುತ್ತದೆ. ಮಳೆ, ನದಿ, ತೊರೆ, ಕಾಡುಗಳಲ್ಲಿ ನಡೆಸುವ ಚಾರಣಗಳಲ್ಲಿ ಭಾಗವಹಿಸಬೇಕು ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕ ಕಾರ್ಯದರ್ಶಿ ಸುರೇಶಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಯೂತ್ ಹಾಸ್ಟೆಲ್ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ದಿಡುಪೆ ಕಾರಿಂಜೇಶ್ವರ ಚಾರಣ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ಚಾರಣದಲ್ಲಿ ಭಾಗವಹಿಸುವುದರಿಂದ ಮನೋಲ್ಲಾಸ ಲಭಿಸುತ್ತದೆ ಎಂದು ತಿಳಿಸಿದರು.

Click on below this picture, Like & Follow Facebook Page ” Digi Malenadu “

ಜೀವನವೇ ಒಂದು ಜಂಜಾಟ, ಅದರಿಂದ ಹೊರ ಬಂದು ಪ್ರಕೃತಿಯಲ್ಲಿ ಬೆರೆತು ಚಾರಣ ಮಾಡಿದಾಗ ಮನಕ್ಕೆ ಉಲ್ಲಾಸ ದೊರಕುತ್ತದೆ. ರಾಜ್ಯದಲ್ಲಿ ಇರುವ ವೈವಿಧ್ಯಮಯ ಪ್ರಾಕೃತಿಕ ತಾಣಗಳನ್ನು ಪ್ರವಾಸಿಗರು ಭೇಟಿ ನೀಡಬೇಕು. ಸ್ಥಳೀಯ ಪ್ರವಾಸಿ ತಾಣಗಳೇ ಅತ್ಯಂತ ವಿಶೇಷತೆಗಳಿಂದ ಕೂಡಿದೆ ಎಂದರು.

ಕುಟುಂಬದವರೊಂದಿಗೆ ಪ್ರವಾಸ ಹೊರಡುವುದು ಒಂದು ತರವಾದರೆ, ಸ್ನೇಹಿತರೋಂದಿಗೆ ಚಾರಣ ಮಾಡುವ ಖುಷಿ ಅಮೋಘವಾದದ್ದು, ಇದರಿಂದ ಆರೋಗ್ಯ ವೃದ್ಧಿ ಹೊಂದುವುದರೊಂದಿಗೆ ಹೊಸ ಸ್ನೇಹ ಸಂಪಾದನೆ ಸಾಧ್ಯ. ಈ ನಿಟ್ಟಿನಲ್ಲಿ ತರುಣೋದಯ ಘಟಕ ಹಲವಾರು ಚಾರಣವನ್ನು ನಡೆಸುತ್ತಿದ್ದು, ಮೇ ತಿಂಗಳಲ್ಲಿ ಹಿಮಾಲಯ ಚಾರಣ ಏರ್ಪಡಿಸಲಾಗಿದೆ ಎಂದರು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ಪ್ರವಾಸದ ಆಸಕ್ತಿ ಇರುವ ಚಾರಣಿಗರು ಚೇರ್ಮನ್ ವಾಗೇಶ್. ಎಸ್. ಎಸ್. 9844809533 ಇವರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.

ಯೂತ್ ಹಾಸ್ಟೆಲ್ ರಾಜ್ಯ ಮಾಜಿ ಉಪಾಧ್ಯಕ್ಷ ಜಿ. ವಿಜಯಕುಮಾರ್, ಮಲ್ಲಿಕಾರ್ಜುನ ಕಾನೂರ್, ಭಾರತಿ ಗುರುಪಾದಪ್ಪ, ರಾಜು, ರಾಜು, ದಾನಮ್ಮ, ನಾಗಭೂಷಣ, ಪ್ರಸಾದ್, ಶಶಾಂಕ್, ದಿವ್ಯ ಮುಂತಾದವರು ಇದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!