ಶಿವಮೊಗ್ಗದ ಶಿವಗಂಗಾ ಯೋಗಕೇಂದ್ರದಲ್ಲಿ ರಥಸಪ್ತಮಿ ಸಂಭ್ರಮ

ಶಿವಮೊಗ್ಗದ ಶಿವಗಂಗಾ ಯೋಗಕೇಂದ್ರದಲ್ಲಿ ರಥಸಪ್ತಮಿ ಸಂಭ್ರಮ

ಶಿವಮೊಗ್ಗ | 16 ಫೆಬ್ರವರಿ 2024 | ಡಿಜಿ ಮಲೆನಾಡು.ಕಾಂ

ವಿಶ್ವದಲ್ಲಿ ಶಾಂತಿ ಆರೋಗ್ಯ ನೆಮ್ಮದಿ ನೆಲೆಸಲು ಎಲ್ಲರೂ ನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ಶ್ರೀ ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ಓದಲು ಡಿಜಿ ಮಲೆನಾಡು ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ: www.facebook.com/digimalenadu ಹಾಗೂ ಡಿಜಿ ಮಲೆನಾಡು ವಾಟ್ಸಪ್‌ ಗ್ರೂಪ್‌ ಸೇರಲು ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ರಥಸಪ್ತಮಿ ಪ್ರಯುಕ್ತ ಶಿವಮೊಗ್ಗ ನಗರದ ಕಲ್ಲಹಳ್ಳಿಯ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಸ್ಥಾಪಿಸಿರುವ ಆದಿಯೋಗಿ ಶಿವನ ಮೂರ್ತಿಗೆ ಪೂಜೆ ಹಾಗೂ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲಾ ದೇಶಗಳನ್ನು ಒಂದುಗೂಡಿಸುವ ಶಕ್ತಿ ಯೋಗಕ್ಕಿದೆ. ಯೋಗದ ಮೂಲಕ ಭಾರತ ವಿಶ್ವಗುರು ಆಗಲಿದೆ ಎಂದು ತಿಳಿಸಿದರು.

Click on below this picture, Like & Follow Facebook Page ” Digi Malenadu “

ಯೋಗ ಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ಉದ್ಯಮ, ಉದ್ಯೋಗದಲ್ಲಿ ಅನೇಕ ರೀತಿಯ ಒತ್ತಡಗಳು ಇರುತ್ತವೆ. ನಿತ್ಯ ಯೋಗ ಪ್ರಾಣಾಯಾಮ ಧ್ಯಾನವನ್ನು ದೈನಂದಿನ ಅಭ್ಯಾಸ ಮಾಡುವುದರಿಂದ ಅವುಗಳನ್ನೆಲ್ಲ ಸಮಸ್ಥಿತಿಯಿಂದ ನಿಭಾಯಿಸಬಹುದು ಎಂದರು.

ಯೋಗ ಶಿಕ್ಷಣಾರ್ಥಿಗಳು ಅಖಂಡ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಭಾಗಿಯಾಗಿದ್ದರು. ಸಂಸ್ಕೃತ ಉಪನ್ಯಾಸಕ ವಿದ್ವಾನ್ ದಾರಕೇಶ್ವರ ಶಾಸ್ತ್ರೀ ಅವರಿಂದ ಪೂಜೆ ಮತ್ತು ರುದ್ರಾಭಿಷೇಕ ನೆರವೇರಿತು. ಶಿವನಾಮ ಸ್ಮರಣೆ ಮತ್ತು ಭಜನೆ ಏರ್ಪಡಿಸಲಾಗಿತ್ತು. ಪೂಜಾ ಪ್ರಸಾದ ವಿತರಿಸಲಾಯಿತು.

ಡಿಜಿ ಮಲೆನಾಡು.ಕಾಂ | ಇ-ಮೇಲ್‌ : [email protected]

ರಥಸಪ್ತಮಿ ಆಚರಣೆ ಮತ್ತು ವಿಶೇಷತೆ ಕುರಿತು ಉಪನ್ಯಾಸಕಿ ಪದ್ಮ ಮಾತನಾಡಿದರು. ಜಿ. ಎಸ್. ಓಂಕಾರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಹೂವಯ್ಯಗೌಡ, ಹರೀಶ್.ಹೆಚ್.ಕೆ, ಜಿ.ವಿಜಯಕುಮಾರ್, ಲವಕುಮಾರ್, ಬಸವರಾಜ್ ಎಲ್.ಎಚ್, ಆನಂದ, ವಿಜಯ ಬಾಯರ್ ಉಪಸ್ಥಿತರಿದ್ದರು. ಯೋಗ ಶಿಕ್ಷಣಾರ್ಥಿಗಳು ಮತ್ತು ಭಕ್ತರು ಅತ್ಯಂತ ಸಂಭ್ರಮದಿಂದ ಭಾಗವಹಿಸಿದ್ದರು.

ವಾಟ್ಸಪ್‌ ಗ್ರೂಪ್‌ ಸೇರಲು ಕೆಳಗಿನ ಲಿಂಕ್ ಕ್ಲಿಕ್‌ ಮಾಡಿ ಜಾಯಿನ್‌ ಆಗಿರಿ https://chat.whatsapp.com/HH6rBBWfYwcGOOW3vBAtzi

ಫೇಸ್‌ ಬುಕ್‌ : www.facebook.com/digimalenadu

ಟ್ವಿಟರ್ : www.twitter.com/DMalenadu

ಇನ್ಸ್ಟಾಗ್ರಾಮ್: www.instagram.com/digimalenadu

ನಮ್ಮ ಬಗ್ಗೆ : https://digimalenadu.com/about-us/

digimalenadu

ಶಿವಮೊಗ್ಗ
error: Content is protected !!